Monday, July 4, 2022

Latest Posts

ನೂತನ ಸಿ.ಇ.ಓ ಆಗಿ ಡಾ.ದಿಲೀಶ್ ಸಾಸಿ ಅಧಿಕಾರ ಸ್ವೀಕಾರ

ಹೊಸ ದಿಗಂತ ವರದಿ, ಕಲಬುರಗಿ:

ಕಲಬುರಗಿ ಜಿಲ್ಲಾ ಪಂಚಾಯತಿಯ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಡಾ.ದಿಲೀಶ್ ಸಾಸಿ ಅವರು ಶುಕ್ರವಾರ ಅಧಿಕಾರಿ ಸ್ವೀಕರಿಸಿದರು. ಜಿಲ್ಲಾ ಪಂಚಾಯತ್ ಸಿ.ಇ.ಓ ಹುದ್ದೆಯ ಪ್ರಭಾರದಲ್ಲಿದ್ದ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಅವರಿಂದ ಡಾ.ದಿಲೀಶ ಸಾಸಿ ಅಧಿಕಾರ ಸ್ವೀಕರಿಸಿದರು.
ಮೂಲತ ಕೇರಳ ರಾಜ್ಯದವರಾದ ಇವರು 2017ನೇ ಬ್ಯಾಚಿನ ಅಧಿಕಾರಿಯಾಗಿದ್ದಾರೆ.
ಎಂ.ಬಿ.ಬಿ.ಎಸ್. ಪದವೀಧರರಾಗಿರುವ ಇವರು ಕಲಬುರಗಿ ಜಿಲ್ಲೆಗೆ ವರ್ಗವಾಗುವ ಮುನ್ನ ಹಾವೇರಿ ಉಪ ವಿಭಾಗದ ಹಿರಿಯ ಸಹಾಯಕ ಆಯುಕ್ತರಾಗಿ ಕಾರ್ಯನಿರ್ವಹಿಸಿದ್ದಾರೆ.
ಇದಕ್ಕೂ ಮುನ್ನ ರಾಯಚೂರು ಜಿಲ್ಲೆಯ ಲಿಂಗಸೂರು ಉಪ ವಿಭಾಗದ ಸಹಾಯಕ ಅಯುಕ್ತರಾಗಿಯೂ ಇವರು ಕಾರ್ಯನಿರ್ವಹಿಸಿದ್ದಾರೆ. ತದನಂತರ ಡಾ. ದಿಲೀಶ ಸಾಸಿ ಅವರು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ ಅವರನ್ನು ಭೇಟಿಯಾಗಿ ಹೂಗಚ್ಚ ನೀಡಿ ಪರಿಚಯಿಸಿಕೊಂಡರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss