ವೆಲ್ಲಿಂಗ್ಟನ್: ನೂರು ದಿನಗಳ ನಂತರ ಪತ್ತೆಯಾಗಿರುವ ಕೊರೋನಾ ಸೋಂಕಿತರ ಸಂಖ್ಯೆಯನ್ನು ಸುಧಾರಿಸಲು ನ್ಯೂಜಿಲ್ಯಾಂಡ್ ಪ್ರಧಾನ ಮಂತ್ರಿ ಜಸಿಂಡಾ ಆರ್ಡರ್ನ್
ದೇಶದ ಸಾರ್ವತ್ರಿಕ ಚುನಾವಣೆಯನ್ನು 4 ವಾರಗಳ ಕಾಲ ಮುಂದೂಡಿದೆ. ಪೂರ್ವ ನಿಶ್ಚಯದಂತೆ ಸೆ.19ರಂದು ಚುನಾವಣೆ ನಡೆಯಬೇಕಿತ್ತು, ಆದರೆ ದೇಶದಲ್ಲಿ ಪತ್ತೆಯಾದ ಕೊರೋನಾ ಸೋಂಕಿನಿಂದ ಚುನಾವಣೆಯನ್ನು ಅ.17ಕ್ಕೆ ಮುಂದೂಡಲಾಗಿದೆ ಎಂದು ಪ್ರಧಾನಿ ಆರ್ಡರ್ನ್ ಘೋಷಿಸಿದರು.
ನ್ಯೂಜಿಲ್ಯಾಂಡ್ ಸರ್ಕಾರ ಈಗಾಗಲೇ ಕೊರೋನಾ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಂಡಿದ್ದು, ಆಕ್ಲೆಂಡ್ ನಲ್ಲಿ 12 ದಿನಗಳ ಲಾಕ್ ಡೌನ್ ಘೋಷಿಸಿದೆ. ಭಾನುವಾರ ದೇಶದಲ್ಲಿ ಮತ್ತೆ 12 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟಾರೆ 49 ಸಕ್ರಿಯ ಕೊರೋನಾ ಪ್ರಕರಣಗಳು ದಾಖಲಾಗಿದೆ ಎಂದು ವರದಿ ತಿಳಿಸಿದೆ.