ನೇಪಾಳ ರಾಜಕೀಯ ಭೂಪಟಕ್ಕೆ ಸೈ ಎಂದ ಬಾಲಿವುಡ್ ನಟಿ: ಮನಿಷಾ ವಿರುದ್ದ ನೆಟ್ಟಿಗರ ಆಕ್ರೋಶ    

0
229
ಹೊಸದಿಲ್ಲಿ: ನೇಪಾಳದ  ಹೊಸ ರಾಜಕೀಯ ಭೂಪಟಕ್ಕೆ ಭಾರತದ  ಕೆಲವೊಂದು ಪ್ರಮುಖ  ಪ್ರದೇಶಗಳು ಸೇರ್ಪಡೆಯಾಗಿರುವುದನ್ನು ಬಾಲಿವುಡ್ ನಟಿ  ಮನಿಷಾ ಕೊಯಿರಾಲ ಸಮರ್ಥಿಸಿರುವುದಕ್ಕೆ ಸಾಮಾಜಿಕ  ತಾಣಗಳಲ್ಲಿ  ನಟಿ  ವಿರುದ್ಧ  ಭಾರಿ ಆಕ್ರೋಶ  ವ್ಯಕ್ತವಾಗಿದೆ.
 ನೇಪಾಳವನ್ನು ಪ್ರೀತಿಸುವುದಾದರೆ  ಮನಿಷಾ   ಆ ದೇಶಕ್ಕೇ  ಹೋಗಲಿ ಎಂದು   ಕೆಲವರು  ಟ್ವೀಟ್ ಮಾಡಿದ್ದಾರೆ.  ಭಾರತಕ್ಕೆ  ಸೇರಿದ ಲಿಪ್ ಲೇಕ್, ಕಾಲಾಪಾನಿ ಲಿಂಪಿಯಾಧುರಿ ತನ್ನದೆಂದು   ಹೇಳುತ್ತಿರುವ  ನೇಪಾಳವೀಗ     ಹೊಸದಾಗಿ  ಭೂಪಟವನ್ನೂ   ಬಿಡುಗಡೆ ಮಾಡಿದ್ದು, ಇದು ಸಾರ್ವತ್ರಿಕ ವಲಯದಲ್ಲಿ ವಿವಾದದ  ಸುಂಟರಗಾಳಿ  ಎಬ್ಬಿಸಿದೆ.   ಮೂಲತಃ  ನೇಪಾಳದವರಾದ  ಬಾಲಿವುಡ್ ನಟಿ  ದಶಕಗಳ ಹಿಂದೆಯೇ   ಚಿತ್ರನಗರಿ ಮುಂಬೈಗೆ  ಬಂದು ನೆಲೆಸಿದ್ದು, ಇದೀಗ  ನೇಪಾಳದ  ರಾಜಕೀಯ  ಭೂಪಟದ  ಪರವಾಗಿ  ಟ್ವೀಟ್ ಮಾಡಿರುವುದು ದೇಶಾಭಿಮಾನಿಗಳನ್ನು  ಕೆರಳಿಸಿದೆ. ನೇಪಾಳದ  ಪ್ರಧಾನಿ  ಕೂಡಾ  ಭಾರತದಿಂದ ಬರುವ  ಕೊರೋನಾ  ಸೋಂಕು   ಪ್ರಪಂಚದಲ್ಲಿಯೆ  ಅತ್ಯಂತ ಅಪಾಯಕಾರಿ ಎಂದು ಟೀಕಿಸಿದ್ದಾರೆ.

LEAVE A REPLY

Please enter your comment!
Please enter your name here