ಹೊಸದಿಗಂತ ಆನ್ ಲೈನ್ ಡೆಸ್ಕ್:
ಪ್ರಸಿದ್ಧ ಮೊಬೈಲ್ ಕಂಪನಿ ಸ್ಯಾಮ್ ಸಂಗ್ ನ ಉತ್ಪಾದನಾ ಕೇಂದ್ರ ತೆರೆಯಲು ಉತ್ತರ ಪ್ರದೇಶದ ನೋಯ್ಡಾದಲ್ಲಿ ಸ್ಯಾಮ್ ಸಂಗ್ 5 ಸಾವಿರ ಕೋಟಿ ರೂ ಹೂಡಿಕೆ ಮಾಡಲಿದೆ.
ಸ್ಯಾಮ್’ಸಂಗ್ ಸ್ಮಾರ್ಟ್ ಫೋನ್ ಗಳ ಡಿಸ್ ಪ್ಲೇ ಗಳ ಉತ್ಪಾದನಾ ಘಟಕ ಪ್ರಾರಂಭಿಸಲು ತೀರ್ಮಾನಿಸಿದ್ದು, 2021ರ ಮೊದಲ ತ್ರೈ ಮಾಸಿಕದಲ್ಲಿ ಸಿದ್ಧವಾಗಲಿದೆ ಎಂದು ವರದಿ ತಿಳಿಸಿದೆ.
ಈಗಾಗಲೇ ಸ್ಯಾಮ್’ಸಂಗ್ ದಕ್ಷಿಣ ಕೊರಿಯಾ ಹಾಗೂ ಚೀನಾ ದೇಶಗಳಲ್ಲಿ ತನ್ನ ಡಿಸ್ ಪ್ಲೇ ಉತ್ಪಾದನಾ ಕೇಂದ್ರಗಳಿದ್ದು, ಭಾರತವು ಮೂರನೇ ರಾಷ್ಟ್ರವಾಗಲಿದೆ.
ಈ ಉತ್ಪಾದನ ಘಟಕದಿಂದ 1500 ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದ್ದು, ಇಲ್ಲಿ ಮೊಬೈಲ್ ಗಳ ಉತ್ಪಾದನೆ, ಜೋಡಣೆ ಸೇರಿದಂತೆ ಮಾರಾಟಕ್ಕೂ ಸಾಥ್ ನೀಡಲಿದೆ.