Sunday, November 29, 2020

Latest Posts

ಸುಖಾಸುಮ್ಮನೆ ಹೇಳಿಕೆ ನೀಡುವ ಬದಲು ಡಿಕೆಶಿ ವಿಡಿಯೋ ದಾಖಲೆಗಳನ್ನು ನೀಡಲಿ: ಆರ್. ಅಶೋಕ್

 ಹೊಸ ದಿಗಂತ ವರದಿ ಪೊನ್ನಂಪೇಟೆ: ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ಅವರ ಆತ್ಮಹತ್ಯೆ ಯತ್ನ ಪ್ರಕರಣ ಸಂಬಂಧ ಸುಖಾಸುಮ್ಮನೆ ಹೇಳಿಕೆ ನೀಡುವ ಬದಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಮ್ಮ ಬಳಿ ಇರುವ ವಿಡಿಯೊ...

ಚಿಕ್ಕಬಳ್ಳಾಪುರಕ್ಕೆ ನಳಿನ್ ಭೇಟಿ: ವಿಶ್ವೇಶ್ವರಯ್ಯ ಪುತ್ಥಳಿಗೆ ಮಾಲಾರ್ಪಣೆ

ಹೊಸ ದಿಗಂತ ಆನ್‌ಲೈನ್ ಡೆಸ್ಕ್: ಚಿಕ್ಕಬಳ್ಳಾಪುರಕ್ಕೆ ಭಾನುವಾರ ಭೇಟಿ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು, ಆದಿಚುಂಚನಗಿರಿ ಶಾಖಾ ಮಠದ ಸ್ವಾಮೀಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ನಂತರ ಮುದ್ದೇನಹಳ್ಳಿಗೆ ತೆರಳಿದ ಅವರು,...

ಕೇರಳ ಪ್ಲಸ್ ಒನ್ ತರಗತಿ ಪ್ರವೇಶಾತಿ: ಮೆರಿಟ್ ಕೋಟಾದಡಿ ಸೇರ್ಪಡೆಗೆ ವ್ಯವಸ್ಥೆ

ಹೊಸ ದಿಗಂತ ವರದಿ ಕಾಸರಗೋಡು ಕೇರಳ ಹೈಯರ್ ಸೆಕೆಂಡರಿ ಪ್ಲಸ್ ಒನ್ ತರಗತಿಯ ವಿವಿಧ ವಿಭಾಗಗಳಿಗೆ ಅರ್ಜಿ ಸಲ್ಲಿಸಿಯೂ ಪ್ಲಸ್ ಒನ್ ಪ್ರವೇಶಾತಿ ಪಡೆಯದವರಿಗೆ ಅವರ ಅರ್ಜಿಯನ್ನು ಪರಿಗಣಿಸಿ ನ.30 ರಂದು ಮೆರಿಟ್ ಕೋಟಾದಡಿ...

ನ್ಯಾ. ಎ.ಜೆ. ಸದಾಶಿವ ಆಯೋಗದ ವರದಿ ಜಾರಿಗಾಗಿ ನವೆಂಬರ್ 2ರಿಂದ ಹಲಗೆ ಚಳವಳಿ: ರಾಜು ಕಡ್ಯಾಳ

ಬೀದರ: ಕರ್ನಾಟಕ ರಾಜ್ಯ ಆದಿಜಾಂಬವ ಸಂಘದ ಬೀದರ ಜಿಲ್ಲಾಧ್ಯಕ್ಷರಾದ ರಾಜು ಕಡ್ಯಾಳ ಅವರು ಬೀದರ ನಗರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ, ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಜಾರಿಗಾಗಿ ಕಳೆದ ಹಲವು ವರ್ಷಗಳಿಂದ ರಾಜ್ಯದ ಮಾದಿಗರು ಹೋರಾಟ ಮಾಡುತ್ತಲೇ ಬಂದಿದ್ದಾರೆ. ಒಬಿಸಿಗೆ ಒಳ ಮೀಸಲಾತಿ ನೀಡಲಾಗಿದೆ. ಬ್ರಾಹ್ಮಣರಿಗೆ ಕೇಳದಯೇ ಶೇಕಡಾ 10 ರಷ್ಟು ಮೀಸಲಾತಿ ಜೊತೆಗೆ ನಿಗಮ ಸ್ಥಾಪನೆ ಮಾಡಲಾಗಿದೆ. ಹೋರಾಟ ಮಾಡುತಿದ್ದರೂ ಮಾದಿಗರಿಗ್ಯಾಕೆ ರಾಜ್ಯ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಆದಿಜಾಂಬವ ಸಂಘದ ಬೀದರ ಜಿಲ್ಲಾಧ್ಯಕ್ಷರಾದ ರಾಜು ಕಡ್ಯಾಳ ಅವರು ಬೀದರ ನಗರದ ಖಾಸಗಿ ಹೋಟಲ್ ಸಭಾಂಗಣದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಕುರಿತು ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಎ.ಬಿ.ಸಿ.ಡಿ. ವರ್ಗಿಕರಣ ಅನುಷ್ಠಾನಗೊಳಿಸುವ ಕುರಿತು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.
ಈ ಕುರಿತು ಬೆಳಗಾಂವ ಜಿಲ್ಲೆಯಲ್ಲಿ ಅನುಷ್ಠಾನಕ್ಕಾಗಿ ಒಂದು ದೊಡ್ಡ ಮಟ್ಟದಲ್ಲಿ ಮುತ್ತಿಗೆ ಹಾಕಲಾಯಿತು. ಕರ್ನಾಟಕದಲ್ಲಿ ಎಂದು ಮಾಡದ ಮುತ್ತಿಗೆಯನ್ನು ಸುಮಾರು ಜೆ.ಡಿ.ಎಸ್. ಕಾಂಗ್ರೆಸ್‍ದ ಮುಖಂಡರು ಬಿ.ಜೆ.ಪಿ. ಸರ್ಕಾರಕ್ಕೆ ಕಣ್ಣು, ಕಿವಿ, ಬಾಯಿ ಇಲ್ಲದಂತೆ ಇರುವ ಈ ಸರ್ಕಾರಕ್ಕೆ ಮಾದಿಗ ಸಮಾಜಕ್ಕೆ ಮಲತಾಯಿ ಧೋರಣೆ ತೋರುತ್ತಿದೆ ಎಂದರು.
1975ನೇ ಸಾಲಿನ ಮೇ-5 ರಂದು ಅಂದಿನ ಪಂಜಾಬನ ಮುಖ್ಯಮಂತ್ರಿ ಜೈಲಸಿಂಗ ಸರ್ಕಾರವು ವರದಿ ಅನುಷ್ಠಾನ ಮಾಡಿತ್ತು. ಆದರೆ ಇ.ವಿ. ಚಿನ್ನಯ್ಯಾ ತೀರ್ಪಿನಿಂದಾಗಿ ಹಿನ್ನಡೆ ಅನುಭವಿಸಿದ್ದ ಪಂಜಾಬ್, ಹರಿಯಾಣ ಮತ್ತು ತಮಿಳುನಾಡು ರಾಜ್ಯಗಳು ಮತ್ತೆ ಹೈಕೋರ್ಟ್ ಮೆಟ್ಟೇಲೇರಿತು. ಸುಪ್ರಿಂ ಕೋರ್ಟ್‍ನ ಐವರು ನ್ಯಾಯಾಧೀಶರ ಸದರಿ ಪೀಠದಲ್ಲಿದ್ದ ಮೊಕದ್ದಮೆಗಳನ್ನು 2014 ಆಗಸ್ಟ್ 20 ರಂದು ಐವರು ನ್ಯಾಯಾಧೀಶರ ಪೀಠಕ್ಕೆ ವರ್ಗಾಯಿಸಲಾಯಿತು. ಸುಮಾರು 25 ವರ್ಷಗಳಿಂದ ಒಂದೇ ಒಂದು ಬೇಡಿಕೆ ಇಟ್ಟುಕೊಂಡು ಹೋರಾಟ ಮಾಡುತ್ತಿರುವ ಸಮಾಜಕ್ಕೆ ಯಾವಾಗ ನ್ಯಾಯ ಸಿಗುತ್ತದೆ ಅಥವಾ ಇಲ್ಲವೆಂಬ ಪ್ರಶ್ನೆ ಕಾಡುತ್ತಿದೆ? ಎಂದರು.
ಕರ್ನಾಟಕ, ತೆಲಂಗಾಣ, ಆಂಧ್ರಾ ಪ್ರದೇಶದ ಮಾದಿಗ ಸಮುದಾಯದ ಮೂರು ದಶಕಗಳ ಹೋರಾಟವನ್ನು ಪೀಠವು ಎತ್ತಿಹಿಡಿದು ಸಂವಿಧಾನಿಕ ಮುದ್ರೆಯೊತ್ತಿದೆ. ಸಾಮಾಜಿಕ ನ್ಯಾಯವು ಪಕ್ಷಗಳ ರಾಜಕೀಯ ದಾಳಿವಾಗದೆ ನಿಜಾರ್ಥದ ನ್ಯಾಯದಾನವಾಗಬೇಕು. ಅತ್ಯಂತ ಶೋಷಿತ ಜಾತಿಗಳ ಜನರಿಗೂ ಶಿಕ್ಷಣ ಉದ್ಯೋಗ ದೊರಕಿ ಅವರ ಮುಖಗಳಲ್ಲಿ ಮಂದಹಾಸ ಮೂಡಬೇಕು. ಇದೇ ಮೀಸಲಾತಿಯ ಮೂಲ ಮಂತ್ರವಾಗಬೇಕು ಎಂದರು.
ಈಗಾಗಲೇ ಕರ್ನಾಟಕ ರಾಜ್ಯದಲ್ಲಿ ನಾನಾ ತರಹದ ಹೋಬಳಿ ಮಟ್ಟದಲ್ಲಿ, ತಾಲ್ಲೂಕಾ ಮಟ್ಟದಲ್ಲಿ ಗ್ರಾಮ ಪಂಚಾಯತ ಮಟ್ಟದಲ್ಲಿ ಮತ್ತು ಆಯಾ ತಹಸೀಲ್ದಾರ್ ಮುಖಾಂತರ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಿಗೆ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಇತ್ತಿಚಿಗೆ ನಡೆದ ವಿಧಾನ ಮಂಡಲದಲ್ಲಿ ಮಂಡಿಸಿ ವರದಿಯನ್ನು ಅನುಷ್ಠಾನಗೊಳಿಸಲು ಆದಿ ಜಾಂಬವ ಸಂಘಟನೆಯ ಮುಖಾಂತರ ಮನವಿ ಸಲ್ಲಿಸಲಾಗಿದೆ.
ಇದೇ ರೀತಿಯಲ್ಲಿ ನವೆಂಬರ್ ತಿಂಗಳಿನ 2ನೇ ತಾರೀಖಿನಂದು ಜನವಾಡಾ ಗ್ರಾಮದಲ್ಲಿ ಹಲಗೆ ಚಳುವಳಿ ಮುಖಾಂತರ ಸಮಾಜ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಇದರಲ್ಲಿ ಆಯಾ ಗ್ರಾಮ ಪಂಚಾಯತ, ತಾಲ್ಲೂಕಾ ಮತ್ತು ಜಿಲ್ಲಾ ವ್ಯಾಪ್ತಿಯಲ್ಲಿ ಸದರಿ ಕಾರ್ಯಕ್ರಮವನ್ನು ನಡೆಸಲಾಗುವುದೆಂದು ಮತ್ತು ಬೀದರ ನಗರದಲ್ಲಿ ಡಿಸೆಂಬರ್ 11 ರಂದು ತಮಟೆ ಚಳುವಳಿ ಮುಖಾಂತರ ಬೀದರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ರಮೇಶ ಕಟ್ಟಿತುಗಾಂವ, ಯಶವಂತ ಗೋರ್‍ಚಿಂಚೋಳಿ, ಪ್ರಸಾದ ಮನ್ನಳ್ಳಿ, ಬಂಟೆ ದರ್ಬಾರೆ ಔರಾದ, ಸಮಾಜದ ಹಿರಿಯ ಮುಖಂಡರು ರಾಮಣ್ಣಾ ಉಜನಿ, ಸಂಜೀವ್ ಕುಮಾರ ಬೇಂದ್ರೆ, ಜಾಫೇಟ್ ಕಡ್ಯಾಳ, ಜೀವನ ರಿಕ್ಕಿ, ಕಮಲಾಕರ ಹೆಗ್ಡೆ, ಸಿ.ಎಂ. ದಾಸ, ವಿಲಸನ್ ಕಮಲಾಪೂರೆ, ಗುಂಡಪ್ಪಾ ಹೊನ್ನಿಕೇರಿ, ದೀಪಕ ರಿಕ್ಕೆ, ಶಾದ್ರೆಕ್ ಬೆಳ್ಳೂರ ಹಾಗೂ ಇನ್ನಿತರ ಪ್ರಮುಖರು ಇದ್ದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

ಸುಖಾಸುಮ್ಮನೆ ಹೇಳಿಕೆ ನೀಡುವ ಬದಲು ಡಿಕೆಶಿ ವಿಡಿಯೋ ದಾಖಲೆಗಳನ್ನು ನೀಡಲಿ: ಆರ್. ಅಶೋಕ್

 ಹೊಸ ದಿಗಂತ ವರದಿ ಪೊನ್ನಂಪೇಟೆ: ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ಅವರ ಆತ್ಮಹತ್ಯೆ ಯತ್ನ ಪ್ರಕರಣ ಸಂಬಂಧ ಸುಖಾಸುಮ್ಮನೆ ಹೇಳಿಕೆ ನೀಡುವ ಬದಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಮ್ಮ ಬಳಿ ಇರುವ ವಿಡಿಯೊ...

ಚಿಕ್ಕಬಳ್ಳಾಪುರಕ್ಕೆ ನಳಿನ್ ಭೇಟಿ: ವಿಶ್ವೇಶ್ವರಯ್ಯ ಪುತ್ಥಳಿಗೆ ಮಾಲಾರ್ಪಣೆ

ಹೊಸ ದಿಗಂತ ಆನ್‌ಲೈನ್ ಡೆಸ್ಕ್: ಚಿಕ್ಕಬಳ್ಳಾಪುರಕ್ಕೆ ಭಾನುವಾರ ಭೇಟಿ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು, ಆದಿಚುಂಚನಗಿರಿ ಶಾಖಾ ಮಠದ ಸ್ವಾಮೀಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ನಂತರ ಮುದ್ದೇನಹಳ್ಳಿಗೆ ತೆರಳಿದ ಅವರು,...

ಕೇರಳ ಪ್ಲಸ್ ಒನ್ ತರಗತಿ ಪ್ರವೇಶಾತಿ: ಮೆರಿಟ್ ಕೋಟಾದಡಿ ಸೇರ್ಪಡೆಗೆ ವ್ಯವಸ್ಥೆ

ಹೊಸ ದಿಗಂತ ವರದಿ ಕಾಸರಗೋಡು ಕೇರಳ ಹೈಯರ್ ಸೆಕೆಂಡರಿ ಪ್ಲಸ್ ಒನ್ ತರಗತಿಯ ವಿವಿಧ ವಿಭಾಗಗಳಿಗೆ ಅರ್ಜಿ ಸಲ್ಲಿಸಿಯೂ ಪ್ಲಸ್ ಒನ್ ಪ್ರವೇಶಾತಿ ಪಡೆಯದವರಿಗೆ ಅವರ ಅರ್ಜಿಯನ್ನು ಪರಿಗಣಿಸಿ ನ.30 ರಂದು ಮೆರಿಟ್ ಕೋಟಾದಡಿ...

ಗಡಿಯಲ್ಲಿ ಪಾಕ್ ಡ್ರೋನ್: ಬಿಎಸ್ಸೆಫ್ ಗುಂಡಿಗೆ ಅಂಜಿ ಮರಳಿ ಗೂಡಿಗೆ!

ಹೊಸ ದಿಗಂತ ಆನ್‌ಲೈನ್ ಡೆಸ್ಕ್: ಇನ್ನೂ ಬುದ್ಧಿ ಕಲಿಯದ ಪಾಕಿಸ್ತಾನ ಮತ್ತೆ ಗಡಿಯಲ್ಲಿ ತನ್ನ ಲಂಪಟತನ ತೋರಿಸಿದೆ. ಜಮ್ಮು ಕಾಶ್ಮೀರದ ಆರ್.ಎಸ್.ಪುರ ಸೆಕ್ಟರ್‌ನ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕ್ ಡ್ರೋನ್ ಹಾರಿಬಿಟ್ಟಿದ್ದು, ಇದರ ಮೇಲೆ ಬಿಎಸ್‌ಎಫ್...

Don't Miss

ಸುಖಾಸುಮ್ಮನೆ ಹೇಳಿಕೆ ನೀಡುವ ಬದಲು ಡಿಕೆಶಿ ವಿಡಿಯೋ ದಾಖಲೆಗಳನ್ನು ನೀಡಲಿ: ಆರ್. ಅಶೋಕ್

 ಹೊಸ ದಿಗಂತ ವರದಿ ಪೊನ್ನಂಪೇಟೆ: ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ಅವರ ಆತ್ಮಹತ್ಯೆ ಯತ್ನ ಪ್ರಕರಣ ಸಂಬಂಧ ಸುಖಾಸುಮ್ಮನೆ ಹೇಳಿಕೆ ನೀಡುವ ಬದಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಮ್ಮ ಬಳಿ ಇರುವ ವಿಡಿಯೊ...

ಚಿಕ್ಕಬಳ್ಳಾಪುರಕ್ಕೆ ನಳಿನ್ ಭೇಟಿ: ವಿಶ್ವೇಶ್ವರಯ್ಯ ಪುತ್ಥಳಿಗೆ ಮಾಲಾರ್ಪಣೆ

ಹೊಸ ದಿಗಂತ ಆನ್‌ಲೈನ್ ಡೆಸ್ಕ್: ಚಿಕ್ಕಬಳ್ಳಾಪುರಕ್ಕೆ ಭಾನುವಾರ ಭೇಟಿ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು, ಆದಿಚುಂಚನಗಿರಿ ಶಾಖಾ ಮಠದ ಸ್ವಾಮೀಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ನಂತರ ಮುದ್ದೇನಹಳ್ಳಿಗೆ ತೆರಳಿದ ಅವರು,...

ಕೇರಳ ಪ್ಲಸ್ ಒನ್ ತರಗತಿ ಪ್ರವೇಶಾತಿ: ಮೆರಿಟ್ ಕೋಟಾದಡಿ ಸೇರ್ಪಡೆಗೆ ವ್ಯವಸ್ಥೆ

ಹೊಸ ದಿಗಂತ ವರದಿ ಕಾಸರಗೋಡು ಕೇರಳ ಹೈಯರ್ ಸೆಕೆಂಡರಿ ಪ್ಲಸ್ ಒನ್ ತರಗತಿಯ ವಿವಿಧ ವಿಭಾಗಗಳಿಗೆ ಅರ್ಜಿ ಸಲ್ಲಿಸಿಯೂ ಪ್ಲಸ್ ಒನ್ ಪ್ರವೇಶಾತಿ ಪಡೆಯದವರಿಗೆ ಅವರ ಅರ್ಜಿಯನ್ನು ಪರಿಗಣಿಸಿ ನ.30 ರಂದು ಮೆರಿಟ್ ಕೋಟಾದಡಿ...
error: Content is protected !!