Sunday, August 14, 2022

Latest Posts

ನ.13 ಕ್ಕೆ ವಿಜಯನಗರ ಸಾಮ್ರಾಜ್ಯದ ಇತಿಹಾಸ ಸಾರುವ ಹಂಪಿ ಉತ್ಸವ 

ಹೊಸ ದಿಗಂತ ವರದಿ, ಬಳ್ಳಾರಿ:

ವಿಜಯನಗರ ಸಾಮ್ರಾಜ್ಯದ ಇತಿಹಾಸ, ವೈಭವ ಸಾರುವ ಹಂಪಿ ಉತ್ಸವ ನ.13 ರಂದು ಜರುಗಲಿದ್ದು, ಜಿಲ್ಲಾಡಳಿತ ಬಹುತೇಕ ಎಲ್ಲ ಸಿದ್ದತೆ ಪೂರ್ಣಗೊಳಿಸಿದೆ. . ಕೋವಿಡ್ ಮಾರ್ಗಸೂಚಿ ಅನುಸಾರವೇ ಆಚರಣೆ ಮಾಡಲಾಗುತ್ತಿದ್ದು, ಅರಣ್ಯ,ಪರಿಸರ,ಜೀವಿಶಾಸ್ತ್ರ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್‍ಸಿಂಗ್ ಅವರು, ಹಂಪಿಯ ಉದ್ಧಾನ ವೀರಭದ್ರೇಶ್ವರ ದೇವಸ್ಥಾನದ ಬಳಿ ನ.13ರಂದು ಸಂಜೆ 4ಕ್ಕೆ ಹಂಪಿ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ.
ಜಿ.ಪಂ. ಅಧ್ಯಕ್ಷೆ ಸಿ.ಭಾರತಿ ತಿಮ್ಮಾರೆಡ್ಡಿ, ಸಂಸದರಾದ ವೈ. ದೇವೇಂದ್ರಪ್ಪ, ಜಿ.ಎಂ. ಸಿದ್ದೇಶ್ವರ, ಕರಡಿ ಸಂಗಣ್ಣ, ಸೈಯದ್ ನಾಸೀರ್ ಹುಸೇನ್, ಶಾಸಕರಾದ ಪಿ.ಟಿ. ಪರಮೇಶ್ವರ ನಾಯ್ಕ, ಈ. ತುಕಾರಂ, ಬಿ.ನಾಗೇಂದ್ರ, ಎನ್.ವೈ. ಗೋಪಾಲಕೃಷ್ಣ, ಭೀಮಾನಾಯ್ಕ ಎಲ್.ಬಿ.ಪಿ, ಕೆ.ಸಿ.ಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ಜಿ. ಕರುಣಾಕರರೆಡ್ಡಿ, ಜಿ. ಸೋಮಶೇಖರರೆಡ್ಡಿ, ಎಂ.ಎಸ್. ಸೋಮಲಿಂಗಪ್ಪ, ಜೆ.ಎನ್.ಗಣೇಶ್, ಡಾ. ಚಂದ್ರಶೇಖರ ಬಿ.ಪಾಟೀಲ, ಶಾಸಕರು ಹಾಗೂ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ವಿ. ರಾಮಚಂದ್ರ ಅವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಹೊಸಪೇಟೆ ತಾಲ್ಲೂಕ್ ಪಂಚಾಯತ್ ಅಧ್ಯಕ್ಷೆ ಎನ್.ನಾಗವೇಣಿ ಬಸವರಾಜ್, ಹಂಪಿ ಕ್ಷೇತ್ರದ ಜಿಪಂ ಸದಸ್ಯ ಪ್ರವೀಣ್ ಸಿಂಗ್ ಸೇರಿದಂತೆ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ.
ಶೋಭಾಯಾತ್ರೆ : ಹಂಪಿಯ ಉದ್ಧಾನ ವೀರಭದ್ರೇಶ್ವರ ದೇವಸ್ಥಾನದಿಂದ ವಿರೂಪಾಕ್ಷೇಶ್ವರ ದೇವಸ್ಥಾನದವರೆಗೆ ವಿವಿಧ ಜಾನಪದ ಕಲಾ ತಂಡಗಳಿಂದ ಶೋಭಾಯಾತ್ರೆ ನಡೆಯಲಿದೆ.
ವಿವಿಧ ತಾಲೂಕುಗಳಿಂದ ವಿವಿಧ ಪ್ರಕಾರದ ಜಾನಪದ ಕಲಾತಂಡಗಳ ಪ್ರದರ್ಶನ ಶೋಭಾಯಾತ್ರೆಗೆ ಮೆರಗು ನೀಡಲಿದೆ. ಈ ಶೋಭಾಯಾತ್ರೆಗೆ ನ.13 ರಂದು ಶುಕ್ರವಾರ ಸಂಜೆ 4.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರು ಚಾಲನೆ ನೀಡಲಿದ್ದಾರೆ. ಗಣ್ಯಮಾನ್ಯರು ಉಪಸ್ಥಿತರಿರಲಿದ್ದಾರೆ. ಇದಾದ ನಂತರ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಲಿದೆ.
ತುಂಗಾ ಆರತಿ: ಹಂಪಿಯ ತುಂಗಭದ್ರಾ ದಡದ ವೇದಿಕೆ ಬಳಿ ನ.13 ರಂದು ಸಂಜೆ 7ಕ್ಕೆ ತುಂಗಾ ಆರತಿ ಕಾರ್ಯಕ್ರಮ ನಡೆಯಲಿದೆ. ಪ್ರತಿ ಹಂಪಿ ಉತ್ಸವದಲ್ಲಿ ನಡೆದಂತೆ ಈ ಹಂಪಿ ಉತ್ಸವದಲ್ಲಿಯೂ ತುಂಗಾ ಆರತಿ ನಡೆಯಲಿದ್ದು,ಅಗತ್ಯ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್.ಆನಂದಸಿಂಗ್ ಹಾಗೂ ಮುಖ್ಯ ಅತಿಥಿಗಳು, ಅತಿಥಿಗಳು ಮತ್ತು ವಿಶೇಷ ಆಹ್ವಾನಿತರು ಉಪಸ್ಥಿತರಿರಲಿದ್ದಾರೆ.
ಹಂಪಿ ಉತ್ಸವ ಮೆರವಣಿಗೆಯಲ್ಲಿ ಭಾಗವಹಿಸುವ ಕಲಾತಂಡಗಳಿವು: ಬಳ್ಳಾರಿ ತಾಲ್ಲೂಕಿನ ಮೋಹನ್ ಮತ್ತು ತಂಡದವರ ತಾಷರಂಡೋಲ್, ಕುರುಗೋಡು ಚನ್ನಸ್ವಾಮಿ ಮತ್ತು ತಂಡದಿಂದ ಹಗಲುವೇಷ, ಹಗರಿಬೊಮ್ಮನಹಳ್ಳಿಯ ಏಣಿಗಿ ರಾಮಪ್ಪ ಮತ್ತು ತಂಡದವರ ಹಲಗೆ ವಾದನ, ಸಂಡೂರು ಚಂದ್ರಶೇಖರ್ ಮತ್ತು ತಂಡದವರಿಂದ ಡೊಳ್ಳುಕುಣಿತ, ಬಳ್ಳಾರಿಯ ಎಂ.ನಾಗರಾಜಸ್ವಾಮಿ ಮತ್ತು ತಂಡದವರಿಂದ ವೀರಗಾಸೆ ಹಾಗೂ ದೊಡ್ಡಬಸಪ್ಪ ಮತ್ತು ತಂಡದವರಿಂದ ನಾಡಗೀತೆ, ಹಳೇದರೊಜಿ ಅಶ್ವರಾಮಣ್ಣ ಮತ್ತು ತಂಡದವರಿಂದ ಹಗಲುವೇಷÀ, ಸಿರಗುಪ್ಪ ದೊಡ್ಡರಾಮಣ್ಣ ಮತ್ತು ತಂಡದವರಿಂದ ಸಿಂದೋಳ್ ಕುಣಿತ, ಹೊಸಪೇಟೆಯ ಶರಣಪ್ಪ ಮತ್ತು ತಂಡ ಕಹಳೆವಾದನ, ನಾರಾಯಣಪ್ಪ ಮತ್ತು ತಂಡದವರಿಂದ ನಾದಸ್ವರ, ಆಂಜನೇಯ ಮತ್ತು ತಂಡದವರಿಂದ ಡೊಳ್ಳುಕುಣಿತ, ಕಂಪ್ಲಿಯ ಕೆ.ಅಂಜಲಿ ಮತ್ತು ತಂಡದವರಿಂದ ಹಕ್ಕಿ ಪಿಕ್ಕಿ ಬುಡಕಟ್ಟು ನೃತ್ಯ, ಹೊಸಪೇಟೆಯ ಏಸುಪ್ ಮತ್ತು ತಂಡದವರಿಂದ ಮರಗಾಲುಕುಣಿತ, ಅಮೃತಾ ಮತ್ತು ತಂಡದವರಿಂದ ಶಾಸ್ತ್ರಿಯ ನೃತ್ಯ, ಹಡಗಲಿ ಮಲ್ಲಯ್ಯ ಮತ್ತು ತಂಡದವರ ಗೊರವರ ಕುಣಿತ, ಕೊಟ್ಟೂರು ವೀರಭದ್ರೇಶ್ವರ ವಾದ್ಯವೃಂದ ನಂದಿಧ್ವಜ ಕುಣಿತ, ಹರಪನಹಳ್ಳಿ ವಿಶ್ವಕಲಾ ರೈತ ಭಜನಾ ಸಂಘದಿಂದ ಕೀಲುಕುದುರೆ, ಕೂಡ್ಲಿಗಿ ದುರಗಮ್ಮ ಮತ್ತು ತಂಡದಿಂದ ಮಹಿಳಾ ಡೊಳ್ಳುಕುಣಿತ ಪ್ರದರ್ಶನಗಳು ಈ ಬಾರಿಯ ಹಂಪಿ ಉತ್ಸವದಲ್ಲಿ ನಡೆಯಲಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss