Tuesday, August 16, 2022

Latest Posts

ನ್ಯಾಯಾಲಯದ ಆದೇಶದಂತೆ ಶ್ರೀ ರಾಮಮಂದಿರ ನಿರ್ಮಾಣ, ಸರ್ವ ಜನಾಂಗ ಶಾಂತಿ ಕಾಪಾಡಲು ಸಚಿವ ಜಗದೀಶ ಶೆಟ್ಟರ್ ಮನವಿ

ಧಾರವಾಡ: ಅಯೋಧ್ಯೆಯಲ್ಲಿ ನ್ಯಾಯಾಲಯದ ಆದೇಶದಂತೆ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ನಡೆಯಲಿದೆ. ಇದು ಸೌಹಾರ್ಧಯುತವಾಗಿ ನಡೆಯುತ್ತಿದೆ. ಆ.5ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಂದಿರ ನಿರ್ಮಾಣಕ್ಕೆ ಚಾಲನೆ ನೀಡಲಿದ್ದಾರೆ ಎಂದು ಬೃಹತ್-ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣ ಸರ್ಕಾರದ ನಿರ್ಧಾರವಲ್ಲ. ಅದು ಸರ್ವೋಚ್ಛ ನ್ಯಾಯಾಲಯದ ನಿರ್ಧಾರ. ಕೋರ್ಟ್ ಆದೇಶದಂತೆ ಮಂದಿರ ನಿರ್ಮಿಸಲಾಗುತ್ತಿದೆ. ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವ ಕೆಲಸ ಸರ್ವರೂ ಮಾಡಬೇಕೆಂದು ಮನವಿ ಮಾಡಿದರು.
ಆ.5ರಂದು (ಇಂದು) ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಚಾಲನೆ ಸಿಗಲಿದೆ. ದೇಶದ 130 ಕೋಟಿಯ ಎಲ್ಲ ಜಾತಿಯ ಜನರು ಸೇರಿ ಹಬ್ಬದ ರೀತಿಯಲ್ಲಿ ಇದನ್ನು ಆಚರಿಸಬೇಕು. ಎಲ್ಲರೂ ಕುಡಿಕೊಂಡು ರಾಮ ಮಂದಿರ ನಿರ್ಮಾಣಕ್ಕೆ ಕೈಜೋಡಿಸಬೇಕು. ಸುಳ್ಳು ಸುದ್ದಿ ವದಂತಿ ಕಿವಿಗೊಡದಂತೆ ಕೋರಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss