Friday, August 12, 2022

Latest Posts

ನ್ಯೂಯಾರ್ಕ್ Times Square ನಲ್ಲಿ ರಾರಾಜಿಸಿದ ಭವ್ಯ ರಾಮ ಮಂದಿರದ 3ಡಿ ಚಿತ್ರಗಳು

ವಾಷಿಂಗ್ಟನ್: ಶ್ರೀರಾಮನ ಚಿತ್ರ ಮತ್ತು ಅಯೋಧ್ಯೆಯ ಭವ್ಯವಾದ ರಾಮ ಮಂದಿರದ 3D ಭಾವಚಿತ್ರವನ್ನು ನಿನ್ನೆ ನಡೆದ ಅದ್ಭುತ ಮಂದಿರ ಸಮಾರಂಭದ ನೆನಪಿಗಾಗಿ ನ್ಯೂಯಾರ್ಕ್ ಐಕಾನಿಕ್ ಟೈಮ್ಸ್ ಸ್ಕ್ವೇರ್ ದೈತ್ಯ ಬಿಲ್ ಬೋರ್ಡ್ ನಲ್ಲಿ ರಾರಾಜಿಸಿತು.

ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಇದು “ಸುವರ್ಣ ಇತಿಹಾಸ” ಬರೆಯಲಾಗಿದೆ ಎಂದು ಹೇಳಿದರು. ಶ್ಲೋಕಗಳ ಪಠಣದ ಮಧ್ಯೆ, ಪ್ರಧಾನಿ ಮೋದಿ ಅವರು ಮಂದಿರದ ಮೊದಲ ಇಟ್ಟಿಗೆಗಳಿಗೆ ಪೂಜೆ ಸಲ್ಲಿಸಿದರು.

ಶ್ರೀರಾಮನ ಅತಿದೊಡ್ಡ ಹೆಚ್.ಡಿ ಪ್ರದರ್ಶನವು ಟೈಮ್ಸ್ ಸ್ಕ್ವೇರ್ನಲ್ಲಿ ಹಿಂದೂ ದೇವತೆಯ ಅತ್ಯಂತ ದುಬಾರಿ ಡಿಜಿಟಲ್ ಬಿಲ್ ಬೋರ್ಡ್ ಗಳಲ್ಲಿ ಒಂದಾಗಿದೆ.

ಈ ಸಂದರ್ಭಕ್ಕಾಗಿ ಪ್ರಮುಖ ಜಾಹೀರಾತು ಫಲಕಗಳಲ್ಲಿ ದೈತ್ಯ ನಾಸ್ಡಾಕ್ ಪರದೆ ಮತ್ತು 17,000 ಚದರ ಅಡಿ ಸುತ್ತುಲು ಎಲ್ಇಡಿ ಪ್ರದರ್ಶನ ಪರದೆಯಿದ್ದು, ಅದರಲ್ಲಿ ರಾಮ ನ ಭವ್ಯ ಮಂದಿರದ ಪ್ರದರ್ಶಿಸಲಾಯಿತು ಎಂದು ಪ್ರಮುಖ ಸಮುದಾಯದ ಮುಖಂಡ ಮತ್ತು ಅಮೇರಿಕನ್ ಇಂಡಿಯಾ ಸಾರ್ವಜನಿಕ ವ್ಯವಹಾರಗಳ ಸಮಿತಿಯ ಅಧ್ಯಕ್ಷ ಜಗದೀಶ್ ಸೆಹಾನಿ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ  ರಾಮಮಂದಿರದ ಭೂಮಿ ಪೂಜೆ ನೆರವೇರಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss