Tuesday, October 20, 2020
Tuesday, October 20, 2020

Latest Posts

ಬೆಳ್ತಂಗಡಿ| ಚಿರತೆ ದಾಳಿಗೆ ಹಸು ಬಲಿ: ಸೆರೆ ಹಿಡಿಯುವಂತೆ ಗ್ರಾಮಸ್ಥರ ಒತ್ತಾಯ

ಬೆಳ್ತಂಗಡಿ: ತಾಲ್ಲೂಕಿನ ಮರೋಡಿ ಗ್ರಾಮದ ನಡುಚ್ಚೂರು ಎಂಬಲ್ಲಿ ಚಿರತೆ ದಾಳಿಗೆ ಹಸುವೊಂದು ಸೋಮವಾರ ಬಲಿಯಾಗಿದೆ. ದಿವಾಕರ ಹೆಗ್ಡೆ ಅವರ ಹಸುವಿನ ಮೇಲೆ ದಾಳಿ ಮಾಡಿದ ಚಿರತೆಯು, ಅರ್ಧ ದೇಹವನ್ನು ತಿಂದು ಹಾಕಿದೆ. ಕೆಲ ದಿನಗಳ...

‘ಮಿಷನ್ ಶಕ್ತಿ ’ ಅಭಿಯಾನ: ಉತ್ತರ ಪ್ರದೇಶದಲ್ಲಿ 14 ಮಹಿಳಾ ಪೀಡಕರಿಗೆ ಮರಣದಂಡನೆ ಖಚಿತ

ಲಕ್ನೋ: ಮಹಿಳೆಯರು ಮತ್ತು ಮಕ್ಕಳ ಸುರಕ್ಷೆಯ ಖಾತ್ರಿಗಾಗಿ ‘ಮಿಷನ್ ಶಕ್ತಿ ’ಎಂಬ 9 ತಿಂಗಳ ಅಭಿಯಾನಕ್ಕೆ ಉತ್ತರ ಪ್ರದೇಶ ಬಿಜೆಪಿ ಸರಕಾರ ಚಾಲನೆ ನೀಡಿದೆ. ಹಾಗೆಂದು ,ಮಹಿಳಾ ಸುರಕ್ಷೆ ನಿಟ್ಟಿನಲ್ಲಿ ದೃಢ ಹೆಜ್ಜೆಯನ್ನು...

ಆಯುಧ ಪೂಜೆಗೆ ವಿಧಾನಸೌಧ, ವಿಕಾಸಸೌಧದಲ್ಲಿ ರಾಸಾಯನಿಕಯುಕ್ತ ಬಣ್ಣ ಬಳಕೆಗೆ ನಿಷೇಧ

ಮಂಗಳೂರು: ಆಯುಧ ಪೂಜೆ ಹೆಸರಿನಲ್ಲಿ ಬೆಂಗಳೂರಿನ ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡ, ಎಂಎಸ್ ಬಿಲ್ದಿಂಗ್‌ನಲ್ಲಿ ರಾಸಾಯನಿಕಯುಕ್ತ ಬಣ್ಣಗಳನ್ನು ಬಳಸಿದ ಕುಂಬಳಕಾಯಿ ಒಡೆಯುವುದು, ರಂಗೋಲಿ ಬರೆಯುವುದು ಮಾಡಿದರೆ ಅಂತಹ ಇಲಾಖೆಯ ಮುಖ್ಯಸ್ಥರನ್ನೇ ಹೊಣೆಗಾರರನ್ನಾಗಿ...

ನೂತನ ಶಿಕ್ಷಣ ನೀತಿ ಅಂಕಗಳ ಆಧಾರಿತವಾದುದಲ್ಲ, ಕಲಿಕೆಯ ಹಂತದಲ್ಲೇ ವಿದ್ಯಾರ್ಥಿಯನ್ನು ಸ್ವಾವಲಂಬಿಯಾಗಿಸುವ ಜ್ಞಾನಾಧಾರಿತ ನೀತಿ: ಸಿ.ಟಿ.ರವಿ

ಚಿಕ್ಕಮಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಶಿಕ್ಷಣ ನೀತಿ ಅಂಕಗಳ ಆಧಾರಿತವಾದುದಲ್ಲ. ಕಲಿಕೆಯ ಹಂತದಲ್ಲೇ ವಿದ್ಯಾರ್ಥಿಯನ್ನು ಸ್ವಾವಲಂಬಿಯಾಗಿಸುವ ಜ್ಞಾನಾಧಾರಿತ ನೀತಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಹೇಳಿದರು.
ಜಿಲ್ಲಾ ಅನುದಾನ ರಹಿತ ಶಾಲೆಗಳ ಒಕ್ಕೂಟದ ಆಶ್ರಯದಲ್ಲಿ ನಗರದ ಎಐಟಿ ಕಾಲೇಜು ಸಭಾಂಗಣದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಬುಧವಾರ ಏರ್ಪಡಿಸಿದ್ದ ವಿಚಾರ ಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.
ಬಹಳಷ್ಟು ಮಂದಿ ಪ್ರಥಮ ರ್ಯಾಂಕ್ ಗಳಿಸಿದವರು ಸಾಮಾನ್ಯ ಜ್ಞಾನದಲ್ಲಿ ದಡ್ಡರಾಗಿರುತ್ತಾರೆ. ಶೇ.98 ಅಂಕ ಗಳಿಸಿದವರು ಕೇವಲ ಇನ್ನೆರಡು ಅಂಕ ಬರಲಿಲ್ಲ ಎಂದು ಆತ್ಮಹತ್ಯೆಗೆ ಮುಂದಾಗುತ್ತಾರೆ. ಆದರೆ ನೂತನ ಶಿಕ್ಷಣ ನೀತಿಯಲ್ಲಿ ಕಲಿಕೆಯಿಂದ ಹೊರಗೆ ಬಂದ ನಂತರವೂ ನಾನೇ ಸಾಧಿಸಬಲ್ಲೆ ಎನ್ನುವ ಭರವಸೆ ಮೂಡುವ ಅಂಶಗಳಿವೆ ಎಂದರು.
ಪ್ರಕೃತಿಯ ಜೊತೆ ಸೇರಿ ಸಮಾಜದ ಜತೆ ನಮ್ಮ ಹಿತವನ್ನೂ ನೋಡುವ ಉದ್ದೇಶದ ಶಿಕ್ಷಣ ನೀತಿ ಈಗ ಜಾರಿಗೆ ಬಂದಿದೆ. ಶತಮಾನಗಳ ಕಾಲ ಅನ್ನ, ಔಷಧ, ಅಕ್ಷರ ವ್ಯಾಪಾರದ ಸರಕಾಗಿರಲಿಲ್ಲ. ಇಂದು ನೀರು ಬಹುದೊಡ್ಡ ವ್ಯಾಪಾರದ ವಸ್ತುವಾಗಿದೆ. ಹಿಂದೆ ಅನ್ನಛತ್ರಗಳು ಹಸಿವು ನೀಗಿಸುತ್ತಿದ್ದರೆ ಈಗ ಶೇ.10 ರಷ್ಟು ಜಿಡಿಪಿ ಕಟ್ಟುವಷ್ಟರ ಮಟ್ಟಿಗೆ ಹೋಟೆಲ್ ಉದ್ಯಮ ಈಗ ಬೆಳೆದಿದೆ. ಕುಬೇರನಿಂದ ಕುಚೇಲನವರೆಗೆ ಸಮಾನ ಶಿಕ್ಷಣ ನೀಡುವ ಸಮಾಜ ಆಶ್ರಿತ ಗುರುಕುಲಗಳಿದ್ದವು. ಇಂದು ಶಿಕ್ಷಣವೂ ಒಂದು ದೊಡ್ಡ ಉದ್ಯಮವಾಗಿದೆ. ಉಚಿತ ಔಷಧಿ ನೀಡುವ ಮನೆತನಗಳು, ಮನೆಗಳು ಇದ್ದವು. ಇಂದು ಮೆಡಿಕಲ್ ಉದ್ಯಮ ಅಂತರರಾಷ್ಟ್ರೀಯ ಮಟ್ಟದ ಲಾಬಿಯಾಗಿ ಪರಿವರ್ತನೆಯಾಗಿದೆ. ಇದರಿಂದ ಹೊರತರುವುದು ಹೇಗೆ ಎನ್ನುವ ಆಲೋಚನೆಯನ್ನೇ ಮಾಡದ ಕಾರಣ ಜಗತ್ತಿಗೆ ಮಾರ್ಗದರ್ಶನ ನೀಡುವ ಸಾಮಥ್ರ್ಯವಿರುವ ನಮ್ಮ ದೇಶ ವೈಫಲ್ಯಗಳ ಸುಳಿಗೆ ಸಿಕ್ಕಿ ಮುಳುಗುತ್ತಿದೆ ಈ ಹೊತ್ತಿನಲ್ಲಿ ಇದೆಲ್ಲದರ ಬಗ್ಗೆ ಆಲೋಚಿಸಿ ಹೊಸ ಶಿಕ್ಷಣ ನೀತಿ ಜಾರಿಗೆ ಬಂದಿದೆ ಎಂದರು.
ಯಾರೋ ಒಂದಿಬ್ಬರು ಕುಳಿತು ರೂಪಿಸಿದ ನೀತಿ ಇದಲ್ಲ. 2,70,000 ಸಾರ್ವಜನಿಕರ ಅಭಿಪ್ರಾಯ ಆಲಿಸಿ ಸಾಧಕ, ಬಾಧಕಗಳ ಸಮಾಲೋಚನೆ ನಡೆಸಿ ಸರ್ವರಿಗೂ ಸಮಾನವಾಗಿ 3 ರಿಂದ 18 ವರ್ಷದವರೆಗೆ ನಾಲ್ಕು ಹಂತದಲ್ಲಿ ಶಿಕ್ಷಣ ನೀಡುವಂತಹದ್ದಾಗಿದೆ. ಇದು ಮೆಕಾಲೆ ಪ್ರೇರಿತವೂ ಅಲ್ಲ, ಮಾಕ್ರ್ಸ್ ಪ್ರೇರಿತವೂ ಅಲ್ಲ. ಶುದ್ಧ ಭಾರತೀಯ ದೃಷ್ಟಿಕೋನದ ಶಿಕ್ಷಣ ನೀತಿ ಎಂದರು.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ರಚನಾ ಸಮಿತಿ ಸದಸ್ಯ ಆಂಧ್ರಪ್ರದೇಶದ ಕೇಂದ್ರ ಬುಡಕಟ್ಟು ವಿವಿಯ ಕುಲಪತಿ ಡಾ.ಟಿ.ವಿ.ಕಟ್ಟೀಮನಿ ಪ್ರಧಾನ ಉಪನ್ಯಾಸ ನೀಡಿದರು. ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ, ಕುವೆಂಪು ವಿವಿ ಕುಲಪತಿ ಪ್ರೊ. .ಬಿ.ಪಿ.ವೀರಭದ್ರಪ್ಪ ಹಾಗೂ ರಾಜ್ಯ ಮುಕ್ತ ವಿವಿ ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಮಾತನಾಡಿದರು.
ಜಿಲ್ಲಾ ಅನುದಾನ ರಹಿತ ಶಾಲೆಗಳ ಒಕ್ಕೂಟದ ಅಧ್ಯಕ್ಷ ಬಿ.ಎಚ್.ನರೇಂದ್ರ ಪೈ ಅಧ್ಯಕ್ಷತೆ ವಹಿಸಿದ್ದರು. ಡಿಡಿಪಿಐ ಬಿ.ವಿ.ಮಲ್ಲೇಶಪ್ಪ, ಎಐಟಿ ಕಾಲೇಜಿನ ಪ್ರಾಚಾರ್ಯ ಡಾ.ಸಿ.ಟಿ.ಜಯದೇವ್, ಬಿಇಒ ಎಸ್.ಆರ್.ಮಂಜುನಾಥ್, ಜಿಲ್ಲಾ ಅನುದಾನ ರಹಿತ ಶಾಲೆಗಳ ಒಕ್ಕೂಟದ ಕಾರ್ಯಾಧ್ಯಕ್ಷ ಎಂ.ಎನ್.ಷಡಕ್ಷರಿ ಕಾರ್ಯಕ್ರಮದಲ್ಲಿದ್ದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Latest Posts

ಬೆಳ್ತಂಗಡಿ| ಚಿರತೆ ದಾಳಿಗೆ ಹಸು ಬಲಿ: ಸೆರೆ ಹಿಡಿಯುವಂತೆ ಗ್ರಾಮಸ್ಥರ ಒತ್ತಾಯ

ಬೆಳ್ತಂಗಡಿ: ತಾಲ್ಲೂಕಿನ ಮರೋಡಿ ಗ್ರಾಮದ ನಡುಚ್ಚೂರು ಎಂಬಲ್ಲಿ ಚಿರತೆ ದಾಳಿಗೆ ಹಸುವೊಂದು ಸೋಮವಾರ ಬಲಿಯಾಗಿದೆ. ದಿವಾಕರ ಹೆಗ್ಡೆ ಅವರ ಹಸುವಿನ ಮೇಲೆ ದಾಳಿ ಮಾಡಿದ ಚಿರತೆಯು, ಅರ್ಧ ದೇಹವನ್ನು ತಿಂದು ಹಾಕಿದೆ. ಕೆಲ ದಿನಗಳ...

‘ಮಿಷನ್ ಶಕ್ತಿ ’ ಅಭಿಯಾನ: ಉತ್ತರ ಪ್ರದೇಶದಲ್ಲಿ 14 ಮಹಿಳಾ ಪೀಡಕರಿಗೆ ಮರಣದಂಡನೆ ಖಚಿತ

ಲಕ್ನೋ: ಮಹಿಳೆಯರು ಮತ್ತು ಮಕ್ಕಳ ಸುರಕ್ಷೆಯ ಖಾತ್ರಿಗಾಗಿ ‘ಮಿಷನ್ ಶಕ್ತಿ ’ಎಂಬ 9 ತಿಂಗಳ ಅಭಿಯಾನಕ್ಕೆ ಉತ್ತರ ಪ್ರದೇಶ ಬಿಜೆಪಿ ಸರಕಾರ ಚಾಲನೆ ನೀಡಿದೆ. ಹಾಗೆಂದು ,ಮಹಿಳಾ ಸುರಕ್ಷೆ ನಿಟ್ಟಿನಲ್ಲಿ ದೃಢ ಹೆಜ್ಜೆಯನ್ನು...

ಆಯುಧ ಪೂಜೆಗೆ ವಿಧಾನಸೌಧ, ವಿಕಾಸಸೌಧದಲ್ಲಿ ರಾಸಾಯನಿಕಯುಕ್ತ ಬಣ್ಣ ಬಳಕೆಗೆ ನಿಷೇಧ

ಮಂಗಳೂರು: ಆಯುಧ ಪೂಜೆ ಹೆಸರಿನಲ್ಲಿ ಬೆಂಗಳೂರಿನ ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡ, ಎಂಎಸ್ ಬಿಲ್ದಿಂಗ್‌ನಲ್ಲಿ ರಾಸಾಯನಿಕಯುಕ್ತ ಬಣ್ಣಗಳನ್ನು ಬಳಸಿದ ಕುಂಬಳಕಾಯಿ ಒಡೆಯುವುದು, ರಂಗೋಲಿ ಬರೆಯುವುದು ಮಾಡಿದರೆ ಅಂತಹ ಇಲಾಖೆಯ ಮುಖ್ಯಸ್ಥರನ್ನೇ ಹೊಣೆಗಾರರನ್ನಾಗಿ...

ನ್ಯಾ. ಎ.ಜೆ. ಸದಾಶಿವ ಆಯೋಗದ ವರದಿ ಜಾರಿಗಾಗಿ ನವೆಂಬರ್ 2ರಿಂದ ಹಲಗೆ ಚಳವಳಿ: ರಾಜು ಕಡ್ಯಾಳ

ಬೀದರ: ಕರ್ನಾಟಕ ರಾಜ್ಯ ಆದಿಜಾಂಬವ ಸಂಘದ ಬೀದರ ಜಿಲ್ಲಾಧ್ಯಕ್ಷರಾದ ರಾಜು ಕಡ್ಯಾಳ ಅವರು ಬೀದರ ನಗರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ, ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಜಾರಿಗಾಗಿ ಕಳೆದ ಹಲವು ವರ್ಷಗಳಿಂದ...

Don't Miss

ಬೆಳ್ತಂಗಡಿ| ಚಿರತೆ ದಾಳಿಗೆ ಹಸು ಬಲಿ: ಸೆರೆ ಹಿಡಿಯುವಂತೆ ಗ್ರಾಮಸ್ಥರ ಒತ್ತಾಯ

ಬೆಳ್ತಂಗಡಿ: ತಾಲ್ಲೂಕಿನ ಮರೋಡಿ ಗ್ರಾಮದ ನಡುಚ್ಚೂರು ಎಂಬಲ್ಲಿ ಚಿರತೆ ದಾಳಿಗೆ ಹಸುವೊಂದು ಸೋಮವಾರ ಬಲಿಯಾಗಿದೆ. ದಿವಾಕರ ಹೆಗ್ಡೆ ಅವರ ಹಸುವಿನ ಮೇಲೆ ದಾಳಿ ಮಾಡಿದ ಚಿರತೆಯು, ಅರ್ಧ ದೇಹವನ್ನು ತಿಂದು ಹಾಕಿದೆ. ಕೆಲ ದಿನಗಳ...

‘ಮಿಷನ್ ಶಕ್ತಿ ’ ಅಭಿಯಾನ: ಉತ್ತರ ಪ್ರದೇಶದಲ್ಲಿ 14 ಮಹಿಳಾ ಪೀಡಕರಿಗೆ ಮರಣದಂಡನೆ ಖಚಿತ

ಲಕ್ನೋ: ಮಹಿಳೆಯರು ಮತ್ತು ಮಕ್ಕಳ ಸುರಕ್ಷೆಯ ಖಾತ್ರಿಗಾಗಿ ‘ಮಿಷನ್ ಶಕ್ತಿ ’ಎಂಬ 9 ತಿಂಗಳ ಅಭಿಯಾನಕ್ಕೆ ಉತ್ತರ ಪ್ರದೇಶ ಬಿಜೆಪಿ ಸರಕಾರ ಚಾಲನೆ ನೀಡಿದೆ. ಹಾಗೆಂದು ,ಮಹಿಳಾ ಸುರಕ್ಷೆ ನಿಟ್ಟಿನಲ್ಲಿ ದೃಢ ಹೆಜ್ಜೆಯನ್ನು...

ಆಯುಧ ಪೂಜೆಗೆ ವಿಧಾನಸೌಧ, ವಿಕಾಸಸೌಧದಲ್ಲಿ ರಾಸಾಯನಿಕಯುಕ್ತ ಬಣ್ಣ ಬಳಕೆಗೆ ನಿಷೇಧ

ಮಂಗಳೂರು: ಆಯುಧ ಪೂಜೆ ಹೆಸರಿನಲ್ಲಿ ಬೆಂಗಳೂರಿನ ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡ, ಎಂಎಸ್ ಬಿಲ್ದಿಂಗ್‌ನಲ್ಲಿ ರಾಸಾಯನಿಕಯುಕ್ತ ಬಣ್ಣಗಳನ್ನು ಬಳಸಿದ ಕುಂಬಳಕಾಯಿ ಒಡೆಯುವುದು, ರಂಗೋಲಿ ಬರೆಯುವುದು ಮಾಡಿದರೆ ಅಂತಹ ಇಲಾಖೆಯ ಮುಖ್ಯಸ್ಥರನ್ನೇ ಹೊಣೆಗಾರರನ್ನಾಗಿ...
error: Content is protected !!