ಹೊಸದಿಗಂತ ಆನ್ ಲೈನ್ ಡೆಸ್ಕ್:
ಸೂಪರ್ ಸ್ಪೀಡ್ ಕೊರೋನಾ ಭೀತಿಯಿಂದ ಇಂದಿನಿಂದ ಜಾರಿ ಆಗಬೇಕಿದ್ದ ನೈಟ್ ಕರ್ಫ್ಯೂವನ್ನು ರಾಜ್ಯ ಸರಕಾ ವಾಪಸ್ ಪಡೆದಿದ್ದು, ಇದರಿಂದ ಬಾರ್ ಮಾಲೀಕರು ಹಾಗೂ ಅಬಕಾರಿ ಇಲಾಖೆಗೂ ಸಂತೋಷವಾಗಿದೆ.
ಸಾಮಾನ್ಯವಾಗಿ ಪ್ರತಿವರ್ಷ ಡಿ.24ರಿಂದ ಡಿ.31ರವರೆಗೆ ಅಬಕಾರಿ ಇಲಾಖೆಯವರು ಹಾಗೂ ಬಾರ್ ಮಾಲೀಕರು ನೂರಾರು ಕೋಟಿ ರೂಪಾಯಿ ವ್ಯವಹಾರ ನಡೆಸುತ್ತಾರೆ.
ಆದರೆ ಈ ಬಾರಿ ಒಂದೆಡೆ ಕೊರೋನಾ ಹಾವಳಿ, ಜೊತೆಗೆ ಸರಕಾರ ರಾತ್ರಿ 11 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ಕರ್ಫ್ಯೂ ವಿಧಿಸಿ ಬುಧವಾರ ಹೊರಡಿಸಿತ್ತು. ಇದೀಗ
ಆದೇಶವನ್ನು ಸರ್ಕಾರ ಹಿಂಪಡೆದಿರುವ ಹಿನ್ನೆಲೆಯಲ್ಲಿ ಇಲಾಖೆಗೆ ಹಾಗೂ ಬಾರ್ ಮಾಲೀಕರಿಗೆ ಎದುರಾಗಿದ್ದ ಆತಂಕ ಸದ್ಯ ದೂರವಾದಂತಾಗಿದೆ.