Saturday, June 25, 2022

Latest Posts

ನೌಕರರಿಗೆ ವೇತನ ನೀಡಲು ಆಗದ ಕೆ.ಎಸ್.ಆರ್.ಟಿ.ಸಿ, ಬಿ.ಎಂ.ಟಿ.ಸಿ ಇಲಾಖೆಗಳು: ಸರ್ಕಾರದ ಮೊರೆ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ತಡೆಗಟ್ಟಲು ಎಲ್ಲಾ ಸರ್ಕಾರಿ ಸಂಚಾರ ಸ್ಥಗಿತಗೊಳಿಸಿದ ಹಿನ್ನಲೇ ರಾಜ್ಯದಲ್ಲಿ ಕೆ.ಎಸ್.ಆರ್.ಟಿ.ಸಿ, ಬಿ.ಎಂ.ಟಿ.ಸಿ ಇಲಾಖೆಗೆ ಹೊಡೆದ ಬಿದ್ದಿದೆ. ಇದೀಗ ಸಾರಿಗೆ ಇಲಾಖೆ ನೌಕರರಿಗೆ ಮಾಸಿಕ ವೇತನ ನೀಡಲು ಹಣದ ಕೊರತೆ ಅನುಭವಿಸುತ್ತಿದ್ದು, ವೇತನ ನೀಡುವುದಕ್ಕೆ ಇಲಾಖೆ ಸರ್ಕಾರದ ಮೊರೆಹೋಗಿದೆ.

ಈ ಕುರಿತು ಮಾತನಾಡಿದ ಬಿ.ಎಂ.ಟಿ.ಸಿ ವ್ಯವಸ್ಥಾಪಕ ನಿರ್ದೇಶಕರಾದ ಸಿ.ಶಿಖಾ ಅವರು, ಇಲಾಖೆಯಲ್ಲಿ ಇದೀಗ 1.2 ಲಕ್ಷ ಮಂದಿ ನೌಕರರಿಗೆ ವೇತನ ನೀಡಬೇಕಿದೆ. ಮಾ.21ರವರೆಗೂ ಸಾರಿಗೆ ವ್ಯವಸ್ಥೆ ಇದ್ದ ಕಾರಣ ಹಾಗೂ ಸರ್ಕಾರದಿಂದ ಸಬ್ಸಿಡಿ ದೊರೆತಿರುವುದರಿಂದ ನೌಕರರಿಗೆ ಇಲಾಖೆ ಮಾರ್ಚ್ ತಿಂಗಳ ವೇತನವನ್ನು ನೀಡಬಹುದು. ಆದರೆ ಏಪ್ರಿಲ್ ನಲ್ಲಿ ಸಾರಿಗೆ ಸಂಚಾರ ಸಂಪೂರ್ಣ ರದ್ದು ಮಾಡಿರುವ ಹಿನ್ನಲೆಯಲ್ಲಿ ಸರ್ಕಾರದ ಸಹಾಯವಿಲ್ಲದೆ ನಾವು ನೌಕರರಿಗೆ ಏಪ್ರಿಲ್ ತಿಂಗಳ ಸಂಬಳ ನೀಡಲು ಆಗುವುದಿಲ್ಲ ಎಂದರು.

ಈ ಕುರಿತು ಸರ್ಕಾರಕ್ಕೆ ಪತ್ರ ಕಳುಹಿಸಲಾಗಿದ್ದು, ಬಿ.ಎಂ.ಟಿ.ಸಿ ಮಾಸಿಕ ವೇತನಕ್ಕೆ 65 ಕೋಟಿ ರೂ. ಬೇಕಾಗಿದ್ದು, 135 ಕೋಟಿ ರೂ.ಗಳ  ಸಹಾಯ ಕೇಳಿದ್ದೇವೆ. ಎಂದು ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss