Sunday, July 3, 2022

Latest Posts

ನೈತಿಕ ಹೊಣೆ ಹೊತ್ತು ಸಾಬರ್ ಮತಿ ಹಾಸ್ಟೆಲ್ ವಾರ್ಡನ್ ರಾಜೀನಾಮೆ

ಹೊಸದಿಲ್ಲಿ: ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್ ಯು)ದ ಕ್ಯಾಂಪಸ್ ನಲ್ಲಿ ದುಷ್ಕರ್ಮಿಗಳು ನಡೆಸಿದ ಹಲ್ಲೆಗೆ ಸಂಬಂಧಿಸಿದಂತೆ ಸಾಬರ್ ಮತಿ ವಿದ್ಯಾರ್ಥಿ ನಿಲಯದ ಹಿರಿಯ ವಾರ್ಡನ್ ಆರ್.ಮೀನಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಜೆಎನ್ ಯು ಹಿಂಸಾಚಾರ ಘಟನೆಯ ನೈತಿಕ ಹೊಣೆ ಹೊತ್ತು ಡಾ.ಮೀನಾ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ವಿದ್ಯಾರ್ಥಿ ವಿಭಾಗದ ಮುಖ್ಯಸ್ಥ (ಡೀನ್) ರಿಗೆ ಲಿಖಿತ ರೂಪದಲ್ಲಿ ರಾಜೀನಾಮೆ ಸಲ್ಲಿಸಿರುವ ಮೀನಾ, ಹಿಂಸಾಚಾರ ತಡೆಯಲು ನಾವು ಎಲ್ಲ ಬಗೆಯ ಪ್ರಯತ್ನ ಮಾಡಿದೇವು. ಆದರೆ ಅದು ಸಾಧ್ಯವಾಗಲಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಜೆಎನ್ ಯು ಕ್ಯಾಂಪಸ್ ನ ಸಾಬರ್ ಮತಿ ಹಾಸ್ಟೆಲ್ ನಲ್ಲಿ 400 ವಿದ್ಯಾರ್ಥಿಗಳಿದ್ದರು. ಜೆಎನ್ ಯು ಹಿಂಸಾಚಾರ ಪ್ರಕರಣವನ್ನು ದಿಲ್ಲಿಯ ಅಪರಾಧ ತನಿಖಾ ದಳ ತನಿಖೆ ನಡೆಸುತ್ತಿದ್ದು, ಈಗಾಗಲೇ ಹಲವು ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss