ಕೇರಳ: ಯಾತ್ರಿಕರಿಗಾಗಿ ನವೆಂಬರ್ 16 ರಂದು ಮಂಡಲಂ-ಮಕರವಿಲಕ್ಕು ಋತುವಿನಲ್ಲಿ ಕೇರಳದ ಶಬರಿಮಲೆ ದೇವಾಲಯವು ತೆರೆಯಲಿದ್ದು, ರಾಜ್ಯ ಮೂಲದವರಿಗೆ ಮಾತ್ರ ಪ್ರವೇಶಕಾಶ ನೀಡಬೇಕೆಂದು ವೈದ್ಯರು ಶಿಫಾರಸು ಮಾಡಿದ್ದಾರೆ.
ಇದರಿಂದ ಜನಸಂದಣಿಯನ್ನು ತಪ್ಪಿಸಿ ಕೊರೋನಾ ಸೋಂಕು ಹರಡುವುದನ್ನು ತಡೆಗಟ್ಟಬಹುದು ಎಂದಿದ್ದಾರೆ.
ಪ್ರತಿ ಚಳಿಗಾಲದಲ್ಲೂ ಎರಡು ತಿಂಗಳ ಮಂಡಲಂ-ಮಕರವಿಲಕ್ಕು ಋತುವಿನಲ್ಲಿ, 30 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳು ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯುತ್ತಿದ್ದರು.
ದೇವಸ್ವಂ (ಸಾಮಾಜಿಕ-ಧಾರ್ಮಿಕ ಟ್ರಸ್ಟ್ಗಳು) ಸಚಿವ ಕಡಕಂಪಲ್ಲಿ ಸುರೇಂದ್ರನ್ ಅವರು ‘ನವೆಂಬರ್ 16 ರಂದು ದೇವಾಲಯ ಸಾರ್ವಜನಿಕ ಮುಕ್ತಗೊಳಿಸಲಾಗುವುದು ಎಂದು ದೃಢಪಡಿಸಿದ್ದಾರೆ. ‘ಎಲ್ಲಾ ಕೋವಿಡ್ -19 ನಿಯಂತ್ರಣಕ್ಕಾಗಿ ನಿಬಂಧನೆಗಳನ್ನ ಅನುಸರಿಸಲಾಗುವುದು ಮತ್ತು ಭಕ್ತರ ಸಂಖ್ಯೆಯೂ ಕಡಿಮೆಗೊಳಿಸಲು ರಾಜ್ಯ ತೀರ್ಮಾನಿಸಿದೆ. ಇನ್ನು ತೀರ್ಥಯಾತ್ರೆ ಕೈಗೊಳ್ಳುವ ಮೊದಲು ಭಕ್ತರು ಕೊರೋನಾ ನೆಗಿಟಿವ್ ವರದಿ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ’ ಎಂದಿದ್ದಾರೆ.