Wednesday, July 6, 2022

Latest Posts

ನೈಟ್ ಕರ್ಪ್ಯೂ: ಜಾರಿಯಾಯಿತು ರಾಜ್ಯ ಸರಕಾರದಿಂದ ಮಾರ್ಗಸೂಚಿ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಬ್ರಿಟನ್ ನ ಕೊರೋನಾ ರೂಪಾಂತರದ ಬಿಸಿ ರಾಜ್ಯಕ್ಕೂ ತಟ್ಟಿದ್ದು, ಈ ಹಿನ್ನೆಲೆ ನಾಳೆಯಿಂದ ರಾತ್ರಿ 11 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ರಾತ್ರಿ ಕರ್ಪ್ಯೂ ಜಾರಿಗೊಳಿಸಲಾಗಿದೆ. ಈ ವೇಳೆ ಜನತೆ ಕಡ್ಡಾಯವಾಗಿ ಅನುಸರಿಸಬೇಕಾದ ಮಾರ್ಗಸೂಚಿ ಕ್ರಮಗಳನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.
ಈ ಕುರಿತಂತೆ ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್ ಭಾಸ್ಕರ್ ಆದೇಶ ಹೊರಡಿಸಿದ್ದು, ಈ ಕೆಳಕಂಡ ಮಾರ್ಗಸೂಚಿ ಕ್ರಮಗಳ ಪಾಲನೆ ಕಡ್ಡಾಯವಾಗಿ ಪಾಲಿಸುವಂತೆ ತಿಳಿಸಿದ್ದಾರೆ.

  • ರಾತ್ರಿ ಕರ್ಪ್ಯೂ ವೇಳೆ 11 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆ ವ್ಯಕ್ತಿಗಳ ಚಲನವಲನ ನಿಷೇಧಿಸಲಾಗಿದೆ.
  • ಎಲ್ಲಾ ರೀತಿಯ ಸರಕು ಸಾಗಾಣಿಕೆ ವಾಹನಗಳು, ಸರಕು ತುಂಬಿದ ಹಾಗೂ ಖಾಲಿ ವಾಹನ ಎರಡಕ್ಕೂ ನಿರ್ಬಂಧದಿಂದ ಸಡಿಲಿಕೆ.
  • ರಾತ್ರಿ ಕರ್ಪ್ಯೂ ಸಂದರ್ಭದಲ್ಲಿ ಶೇ.50ರಷ್ಟು ನೌಕರರೊಂದಿಗೆ ಕೆಲಸ ಮಾಡಲು ಕಾರ್ಖಾನೆಗಳಿಗೆ ಅನುಮತಿ. ಈ ವೇಳೆ ನೌಕರರು ಐಟಿ ಕಾರ್ಡ್ ತೋರಿಸಿ, ಓಡಾಡಲು ಅವಕಾಶ.
  • ರಾತ್ರಿ ಬಸ್, ರೈಲು, ವಿಮಾನ ಸಂಚಾರಕ್ಕೂ ಕರ್ಪ್ಯೂ ವೇಳೆ ಅನುಮತಿ.
  • ರಾತ್ರಿಯ ರೈಲು, ಬಸ್ , ವಿಮಾನ ಸಂಚಾರ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ಪ್ಯೂ ನಡುವೆಯೂ ಟ್ಯಾಕ್ಸಿ, ಆಟೋ ಸಂಚಾರಕ್ಕೂ ಅನುಮತಿ, . ಈ ವೇಳೆ ಪ್ರಯಾಣದ ಟಿಕೆಟ್​​ಅನ್ನು ಪ್ರಯಾಣಿಕರು ಹೊಂದಿರುವುದು ಕಡ್ಡಾಯ.
  • 24×7 ಕಾರ್ಖಾನೆಗಳ ಕೆಲಸಕ್ಕೆ ಯಾವುದೇ ನಿರ್ಬಂಧವಿಲ್ಲ.
  • ಡಿಸೆಂಬರ್ 24ರ ರಾತ್ರಿ ಕ್ರಿಸ್​​ಮಸ್ ಪ್ರಾರ್ಥನೆ ಸಲ್ಲಿಕೆಗೆ ಅವಕಾಶ. ಕ್ರಿಸ್‌ಮಸ್ ಹಾಗೂ ಹೊಸ ವರ್ಷ ಆಚರಣೆ ಕುರಿತು ಡಿಸೆಂಬರ್ 17ರಂದು ಹೊರಡಿಸಲಾಗಿದ್ದ ಮಾರ್ಗಸೂಚಿಯೇ ಅನ್ವಯವಾಗಲಿದೆ.

    ರಾಜ್ಯಾಧ್ಯಂತ ಡಿ. 24 ರಿಂದ ಕೋವಿಡ್-19 ಹೊಸ ಮಾದರಿಯ ಸೋಂಕಿನ ಹಿನ್ನಲೆಯಲ್ಲಿ ರಾತ್ರಿ ಕರ್ಪ್ಯೂ ಜಾರಿಗೊಳಿಸಲಾಗಿದೆ. ರಾತ್ರಿ 11ರಿಂದ ಬೆಳಿಗ್ಗೆ 5 ಗಂಟೆಯವರೆಗೆ ರಾತ್ರಿ ಕರ್ಪ್ಯೂ ಜಾರಿಯಾಗಿರಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss