Saturday, July 2, 2022

Latest Posts

ನಿವೃತ್ತ ನೌಕಾಧಿಕಾರಿಗೆ ಹಲ್ಲೆಗೈದ ಶಿವಸೇನೆ ನಾಯಕನಿಗೆ ಒಂದೇ ದಿನದಲ್ಲಿ ಸಿಕ್ಕಿತು ಜಾಮೀನು!

ಮುಂಬೈ: ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಬೆಂಬಲದೊಂದಿಗೆ ಮಹಾಘಟಬಂಧನ್ ಸರಕಾರ ನಡೆಸುತ್ತಿರುವ ಶಿವಸೇನೆಯ ಅಧಿಕಾರದ ಅಟ್ಟಹಾಸ ಮೇರೆ ಮೀರುತ್ತಿದೆ ಎಂಬ ಆರೋಪಗಳ ನಡುವೆಯೇ, ನೌಕಾ ಪಡೆ ನಿವೃತ್ತ ಅಧಿಕಾರಿ ಮೇಲೆ ಹಲ್ಲೆಗೈದು ಬಂಧಿತನಾಗಿದ್ದ ಶಿವಸೇನಾ ನಾಯಕ ಕಮಲೇಶ್ ಕದಮ್ ಮತ್ತು ಇತರ ಐವರಿಗೆ ಒಂದೇ ದಿನದಲ್ಲಿ ಜಾಮೀನು ಸಿಕ್ಕಿದೆ. ಮುಂಬೈಯ ಸಮ್ತಾ ಬಗರ್ ಪೊಲೀಸ್ ಠಾಣೆಯಲ್ಲಿ ಆರು ಮಂದಿಗೂ ಜಾಮೀನು ಸಿಕ್ಕಿದ್ದು, ಪ್ರಕರಣವೀಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ನೌಕಾಧಿಕಾರಿಯ ಮೇಲೆ ಬರ್ಬರ ಆಕ್ರಮಣವೆಸಗಿದ್ದ ಶಿವಸೇನಾ ಮುಖಂಡ ಕದಮ್ ಸೇರಿದಂತೆ ಒಟ್ಟು ಆರು ಮಂದಿ ವಿರುದ್ಧ ಶುಕ್ರವಾರ ಎಫ್‌ಐಆರ್ ದಾಖಲಾಗಿತ್ತು. ಅಚ್ಚರಿ ಎಂದರೆ ಒಂದು ದಿನ ಕಳೆಯುವುದರಲ್ಲಿಯೇ ಈ ಹಲ್ಲೆಕೋರರಿಗೆ ಜಾಮೀನು ಲಭಿಸಿದೆ.
ತಮ್ಮ ಮೇಲೆ ನಡೆದ ಆಕ್ರಮಣಕ್ಕೆ ಸಂಬಂಧಿಸಿ ನೌಕಾಪಡೆಯ ಮಾಜಿ ಅಧಿಕಾರಿ ಮದನ್ ಶರ್ಮ, ವಾಟ್ಸ್ ಆಪ್ ನಲ್ಲಿ ಮೆಸೇಜ್ ಫಾರ್ವರ್ಡ್ ಮಾಡಿದ ಆರೋಪದಲ್ಲಿ ತಮ್ಮ ಮೇಲೆ ಈ ದಾಳಿ ನಡೆದಿದೆ. ೮-೧೦ ಮಂದಿ ಸೇರಿ ನನ್ನ ಮೇಲೆ ಹಲ್ಲೆ ನಡೆಸಿದರು. ಇದಕ್ಕೂ ಮೊದಲು ಬೆದರಿಕೆ ಕರೆಗಳು ಕೂಡಾ ಬರುತ್ತಿದ್ದವು. ಜೀವನವಿಡೀ ದೇಶಕ್ಕಾಗಿ ಸೇವೆಗೈದ ನನ್ನ ಮೇಲೆ ಈ ರೀತಿ ಆಕ್ರಮಣವೆಸಗಿದ್ದು ಆಘಾತತಂದಿದೆ.ಇಂತಹ ಸರಕಾರ ಇರಬಾರದು ಎಂದರು.
ತಂದೆ ಮೇಲೆ ಶಿವಸೇನಾ ನಾಯಕರು ನಡೆಸಿದ ಹಲ್ಲೆ ಬಗ್ಗೆ ಅವರ ಪುತ್ರಿ ಡಾ.ಶೀಲಾ ಶರ್ಮ ಕೂಡಾ ಮಾಹಿತಿ ನೀಡಿ, ನಮ್ಮ ತಂದೆಯವರನ್ನು ಪೊಲೀಸರು ಕರೆದೊಯ್ದರು. ನಾವು ಪ್ರಕರಣ ದಾಖಲಿಸಿದ್ದೇವೆ ಎಂದಿದ್ದರು.
ಆದರೀಗ ಒಂದೇ ದಿನದಲ್ಲಿ ಹಲ್ಲೆಕೋರರಿಗೆ ಜಾಮೀನು ಲಭಿಸಿದ್ದು, ಜನತೆಯಲ್ಲಿ ಆಘಾತ ತಂದಿದೆ. ಈ ಬಗ್ಗೆ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಆಘಾತ ವ್ಯಕ್ತಪಡಿಸಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರನ್ನು ಒತ್ತಾಯಿಸಿದ್ದರು. ಈಗಾಗಲೇ ನಟಿ ಕಂಗನಾ ರಾಣಾವತ್ ಮೇಲೆ ದ್ವೇಷದ ಕ್ರಮಗಳನ್ನು ಕೈಗೊಳ್ಳುತ್ತಿರುವ ಶಿವಸೇನಾ ಸರಕಾರ ನೌಕಾ ಅಧಿಕಾರಿಯ ಮೇಲೆ ದಾಳಿ ನಡೆಸಿರುವುದು ಜನತೆಯಲ್ಲಿ ವ್ಯಾಪಕ ಆಕ್ರೋಶವನ್ನು ಉಂಟು ಮಾಡಿದೆ.

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss