Saturday, July 2, 2022

Latest Posts

ನ. 11ರಿಂದ ಕೋಯಿಕೋಡ್‌- ಬೆಂಗಳೂರು ನಡುವಿನ ವಿಮಾನ ಹಾರಾಟ ಸೇವೆಗೆ ಅಲೈಯನ್ಸ್ ಏರ್ ಸಿದ್ಧ

ಮುಂಬೈ: ಕೊರೋನಾ ಸೋಂಕಿನ ಪ್ರಮಾಣ ಇಳಿಮುಖವಾಗುತ್ತಿದ್ದು, ನವೆಂಬರ್ 11ರಿಂದ ಕೋಯಿಕೋಡ್‌ನಿಂದ ಬೆಂಗಳೂರಿಗೆ ವಿಮಾನ ಹಾರಾಟ ಸೇವೆ ಆರಂಭವಾಗಲಿದೆ ಎಂದು ಅಲೈಯನ್ಸ್ ಏರ್ ತಿಳಿಸಿದೆ.
ಮಂಗಳವಾರ ಹೊರತುಪಡಿಸಿ ವಾರದಲ್ಲಿ ಆರು ಬಾರಿ ಹೊಸ ಮಾರ್ಗದಲ್ಲಿ ವಿಮಾನ ಹಾರಾಟ ನಡೆಸಲಾಗುವುದು ಎಂದು ಅಲೈಯನ್ಸ್ ಏರ್ ಪ್ರಕಟಣೆಯಲ್ಲಿ ತಿಳಿಸಿದೆ.
ಏರ್ ಇಂಡಿಯಾದ ಪ್ರಾದೇಶಿಕ ಅಂಗಸಂಸ್ಥೆಯು ತನ್ನ 70 ಆಸನಗಳ ಎಟಿಆರ್ 72 ವಿಮಾನಗಳಲ್ಲಿ ಒಂದನ್ನು ನಿಯೋಜಿಸಲಿದೆ. ಫ್ಲೈಟ್​ 9ಐ- 521 ವಿಮಾನವು ಬೆಳಗ್ಗೆ 6.30ಕ್ಕೆ ಬೆಂಗಳೂರಿನಿಂದ ಹೊರಟು ಬೆಳಗ್ಗೆ 7.55ಕ್ಕೆ ಕೋಯಿಕೋಡ್‌ಗೆ ತಲುಪಲಿದೆ ಎಂದಿದೆ.
ಕೋಯಿಕೋಡ್‌ನಿಂದ 9ಐ- 522 ಹೆಸರಿನಡಿ ಬೆಳಗ್ಗೆ 8.25ಕ್ಕೆ ಹೊರಟು ಬೆಳಗ್ಗೆ 9.40ಕ್ಕೆ ಬೆಂಗಳೂರು ತಲುಪಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss