Thursday, July 7, 2022

Latest Posts

ನೆಹರು, ಗಾಂಧಿ ವಂಶಕ್ಕೆ ಎಂದಿಗೂ ಪ್ರಧಾನ ಮಂತ್ರಿ ಕಚೇರಿ ಮೇಲೆ ಗೌರವವಿಲ್ಲ: ಕಾಂಗ್ರೆಸ್ ವಿರುದ್ಧ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ವಾಗ್ದಾಳಿ

ಹೊಸದಿಲ್ಲಿ: ನೆಹರು, ಗಾಂಧಿ ವಂಶಕ್ಕೆ ಎಂದಿಗೂ ಪ್ರಧಾನ ಮಂತ್ರಿ ಕಚೇರಿ ಮೇಲೆ ಗೌರವವಿಲ್ಲ. ​​​​ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಕಾಂಗ್ರೆಸ್ ದ್ವೇಷದ ರಾಜಕೀಯದಲ್ಲಿ ತೊಡಗಿದೆ. ಪಂಜಾಬ್​ನಲ್ಲಿ ಪ್ರಧಾನಿ ಪ್ರತಿಕೃತಿ ದಹಿಸಿರೋದು ಅನಿರೀಕ್ಷಿತವಲ್ಲ. ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ನಿರ್ದೇಶನದ ಮೇರೆಗೆ ಈ ಘಟನೆ ನಡೆದಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ವಾಗ್ದಾಳಿ ನಡೆಸಿದ್ದಾರೆ.
ಪಂಜಾಬ್​ನಲ್ಲಿ ಪ್ರಧಾನಿ ಮೋದಿ ಪ್ರತಿಮೆ ದಹಿಸಿದ ಘಟನೆಯನ್ನು ಖಂಡಿಸಿದ ನಡ್ಡಾ , ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಸಹ್ಯವರ್ತನೆ ತೋರುವ ಯಾವುದಾದರೊಂದು ಪಕ್ಷವಿದ್ದರೆ ಅದು ಕಾಂಗ್ರೆಸ್. ರಾಜಸ್ಥಾನದಲ್ಲಿ ಎಸ್​​ಸಿ, ಎಸ್​ಟಿ ಸಮುದಾಯಗಳ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಪಂಜಾಬ್​​ನಲ್ಲಿ ಮಂತ್ರಿಗಳು ವಿದ್ಯಾರ್ಥಿ ವೇತನ ಹಗರಣಗಳಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು. ಕಾಂಗ್ರೆಸ್​​​ ವಾಕ್​​ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಮೂಲಕ ವಿರೋಧಿಗಳಿಗೆ ತೊಂದರೆ ನೀಡುತ್ತಿದೆ. ಕಾಂಗ್ರೆಸ್ ಆಶೀರ್ವದಿಸಿದ ಮಹಾರಾಷ್ಟ್ರ ಸರ್ಕಾರ, ಆಡಳಿತ ಮಾಡುವುದನ್ನು ಬಿಟ್ಟು, ಉಳಿದೆಲ್ಲವನ್ನೂ ಮಾಡುತ್ತಿದೆ ಎಂದು ವ್ಯಂಗ್ಯವಾಡಿದರು.
‘ಬಡತನದಲ್ಲಿ ಜನಿಸಿ, ಪ್ರಧಾನ ಮಂತ್ರಿಯಾದ ವ್ಯಕ್ತಿಯ ವಿರುದ್ಧ ಒಂದು ರಾಜವಂಶದ ದ್ವೇಷ ಐತಿಹಾಸಿಕವಾಗಿದೆ. ಈ ದೇಶದ ಜನರ ಪ್ರೀತಿ ಮೋದಿಯವರ ಮೇಲಿರೋದು ಮತ್ತೊಂದು ಐತಿಹಾಸಿಕವಾಗಿದೆ. ಮೋದಿಯವರನ್ನು ಕಾಂಗ್ರೆಸ್ ಎಷ್ಟು ದ್ವೇಷಿಸುತ್ತೋ, ಜನರು ಅದಕ್ಕಿಂತ ದುಪ್ಟಟ್ಟು ಇಷ್ಟ ಪಡುತ್ತಾರೆ” ಎಂದು ವಿರೋಧಿಗಳಿಗೆ ಜೆ.ಪಿ. ನಡ್ಡಾ ತಿರುಗೇಟು ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss