Wednesday, July 6, 2022

Latest Posts

ನೈಟ್ ಕರ್ಫ್ಯೂ: ಕಟೀಲು ಮೇಳಗಳ ಯಕ್ಷಗಾನ ಸಮಯದಲ್ಲಿ ಬದಲಾವಣೆ

ಹೊಸದಿಗಂತ ವರದಿ, ಮಂಗಳೂರು:

ಕಟೀಲು ಶ್ರೀ ದುರ್ಗಪರಮೇಶ್ವರೀ ಪ್ರಸಾದಿತ ಯಕ್ಷಗಾನ ಮಂಡಳಿಯ ಆರು ಮೇಳಗಳ ಯಕ್ಷಗಾನ ಬಯಲಾಟದ ಸಮಯವನ್ನು ನಾಳೆಯಿಂದ ರಾತ್ರಿ ಕರ್ಫ್ಯೂ ಆದೇಶ ಮುಗಿಯುವವರೆಗೆ ಬದಲಾಯಿಸಲಾಗಿದೆ.
ಗುರುವಾರದಿಂದ ಸಂಜೆ 4 ಗಂಟೆಗೆ ಚೌಕಿ ಪೂಜೆ ನಡೆದು 4.30ರಿಂದ ಯಕ್ಷಗಾನ ಆರಂಭವಾಗಿ ರಾತ್ರಿ 10.30ರವರೆಗೆ ಯಕ್ಷಗಾನ ಬಯಲಾಟ ನಡೆಯಲಿದೆ. ಈಗಾಗಲೇ ಸೇವಾದಾರರು ಯಕ್ಷಗಾನ ಸೇವೆಯಾಟಗಳ ಸಿದ್ಧತೆ ಮಾಡಿರುವುದರಿಂದ, ಆಟಗಳನ್ನು ರದ್ದು ಪಡಿಸಿದರೆ ಸೇವಾದಾರರಿಗೂ, ಕಲಾವಿದರಿಗೂ ಸಮಸ್ಯೆಗಳಾಗುವುದರಿಂದ ಬೇಗನೆ ಮಾಡುವ ನಿರ್ಧಾರಕ್ಕೆ ಬರಲಾಗಿದೆ.
ಸರಕಾರದ ನಿಷೇಧಾಜ್ಞೆಯ ಆದೇಶ ಬದಲಾದರೆ ಆಟದ ಸಮಯದಲ್ಲೂ ವ್ಯತ್ಯಾಸವಾಗಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss