Sunday, August 14, 2022

Latest Posts

ನ್ಯೂಯಾರ್ಕ್ ಸಣ್ಣ ಉದ್ಯಮಕ್ಕೆ ಕೊರೊನಾ ಹೊಡೆತ: ಬೇಸತ್ತ ಮಹಿಳೆ ಮಾಡುತ್ತಿರುವುದೇನು ಗೊತ್ತಾ?

ನ್ಯೂಯಾರ್ಕ್: ಮಣ್ಣಿನ ಕಲಾಕೃತಿಗಳ ಸ್ಟುಡಿಯೋ ನಡೆಸುತ್ತಿದ್ದ 64 ವರ್ಷದ ಮಹಿಳೆ‌ ಕೊರೋನಾ‌ದಿಂದಾಗಿ ಬೇಸತ್ತು ಮನೆಯಲ್ಲಿಯೇ ಕಲಾಕೃತಿ ತಯಾರಿಸುತ್ತಿದ್ದಾಳೆ.

ಹಲವಾರು ವರ್ಷದಿಂದ ಮಣ್ಣಿನ ಜಗ್,ಮಡಿಕೆಗಳನ್ನು ಮಾಡಿ ಅವುಗಳಿಗೆ ವಿಶೇಷ ಬಣ್ಣಗಳನ್ನು ನೀಡಿ ಮಾರಾಟ ಮಾಡುತ್ತಿದ್ದ ವಿಕ್ಟೋರಿಯಾ ರೋಸೆನ್ ಬ್ಲಾಟ್ ತನ್ನ ಕುಂಬಾರಿಕೆ ವೃತ್ತಿಗೆ ಕೊರೋನಾ ದಿಂದ ಕುತ್ತುಂಟಾಗಿದ್ದು,ಲಾಕ್ ಡೌನ್ ಹೊತ್ತಲ್ಲಿ ತನ್ನ ಸ್ಟುಡಿಯೋ ವನ್ನು ಒತ್ತಾಯಪೂರ್ವಕವಾಗಿ ಬಂದ್ ಮಾಡಲಾಗಿದೆ ಎಂದಿದ್ದಾಳೆ.

ಅಲ್ಲಿರುವ ಯಂತ್ರಗಳನ್ನು ಮಾರುವ ಯೋಚನೆ ಮಾಡಿರುವ ವಿಕ್ಟೋರಿಯಾ ಸಣ್ಣ ಚಕ್ರವನ್ನು ಖರೀದಿಸಿದ್ದು ಅದರಲ್ಲಿ ಸಣ್ಣ ಪುಟ್ಟ ಕಲಾಕೃತಿಗಳನ್ನು ಮಾಡಲು ನಿರ್ಧರಿಸಿದ್ದಾಳೆ. ಕೊರೋನಾ ದಿಂದಾಗಿ ನ್ಯೂಯಾರ್ಕ್ ನಲ್ಲಿ ‌ಬಹುತೇಕ ಲಾಕ್ ಡೌನ್ ಇದ್ದು ತಮ್ಮ ವ್ಯವಹಾರ ವನ್ನು ಮುಂದುವರೆಸಲು ಮನೆಯಲ್ಲಿಯೇ ಜಗ್ಗ್, ಮಡಿಕೆಗಳನ್ನು ಮಾಡಲು ನಿರ್ಧರಿಸಿದ್ದಾರೆ.

ಮತ್ತೋರ್ವ ಉದ್ಯಮಿ ತಮ್ಮ ಉದ್ಯಮ ಹೆಚ್ಚು ಅಭಿವೃದ್ಧಿ ಯಾಗುವ ಹಂತದಲ್ಲಿತ್ತು. ಆದರೆ ಈಗ ಆದಾಯ ಕುಸಿದಿದೆ. ಇದು ಟ್ರಿಕಲ್ ಎಫೆಕ್ಟ್ ನಂತಿದ್ದು ಬ್ಯಾಂಕ್ ಗಳು ತಮ್ಮ ಹಣವನ್ನು ಹೇಗೆ ವಸೂಲಿ ಮಾಡುತ್ತವೆಯೋ ಜಮೀನುದಾರರು ತಮ್ಮ ಆದಾಯವನ್ನು ಬಯಸುತ್ತಾನೆ.ಆದರೆ ನಾವು ಸಾಧ್ಯವಾಗದಿದ್ದರೂ ಪಾವತಿಸಬೇಕಾಗುತ್ತದೆ ಅಂತಾರೆ ಪೆಡ್ರೋ ರಾಮಿರೆಜ್.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss