ಹೊಸದಿಲ್ಲಿ: ಭಾರತದಲ್ಲಿ 34 ವರ್ಷಗಳ ನಂತರ ಶಿಕ್ಷಣ ನೀತಿಯಲ್ಲಿ ಬದಲಾವಣೆ ತಂದಿದ್ದು, 1986ರ ಶಿಕ್ಷಣ ನೀತಿಯನ್ನು ಈವರೆಗೂ ಜಾರಿಯಲ್ಲಿತ್ತು. ದೇಶದಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ನೂತನ ಶಿಕ್ಷಣ ನೀತಿಗೆ ಬುಧವಾರ ಕೇಂದ್ರ ಸಂಪುಟ ಅನುಮೋಧನೆ ನೀಡಿದೆ.
ಭಾರತ ಶಿಕ್ಷಣ ಪದ್ಧತಿಯಲ್ಲಿ ಮಾತೃಭಾಷೆಯ ಅಧ್ಯಯನ ಮಹಾತಿರುವುದು ನೀಡುವುದರಲ್ಲಿ ಯಾವ ಅನುಮಾನವೂ ಇಲ್ಲ. ಇದೀಗ ಪ್ರೀ ನರ್ಸರಿಯಿಂದ 5ನೇ ತರಗತಿವರೆಗೂ ಮಾತೃಭಾಷೆ ಶಿಕ್ಷಣ ಕಡ್ಡಾಯ ಮಾಡಲಾಗಿದೆ. ಪ್ರೌಢ ಶಿಕ್ಷಣದವರೆಗೆ ಸ್ಥಳೀಯ ಭಾಷೆಗಳಲ್ಲಿ ತರಗತಿ ಪಡೆಯಲು ಅವಕಾಶ ನೀಡಿದೆ. ಕೂಡ ಶಾಲೆಯ ಶಿಕ್ಷಣದಲ್ಲಿ ಸಂಸ್ಕೃತವನ್ನು ಸ್ವಚ್ಛೆಯಿಂದ ಕಲಿಯಲು ಅವಕಾಶ ನೀಡಲಾಗಿದೆ.
ಸದ್ಯವಿರುವ 10+2 ಶಿಕ್ಷಣ ವ್ಯವಸ್ಥೆಯನ್ನು 5+3+3+4 ಶಿಕ್ಷಣ ವ್ಯವಸ್ಥೆಯಾಗಿ ಬದಲಿಸಲಾಗಿದೆ. 3,4,5ನೇ ತರಗತಿಯ ಶಿಕ್ಷಣವನ್ನು ಪ್ರೈಮರಿ ಶಿಕ್ಷಣ, 6,7 ಮತ್ತು 8ನೇ ತರಗತಿಯನ್ನು ಮಾಧ್ಯಮ ಶಿಕ್ಷಣ, 9 ರಿಂದ 12 ನೇ ತರಗತಿಯನ್ನು ಪ್ರೌಢ ಶಿಕ್ಷಣ ಎಂದು ಮಾಡಲಾಗುತ್ತದೆ.
ಶಿಕ್ಷಣ ಸಂಸ್ಥೆಗಳು ಬಹು ಶಿಕ್ಷಣ ಸಂಸ್ಥೆಯಾಗಿ ಪರಿವರ್ತಿತಗೊಳ್ಳುವ ಕಾರಣ, ಶಾಲಾ ಶುಲ್ಕವನ್ನೂ ಇಳಿಸಲಾಗುವುದು. ಯಾವುದೇ ಹೆಚ್ಚಿನ ಶುಲ್ಕ ಅಥವಾ ದೇಣಿಗೆಯನ್ನು ವಿದ್ಯಾರ್ಥಿಗಳಿಂದ ವಸೂಲು ಮಾಡುವ ಹಾಗಿಲ್ಲ.
2025 ರ ಹೊತ್ತಿಗೆ, ಶಾಲೆ ಮತ್ತು ಉನ್ನತ ಶಿಕ್ಷಣ ವ್ಯವಸ್ಥೆಯ ಮೂಲಕ ಕನಿಷ್ಠ 50% ಕಲಿಯುವವರು ವೃತ್ತಿಪರ ಶಿಕ್ಷಣಕ್ಕೆ ಒಡ್ಡಿಕೊಳ್ಳುತ್ತಾರೆ ಬಡಗಿಗಳು, ತೋಟಗಾರರು, ಕುಂಬಾರರು, ಕಲಾವಿದರು ಮುಂತಾದ ಸ್ಥಳೀಯ ವೃತ್ತಿಪರ ತಜ್ಞರೊಂದಿಗೆ 6-8ನೇ ತರಗತಿಯಲ್ಲಿ ಇಂಟರ್ನ್ ಮಾಡಲು 10 ದಿನಗಳ ಬ್ಯಾಗ್ಲೆಸ್ ಅವಧಿ ನೀಡಲಾಗುತ್ತದೆ.
6-12ನೇ ತರಗತಿಯಾದ್ಯಂತ ವಿದ್ಯಾರ್ಥಿಗಳಿಗೆ ವೃತ್ತಿಪರ ವಿಷಯಗಳನ್ನು ಕಲಿಯಲು ಇದೇ ರೀತಿಯ ಇಂಟರ್ನ್ಶಿಪ್ ನೀಡಲಾಗುತ್ತದೆ. ಆನ್ಲೈನ್ ಮೂಲಕ ವೃತ್ತಿಪರ ಕೋರ್ಸ್ಗಳ ಲಭ್ಯಗೊಳಿಸಲಾಗುವುದು.