Wednesday, August 10, 2022

Latest Posts

ನ. 1ರಿಂದ ಮೊದಲ ವರ್ಷದ ಪದವಿ, ಸ್ನಾತಕೋತ್ತರ ತರಗತಿ ಆರಂಭ

ಹೊಸದಿಲ್ಲಿ: 2020-21ನೇ ಸಾಲಿನ ಶೈಕ್ಷಣಿಕ ಅವಧಿ ನವೆಂಬರ್ 1ರಿಂದ ಆರಂಭವಾಗಲಿದ್ದು, ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಮಾರ್ಗಸೂಚಿಪ್ರಕಾರ 2020ರ ಅಕ್ಟೋಬರ್ ಒಳಗೆ ಮೆರಿಟ್ /ಪ್ರವೇಶ ಆಧಾರಿತ ಪ್ರವೇಶ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಶಿಕ್ಷಣ ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ.

ಆದರೆ, ಒಂದು ವೇಳೆ ಅರ್ಹತಾ ಪರೀಕ್ಷೆಗಳ ಫಲಿತಾಂಶ ಘೋಷಣೆ ವಿಳಂಬವಾಗುವ ಸಾಧ್ಯತೆ ಕಂಡು ಬಂದರೆ, ವಿಶ್ವವಿದ್ಯಾಲಯಗಳು ನವೆಂಬರ್ 18ರಿಂದ ಅಧಿವೇಶನ ವನ್ನು ಪ್ರಾರಂಭಿಸಬಹುದು ಎಂದು ಯುಜಿಸಿ ಹೊರಡಿಸಿರುವ ಇತ್ತೀಚಿನ ಮಾರ್ಗಸೂಚಿಗಳು ಹೇಳುತ್ತವೆ.
ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು ಶುಕ್ರವಾರ ಟ್ವಿಟರ್ ನಲ್ಲಿ ಈ ವಿಷಯ ಪ್ರಕಟಿಸಿದ್ದು, ‘#COVID19 ಸಾಂಕ್ರಾಮಿಕ ರೋಗವನ್ನು ಗಮನದಲ್ಲಿಟ್ಟುಕೊಂಡು, 2020-21ನೇ ಸಾಲಿನ ಅಧಿವೇಶನಕ್ಕಾಗಿ ಯುಜಿ ಮತ್ತು ಪಿಜಿ ವಿದ್ಯಾರ್ಥಿಗಳ ಶೈಕ್ಷಣಿಕ ಕ್ಯಾಲೆಂಡರ್ ಮಾರ್ಗಸೂಚಿಗಳನ್ನು ಹೊರಡಿಸಿದೆ. ಮಾರ್ಗಸೂಚಿಪ್ರಕಾರ, ಖಾಲಿ ಇರುವ ಸೀಟುಗಳನ್ನು ಭರ್ತಿ ಮಾಡಲು ಪ್ರವೇಶಗಳಿಗೆ ನವೆಂಬರ್ 31 ಕೊನೆಯ ದಿನಾಂಕವಾಗಿರುತ್ತದೆ. ಮೊದಲ ವರ್ಷದ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳ ಶೈಕ್ಷಣಿಕ ಅಧಿವೇಶನಗಳನ್ನು ಆದಷ್ಟು ಬೇಗ ಪ್ರಾರಂಭಿಸಲು ಸೂಚಿಸಲಾಗಿದೆ. ಅರ್ಹತಾ ಪರೀಕ್ಷೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಅವರು ಡಿಸೆಂಬರ್ 31ರೊಳಗೆ ಸ್ವೀಕರಿಸಬಹುದು ಎಂದು ಯುಜಿಸಿ ಮಾರ್ಗಸೂಚಿ ತಿಳಿಸಿದೆ.
ಅಲ್ಲದೆ, 2020-21 ಮತ್ತು 2021-22 ರ ಶೈಕ್ಷಣಿಕ ಅಧಿವೇಶನಗಳಿಗೆ ಆರು ದಿನಗಳ ವಾರದ ಮಾದರಿಯನ್ನು ಅನುಸರಿಸುವಂತೆ ವಿಶ್ವವಿದ್ಯಾಲಯಗಳಿಗೆ ಸೂಚಿಸಿದೆ., 2021ರ ಮಾರ್ಚ್ 8ರಿಂದ 26ರ ನಡುವೆ ಮೊದಲ ಸೆಮಿಸ್ಟರ್ /ವರ್ಷದ ಪರೀಕ್ಷೆಗಳನ್ನು ನಡೆಸುವಂತೆ ಯುಜಿಸಿ ಯು ಸಂಸ್ಥೆಗಳಿಗೆ ಸೂಚಿಸಿದೆ. ತರಗತಿಗಳ ನಷ್ಟ ಸರಿದೂಗಿಸಲು ವಿರಾಮವನ್ನು ಮೊಟಕುಗೊಳಿಸದೇ ನಡೆಸಬೇಕು . COVID-19 ಸಾಂಕ್ರಾಮಿಕ ರೋಗವನ್ನು ಹಿನ್ನೆಲೆಯಲ್ಲಿ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಕಡ್ಡಾಯ ಮಾರ್ಗಸೂಚಿಗಳನ್ನು ಅನುಸರಿಸುವಂತೆ ಪ್ರತಿಯೊಂದು ಕಾಲೇಜು/ವಿಶ್ವವಿದ್ಯಾಲಯಗಳಿಗೆ ನಿರ್ದೇಶನ ನೀಡಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss