Tuesday, June 28, 2022

Latest Posts

ನ್ಯೂ ಡೈಮಂಡ್ ಹಡಗಿನಲ್ಲಿ ಬೆಂಕಿ: ಭಾರತೀಯ ನೌಕಪಡೆ, ಕರಾವಳಿ ರಕ್ಷಣಾ ಪಡೆಯ ಸಹಾಯದಿಂದ ತಪ್ಪಿತು ಭಾರೀ ಅನಾಹುತ

ನವದೆಹಲಿ: ಸಂಪೂರ್ಣ ತೈಲ ತುಂಬಿದ್ದ ನ್ಯೂ ಡೈಮಂಡ್ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಶ್ರೀಲಂಕಾ ನೌಕಪಡೆ ಸಹಯೋಗದೊಂದಿಗೆ ಭಾರತೀಯ ನೌಕಪಡೆಯ ಎಂಟು ಹಡಗುಗಳು ಮತ್ತು ಕರಾವಳಿ ರಕ್ಷಣಾ ಪಡೆ ಹರಸಾಹಸ ನಡೆಸುವ ಮೂಲಕ ತೈಲ ಸೋರಿಕೆಯಾಗದಂತೆ ತಡೆಗಟ್ಟಿದ್ದಾರೆ . ಇದರಿಂದ ಆಗಬಹುದಾದ ಭಾರೀ ಅನಾಹುತವೊಂದು ತಪ್ಪಿದೆ.
ಈ ಬಗ್ಗೆ ಮಾಹಿತಿ ನೀಡಿದ ಭಾರತೀಯ ತೈಲ ನಿಗಮದ ಮುಖ್ಯಸ್ಥ ಶ್ರೀಕಾಂತ್ ಮಾಧವ್ ವೈದ್ಯ, ಶ್ರೀಲಂಕಾ ನೌಕಪಡೆ ಸಹಯೋಗದೊಂದಿಗೆ ಭಾರತೀಯ ಕರಾವಳಿ ರಕ್ಷಣಾ ಪಡೆ ಮತ್ತು ಭಾರತೀಯ ನೌಕಪಡೆ ಯಶಸ್ವಿಯಾಗಿ ನ್ಯೂ ಡೈಮಂಡ್ ಹಡಗಿನಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿವೆ ಎಂದು ಹೇಳಿದ್ದಾರೆ.
ನ್ಯೂ ಶಿಪ್ಪಿಂಗ್‌ನಿಂದ ನಿಯಂತ್ರಿಸಲ್ಪಡುವ 20 ವರ್ಷದ ಹಳೆಯ ನ್ಯೂ ಡೈಮಂಡ್ ಹಡಗಿನ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಾಗ ಸುಮಾರು 2,70,000 ಟನ್ ಕುವೈತ್ ಕಚ್ಚಾ ತೈಲವನ್ನು ಮಿನಾ-ಅಲ್-ಅಹ್ಮಾದಿಯಿಂದ ಒಡಿಶಾದ ಪ್ಯಾರಾದೀಪ್ ಗೆ ಸಾಗಿಸಲಾಗುತಿತ್ತು.
ಸೆಪ್ಟೆಂಬರ್ ಮೂರರಂದೇ ಎಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಶ್ರೀಲಂಕಾ ಪೂರ್ವ ಕರಾವಳಿಯಿಂದ 38 ನ್ಯಾಟಿಕಲ್ ಮೈಲಿ ದೂರದಲ್ಲಿತ್ತು ಎನ್ನಲಾಗಿದ್ದು, ಬೆಂಕಿಯನ್ನು ನಂದಿಸಿರುವುದರಿಂದ 2 ಮಿಲಿಯನ್ ಬ್ಯಾರೆಲ್ ಗಳಷ್ಟು ಕಚ್ಚಾ ತೈಲ ಸುರಕ್ಷಿತವಾಗಿದೆ ಎಂದು ಅವರು ಹೇಳಿದ್ದಾರೆ.
ಭಾರತೀಯ ಹಾಗೂ ಶ್ರೀಲಂಕಾ ನೌಕಪಡೆಯಿಂದ ಹರಸಾಹಸದಿಂದ ಇದ್ದು ತಪ್ಪಿದ್ದು, ಹಡಗಿನಲ್ಲಿದ್ದ 21 ಮಂದಿ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss