Sunday, August 14, 2022

Latest Posts

ನೆಲಮಂಗಲದಲ್ಲಿ ಯುವಕನ ಬೈಕ್ ನಲ್ಲಿ ವ್ಹೀಲಿಂಗ್ ಸ್ಟಂಟ್, ಯುವತಿ ಕೈಯಲ್ಲಿ ಡ್ರ್ಯಾಗರ್!

ಬೆಂಗಳೂರು: ರಾಷ್ಟ್ರೀಯ ಹೆದ್ದಾರಿಯ ನೆಲಮಂಗಲದಲ್ಲಿ ಯುವಕನ ಬೈಕ್ ನಲ್ಲಿ ವ್ಹೀಲಿಂಗ್ ಸ್ಟಂಟ್ ಮಾಡುವ ವಿಡಿಯೋ ಈಗ ವೈರಲ್ ಆಗಿದ್ದು, ಅದರಲ್ಲೂ ವೈಕ್ ವ್ಹೀಲಿಂಗ್ ಯುವಕ ನಡೆಸ್ತಾ ಇದ್ದರೇ, ಯುವಕ ವ್ಹೀಲಿಂಗ್​ ಮಾಡುತ್ತಿರುವ ವೇಳೆ ಹಿಂದೆ ಕುಳಿತ ಯುವತಿ ಮಾಸ್ಕ್ ಧರಿಸಿ ಕೈಯಲ್ಲಿ ಡ್ರ್ಯಾಗರ್ ಹಿಡಿದು ಪೋಸ್ ಕೊಟ್ಟಿದ್ದಾಳೆ.
ಪೊಲೀಸರ ಕೈಗೆ ಸಿಕ್ಕಿಬೀಳುವ ಭಯದಲ್ಲಿ ದ್ವಿಚಕ್ರ ವಾಹನದ ನಂಬರ್ ಪ್ಲೇಟ್ ತೆಗೆದು ಹಾಕಲಾಗಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಬೈಕ್​ ವ್ಹೀಲಿಂಗ್​ ಮಾಡಿದ ಯುವಕ ಹಾಗೂ ಯುವತಿ ಇಬ್ಬರು ಗಾಂಜಾ ಅಥವಾ ಮದ್ಯದ ನಶೆಯಲ್ಲಿ ಈ ರೀತಿ ಮಾಡಿರಬಹುದು ಎನ್ನುವ ಅನುಮಾನ ವ್ಯಕ್ತವಾಗಿದೆ.
ರಾಷ್ಟ್ರೀಯ ಹೆದ್ದಾರಿಗಳಾದ ತುಮಕೂರು ರಸ್ತೆ-4ರಲ್ಲಿ ಹಾಗೂ ಕುಣಿಗಲ್ ರಸ್ತೆ-75ರಲ್ಲಿ ಪುಂಡರ ಬೈಕ್ ವ್ಹೀಲಿಂಗ್​ ಅರ್ಭಟ ಇತ್ತೀಚೆಗೆ ಜೋರಾಗಿದ್ದು, ವೀಕೆಂಡ್​ಗಳಲ್ಲಿ ಈ ರೀತಿಯ ದೃಶ್ಯಾವಳಿಗಳು ಹೆಚ್ಚಾಗಿ ಗೋಚರಿಸುತ್ತಿವೆ ಎಂದು ಸ್ಥಳೀಯರು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss