ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯಲ್ಲಿ ನೋಂದಣಿ ಮಾಡಿಕೊಳ್ಳದೇ ನಡೆಸುತ್ತಿರುವ ಹೋಟೆಲ್, ರೆಸಾಟ್ರ್ಸ್, ಹೋಂ-ಸ್ಟೇ ಹಾಗೂ ಮನರಂಜನಾ ತಾಣಗಳನ್ನು ನಿಯಮಬಾಹಿರ ಎಂದು ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಜಿ.ಎನ್.ಶಿವಮೂರ್ತಿ ಎಚ್ಚರಿಸಿದ್ದಾರೆ.
ಜಿಲ್ಲೆಯ ಹೋಟೆಲ್, ರೆಸಾಟ್ರ್ಸ್, ಹೋಂ-ಸ್ಟೇ ಹಾಗೂ ಮನರಂಜನಾ ತಾಣಗಳ ಮಾಲೀಕರು ಪ್ರವಾಸೋದ್ಯಮ ಇಲಾಖೆಯಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳುವ ಮೂಲಕ ಅಧಿಕೃತ ಪರವಾನಿಗೆ ಪಡೆಯುವಂತೆ ಸೂಚಿಸಿರುವ ಅವರು ನೋಂದಣಿಗಾಗಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ, ಪ್ರವಾಸೋದ್ಯಮ ಇಲಾಖೆ, ಮೈಸೂರು ಶುಗರ್ ಕಂಪನಿ ಲಿಮಿಟೆಡ್ ಕಟ್ಟಡ, 1ನೇ ಮಹಡಿ, ಜೆ.ಸಿ ರಸ್ತೆ, ಬೆಂಗಳೂರು-560002 ಇಲ್ಲಿನ ಉಪನಿರ್ದೇಶಕರನ್ನು : [email protected] ಹಾಗೂ ದೂರವಾಣಿ ಸಂಖ್ಯೆ: 080-22224415, 9480940555 ಮೂಲಕ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.