Wednesday, August 17, 2022

Latest Posts

ನ್ಯಾ. ಸದಾಶಿವ ಆಯೋಗದ ವರದಿಯನ್ನು ಬಹಿರಂಗ ಚರ್ಚೆಗಾಗಿ ಬಿಡುಗಡೆ ಮಾಡಿ: ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಒತ್ತಾಯ

ಬಾಗಲಕೋಟೆ : ಪರಿಶಿಷ್ಟ ಜಾತಿಗಳ ಐಕ್ಯತೆಯ ದೃಷ್ಟಿಯಿಂದ ನ್ಯಾ ಸದಾಶಿವ ಆಯೋಗದ ವರದಿಯನ್ನು ಬಹಿರಂಗ ಚರ್ಚೆಗೆ ರಾಜ್ಯ ಸರ್ಕಾರ ಬಿಡುಗಡೆ ಮಾಡಬೇಕು ಎಂದು ಬಾಗಲಕೋಟೆ ಭೋವಿ ಗುರುಪೀಠದ ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಒತ್ತಾಯಿಸಿದರು.
ಬೆಂಗಳೂರಿನ ಜಸ್ಮಾಭವನದಲ್ಲಿ “ಸುಪ್ರೀಂಕೋರ್ಟ್ ತೀರ್ಪು ಮತ್ತು ಮೀಸಲಾತಿ, ಕೆನೆಪದರ ಮತ್ತು ವರ್ಗಿಕರಣ” ಕುರಿತು ನಡೆದ ಚಿಂತನಾ-ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕೋಟ್ಯಾಂತರ ಹಣ ಖರ್ಚು ಮಾಡಿ ಆಯೋಗ ರಚಿಸಲಾಗಿತ್ತು. ಆದರೆ ವರದಿಯನ್ನು ಬಚ್ಚಿಡಲಾಗಿದೆ. ಭಾದಿತ ನೂರೊಂದು ಸಮುದಾಯಗಳಿಗೆ ವರದಿಯ ದೃಡಿಕೃತ ಪ್ರತಿಯನ್ನು ನೀಡಬೇಕು. ಅಕ್ಷೇಪಣೆ, ತಕರಾರು ಸಲ್ಲಿಸಲು ಸಮುದಾಯಗಳಿಗೆ ಅವಕಾಶ ನೀಡಬೇಕು. ವಿಧಾನಸಭೆಯಲ್ಲಿ ಪ್ರಜಾಸತ್ತಾತ್ಮಕವಾಗಿ ಈ ಬಗ್ಗೆ ವಿಸ್ತೃತವಾದ ಚರ್ಚೆಯ ಅಗತ್ಯವಿದೆ. ಆಯೋಗದ ಉದ್ದೇಶ, ಕಾರ್ಯವಿಧಾನ ಮತ್ತು ಶಿಪಾರಸ್ಸುಗಳ ಕುರಿತು ಸಮುದಾಯಗಳಲ್ಲಿ ಗೊಂದಲಗಳಿವೆ. ಈ ಬಗ್ಗೆ ಎದ್ದಿರುವ ಗುಮಾನಿ ಹಾಗೂ ಆತಂಕವನ್ನು ದೂರ ಮಾಡಲು ಈ ವರದಿಯನ್ನು ಬಹಿರಂಗ ಚರ್ಚೆಗೆ ಒಳಪಡಿಸಬೇಕು.
ಪರಿಶಿಷ್ಟರಲ್ಲಿ ಕೆನೆಪದರ ಜಾರಿಗೊಳಿಸಬಹುದೆನ್ನುವ ಸುಪ್ರೀಂಕೋರ್ಟಿನ ಅಭಿಪ್ರಾಯ ನ್ಯಾಯ ಸಮ್ಮತವಲ್ಲ. ಸಾಮಾಜಿಕ ತಾರತಮ್ಯದ ಗಂಭೀರತೆಯನ್ನು ನ್ಯಾಯಾಲಯ ಗಮನಿಸಿಲ್ಲ ಅನಿಸುತ್ತೆ. ಶತಮಾನಗಳಿಂದ ಸಾಮಾಜಿಕ ತಾರತಮ್ಯಕ್ಕೆ ಒಳಗಾಗಿದ್ದ ಜನರನ್ನು ಪರಿಶಿಷ್ಟ ಪಟ್ಟಿಯಿಂದ ಹೊರಹಾಕುವ ದುರುದ್ದೇಶ ಇದರಲ್ಲಿರುವಂತೆ ಕಾಣುತ್ತಿದೆ. ಈ ಬಗ್ಗೆ ಸಮಗ್ರ ಚರ್ಚೆಯ ಅಗತ್ಯವಿದೆ.
ಎಲ್ಲಾ ಸಮುದಾಯಗಳಿಗೂ ಸಾಮಾಜಿಕ ನ್ಯಾಯ ಮತ್ತು ಸೂಕ್ತ ಪ್ರಾತಿನಿಧ್ಯ ಇಂದಿನ ಅಗತ್ಯ. ಅದಕ್ಕಾಗಿ ದೇಶವ್ಯಾಪಿ ಎಲ್ಲಾ ಜಾತಿಗಳ ಪಾರದರ್ಶಕ ಮತ್ತು ವೈಜ್ಞಾನಿಕ ಸಮೀಕ್ಷೆಯ ಅಗತ್ಯವಿದೆ. ಸಾಮಾಜಿಕ ಸ್ಥಿತಿ ಮತ್ತು ಹಿಂದುಳಿದಿರುವಿಕೆಯ ಅಧಾರದ ಮೇಲೆ ಪ್ರಾತಿನಿಧ್ಯ ಹಂಚಿಕೆ ಮಾಡಬೇಕಿದೆ.
ಎಡ-ಬಲ, ಸ್ವರ್ಶ್ಯ-ಅಸ್ಪ್ರಶ್ಯ, ಅಲೆಮಾರಿ-ಅಧಿವಾಸಿ ಗುರುತುಗಳ ಆಚೆಗೆ ಪರಿಶಿಷ್ಟರು ಒಗ್ಗಟ್ಟನ್ನು ಕಾಪಾಡಿಕೊಳ್ಳುವ ಅಗತ್ಯವಿದೆ. ಒಟ್ಟು ಮೀಸಲಾತಿಯ ಪ್ರಮಾಣ ಕ್ಷೀಣಿಸುತ್ತಿದೆ. ಖಾಸಗಿ ರಂಗದಲ್ಲಿ ಅವಕಾಶವಿಲ್ಲ. ಸಾರ್ವಜನಿಕ ಕ್ಷೇತ್ರದ ಸಂರಕ್ಷಣೆಗಾಗಿ ಎಲ್ಲಾ ಜನಸಮುದಾಯಗಳು ಸಂಘಟಿತರಾಗಬೇಕು ಎಂದು ಕರೆ ನೀಡಿದರು.
ಸರ್ಧಾರ್ ಸೇವಾಲಾಲ್ ಸ್ವಾಮೀಜಿ, ಡಾ.ರವಿ ಮಾಕಳಿ, ರಾಘವೇಂದ್ರ ನಾಯಕ್, ಎನ್ ಅನಂತನಾಯಕ, ಬಾಲರಾಜ್ ನಾಯಕ್, ಆದರ್ಶ ಯಲಪ್ಪ, ಕಿರಣ್ ಕೊತ್ತಗೆರೆ, ಸುಭಾಷ್ ರಾಠೋಡ್,ಅಶೋಕ ಲಿಂಬಾವಳಿ, ಸುಗುಣ, ಜಯರಾಂ ಸೇರಿದಂತೆ ಒಕ್ಕೂಟದ ಎಲ್ಲಾ ಜಿಲ್ಲೆಗಳ ನೂರಾರು ಮುಖಂಡರು ಭಾಗವಹಿಸಿದ್ದರು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!