Saturday, July 2, 2022

Latest Posts

ನ.1ರಿಂದಲೇ ರಾಷ್ಟ್ರೀಯ ಹೆದ್ದಾರಿ ಎನ್. ಹೆಚ್ .75 ದುರಸ್ತಿ ಕಾಮಗಾರಿ ಆರಂಭ, ಉದ್ದೇಶಿತ ಪ್ರತಿಭಟನೆ ಕೈ ಬಿಡಲು ಜಿಲ್ಲಾಧಿಕಾರಿ ಗಿರೀಶ್ ಮನವಿ

ಹಾಸನ: ಸಕಲೇಶಪುರ ಮಾರ್ಗವಾಗಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಎನ್ ಹೆಚ್ .75 ದುರಸ್ಥಿ ಕಾಮಗಾರಿ ನ.1 ರಿಂದಲೇ ಪ್ರರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಆರ್ .ಗಿರೀಶ್ ತಿಳಿಸಿದ್ದಾರೆ.
ಇದೇ ರೀತಿ ಆನೆ ಹಾವಳಿ ತಡೆಗೆ ಶಾಶ್ವತ ಪರಿಹಾರ ರೂಪಿಸುವ ಕುರಿತು ನ.6 ರ ನಂತರ ಅರಣ್ಯ ಸಚಿವರೊಂದಿಗೆ ಸಭೆ ಏರ್ಪಡಿಸಿ ಅಗತ್ಯ ಕ್ರಮಗಳ ಬಗ್ಗೆ ನಿರ್ಧರಿಸಲಾಗುವುದು ಈ ಹಿನ್ನೆಲೆ ಯಲ್ಲಿ ಸಕಲೇಶಪುರ ಆಲೂರು ಕ್ಷೇತ್ರದ ಶಾಸಕರಾದ ಹೆಚ್.ಕೆ ಕುಮಾರಸ್ವಾಮಿ ಅವರು ಈ ಬೇಡಿಕೆಗಳನ್ನು ಆಧರಿಸಿದ ತಮ್ಮ ಉದ್ದೇಶಿತ ಪ್ರತಿಭಟನೆ ಕೈ ಬಿಡುವಂತೆ ಜಿಲ್ಲಾಧಿಕಾರಿಯವರು ಮನವಿ ಮಾಡಿದ್ದಾರೆ.
ಸಕಲೇಶಪುರ -ಆಲೂರು ಶಾಸಕರಾದ ಹೆಚ್.ಕೆ‌.ಕುಮಾರಸ್ವಾಮಿ ಅವರು ಹಾಸನ – ಮಂಗಳೂರು ನಡುವಿನ ಸಕಲೇಶಪುರ ಮಾರ್ಗದ ರಾಷ್ಟ್ರೀಯ ಹೆದ್ದಾರಿ ಎನ್. ಹೆಚ್. 75 ದುರಸ್ಥಿಗೂ ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ರೂಪಿಸುವಂತೆ ಒತ್ತಾಯಿಸಿ ನ1ರಂದು ಪ್ರತಿಭಟನೆ ನಡೆಸುವುದಾಗಿ ಪ್ರಕಟಿಸಿದ್ದರು .
ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಸಕಾರಾತ್ಮಕ ಕ್ರಮಗಳಿಗೆ ಮಂದಾಗಿರುವುದರಿಂದ ಶಾಸಕರು ಪ್ರತಿಭಟನೆ ನಿರ್ಧಾರವನ್ನು ಕೈ ಬಿಡಬೇಕೆಂದು ಕೋರಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss