Thursday, July 7, 2022

Latest Posts

ನೌಕರರ ವೇತನ ಕಡಿತ ವಿಷಯದಲ್ಲಿ ಕಾಂಗ್ರೆಸ್‌ನ ಬೂಟಾಟಿಕೆ ಬಯಲಿಗೆ!

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕೊರೋನಾ ವೈರಸ್ ಪಿಡುಗಿನ ನಡುವೆಯೂ ಜನರಿಗೆ 1.718 ಕೋ.ರೂ.ಗಳ ಪ್ಯಾಕೇಜ್ ಘೋಷಣೆಯ ಜೊತೆಗೆ ನೌಕರರ ಪೂರ್ಣ ವೇತನ ಮತ್ತು ಹಿರಿಯ ನಾಗರಿಕರ ಪಿಂಚಣಿಗಳನ್ನು ಪಾವತಿಸಿದೆ. ಆದರೆ ಕಾಂಗ್ರೆಸ್ ಕೇಂದ್ರ ಸರಕಾರವನ್ನು ಟೀಕಿಸುತ್ತಿದೆ. ಆದರೆ ತನ್ನ ಪಕ್ಷದ ಆಡಳಿತ ಸೇರಿದಂತೆ ಬಿಜೆಪಿಯೇತರ ರಾಜ್ಯ ಸರಕಾರಗಳು ಏನು ಮಾಡಿವೆ ಎಂಬುದರತ್ತ ನೋಡಿ ಅನಂತರ ಮಾತನಾಡಲಿ. ಕೊರೋನಾ ಪಿಡುಗಿನ ಸಮಯದಲ್ಲೂ ರಾಜಕೀಯ ಮಾಡುವ ಕಾಂಗ್ರೆಸ್‌ನ ಈ ಆಷಾಢಭೂತಿತನ ಅತ್ಯಂತ ಖಂಡನೀಯ ಎಂಬುದಾಗಿ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ತರಾಟೆಗೆತ್ತಿಕೊಂಡಿದ್ದಾರೆ.
ಕಾಂಗ್ರೆಸ್ ಆಳ್ವಿಕೆಯ ರಾಜ್ಯ ಸಹಿತವಾಗಿ ಬಿಜೆಪಿಯೇತರ ಪಕ್ಷಗಳ ಆಳ್ವಿಕೆಯ ಹಲವು ರಾಜ್ಯಗಳಲ್ಲಿ ನೌಕರರ ವೇತನ ಕಡಿತ ಇಲ್ಲವೇ ವೇತನ ನೀಡಿಕೆಯನ್ನು ಮುಂದೂಡಿದ ನಿದರ್ಶನಗಳ ಬಗ್ಗೆ ಕಾಂಗ್ರೆಸ್ ಮೊದಲು ಗಮನ ಹರಿಸಲಿ ಎಂದು ಅವರು ಹೇಳಿದ್ದಾರೆ. ಕಾಂಗ್ರೆಸ್ ಆಡಳಿತದ ರಾಜಸ್ತಾನದಲ್ಲಿ ಅಕಾರಿಗಳ ವೇತನದ ಶೇ.೫೦ಭಾಗದ ಪಾವತಿಯನ್ನು ಮುಂದೂಡಲಾಗಿದ್ದರೆ, ಕೆಳದರ್ಜೆ ನೌಕರರ ವೇತನದಲ್ಲಿ ಶೇ.೩೦ರಷ್ಟನ್ನು ಮುಂದೂಡಲಾಗಿದೆ.
ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಕೂಟ ಆಳ್ವಿಕೆ ನಡೆಸುವ ಮಹಾರಾಷ್ಟ್ರದಲ್ಲಿ ಗ್ರೂಪ್ ‘ಎ ’ಅಕಾರಿಗಳ ಶೇ.50 ವೇತನ ಪಾವತಿಯನ್ನು ಮುಂದೂಡಲಾಗಿದ್ದರೆ, ಗ್ರೂಪ್ ‘ಸಿ’ನೌಕರರ ವೇತನದಲ್ಲಿ ಶೇ.25ಪಾವತಿಯನ್ನು ತಡೆಹಿಡಿಯಲಾಗಿದೆ.ಕಮ್ಯುನಿಸ್ಟ್ ಆಳ್ವಿಕೆಯ ಕೇರಳದಲ್ಲಿ ನೌಕರರ ತಿಂಗಳ ವೇತನದಲ್ಲಿ ಆರು ದಿನಗಳ ವೇತನವನ್ನು ಮುಂದಿನ ೫ತಿಂಗಳುಗಳ ಕಾಲ ಕಡಿತ ಮಾಡಲು ಆದೇಶ ಹೊರಡಿಸಲಾಗಿದೆ.
ಆಂಧ್ರಪ್ರದೇಶದಲ್ಲಿ ಅಖಿಲ ಭಾರತೀಯ ಸೇವೆಯ ಅಕಾರಿಗಳ ಶೇ.60ರಷ್ಟು ವೇತನ ಭಾಗದ ಪಾವತಿಯನ್ನು ಮುಂದೂಡಲಾಗಿದ್ದು, ಇತರ ಅಕಾರಿಗಳ ಶೇ.೫೦ರಷ್ಟು ವೇತನವನ್ನು ತಡೆಹಿಡಿಯಲು ಆದೇಶಿಸಲಾಗಿದೆ. ತೆಲಂಗಾಣದಲ್ಲಿ ಕೂಡಾ ಇದೇ ರೀತಿಯ ಆದೇಶ ಹೊರಡಿಸಲಾಗಿದೆ.ಒಡಿಶಾದಲ್ಲಿ ಅಖಿಲ ಭಾರತೀಯ ಸೇವೆಯ ಅಕಾರಿಗಳ ಶೇ.50ರಷ್ಟು ವೇತನವನ್ನು ತಡೆಹಿಡಿಯಲಾಗಿದೆ ಎಂಬುದನ್ನು ಕೇಂದ್ರ ಸಚಿವರು ಬೊಟ್ಟು ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss