ಆಕ್ಲೆಂಡ್: ವಿಶ್ವದಲ್ಲಿ ಕೊರೋನಾ ತನ್ನ ಆರ್ಭಟ ಹೆಚ್ಚಿಸುತ್ತಿರುವುದು ಒಂದೆಡೆಯಾದರೆ, ನ್ಯೂಜಿಲೆಂಡ್ನಲ್ಲಿ ಯಾವುದೇ ಕೊರೋನಾ ವೈರಸ್ ಪ್ರಕರಣಗಳಿಲ್ಲ ಎಂದು ಸರ್ಕಾರ ಸೋಮವಾರ ಮಧ್ಯಾಹ್ನ(INZ Time) ಪ್ರಕಟಿಸಿದೆ.
ಕಳೆದ 17 ದಿನಗಳಿಂದ ಯಾವುದೇ ಕೊರೋನಾ ಪ್ರಕರಣಗಳು ಪತ್ತೆಯಾಗದ ಹಿನ್ನಲೆ ನ್ಯೂಜಿಲೆಂಡ್ ಮೊದಲ ಕೊರೋನಾ ಮುಕ್ತ ರಾಷ್ಟ್ರ ಎಂದು ಘೋಷಿಸಿದೆ.
ಫೆ. 28 ರಿಂದ ಯಾವುದೇ ಸಕ್ರಿಯೆ ಪ್ರಕರಣಗಳು ಇಲ್ಲದಿರುವುದು ಖಂಡಿತವಾಗಿಯೂ ನಮ್ಮ ಪ್ರಯಾಣದಲ್ಲಿ ಮಹತ್ವದ ಗುರುತಾಗಿದೆ. ಆದರೆ ನಾವು ಮೊದಲೇ ಹೇಳಿದಂತೆ, ಕೋವಿಡ್ -19 ವಿರುದ್ಧ ನಡೆಯುತ್ತಿರುವ ಜಾಗರೂಕತೆಯು ಅಗತ್ಯವಾಗಿ ಮುಂದುವರಿಯುತ್ತದೆ ಎಂದು ಆರೋಗ್ಯ ಮಹಾನಿರ್ದೇಶಕ ಡಾ. ಆಶ್ಲೇ ಬ್ಲೂಮ್ ಪೀಲ್ಡ್ ತಿಳಿಸಿದರು.
ಮಾ. 23 ರಂದು ಮೊಟ್ಟ ಮೊದಲ ಬಾರಿಗೆ ಕಾಣಿಸಿಕೊಂಡ 100 ಪ್ರಕರಣಗಳಿಗೆ ಪ್ರಧಾನಿ ಎಂ.ಎಸ್. ಅರ್ಡೆರ್ನ್ 51 ದಿನಗಳ ಸಂಪೂರ್ಣ ಲಾಕ್ ಡೌನ್ ಮಾಡಿದರು. ಲಾಕ್ ಡೌನ್ ವೇಳೆಯಲ್ಲಿ ತುರ್ತು ಆರೋಗ್ಯ ಸೇವೆ ಹಾಗೂ ಅಗತ್ಯ ಸಾಮಾಗ್ರಿ ಖರೀದಿಸಲು ಸೂಪರ್ ಮಾರ್ಕೆಟ್ ಹೊರತುಪಡಿಸಿ ಬೇರೆ ಯಾವುದಕ್ಕೂ ಮನೆಯಿಂದ ಹೊರಗೆ ಬರದಂತೆ ನಿರ್ದೇಶಿಸಲಾಗಿತ್ತು ಎಂದರು.