ಹೊಸ ದಿಗಂತ ವರದಿ, ಉಡುಪಿ:
ತುಳುನಾಡಿನ ವೀರ ಪುರುಷ ಅಗೋಳಿ ಮಂಜಣ್ಣನ ಕುರಿತ ತುಳು, ಕನ್ನಡ ಮತ್ತು ಮರಾಠಿ ಭಾಷೆಗಳಲ್ಲಿ ‘ಸೂಪರ್ ಅಗೋಳಿ ಮಂಜಣ್ಣ’ ತುಳು ಮ್ಯಾನ್ ಆ್ ತುಳುನಾಡ್ ಎಂಬ ಟ್ಯಾಗ್ಲೈನ್ ಹೊಂದಿರುವ ಚಿತ್ರದ ಟೀಸರ್ ಬಿಡುಗಡೆ ಸಮಾರಂಭ ನ. 26ರಂದು ಸಂಜೆ 6ಕ್ಕೆ ಕಾರ್ಕಳ ಕಟೀಲ್ ಇಂಟರ್ನ್ಯಾಷನಲ್ ಹೊಟೇಲ್ನಲ್ಲಿ ನಡೆಯಲಿದೆ.
ಚಿತ್ರದ ನಿರ್ದೇಶಕ ಸುಧೀರ್ ಅತ್ತಾವರ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಇದರ ಮಾಹಿತಿ ನೀಡಿ, ಸೂಪರ್ ಅಗೋಳಿ ಮಂಜಣ್ಣ ಚಿತ್ರವು ಸಕ್ಸಸ್ ಫಿಲಂಸ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿದೆ. ಚಿತ್ರಕ್ಕೆ ಸಂಗೀತ ನಿರ್ದೇಶಕ ಗುರುಕಿರಣ್ ಅವರ ಸಂಗೀತವಿದೆ ಎಂದರು.
ಕೋಟಿ ಚೆನ್ನಯ್ಯ ಧಾರವಾಹಿ ಖ್ಯಾತಿಯ ರೋಹಿತ್ ಕುಮಾರ್ ಕಟೀಲ್ ಅವರು ಅಗೋಳಿ ಮಂಜಣ್ಣ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ವಿನಯ ಪ್ರಸಾದ್, ರಾಮಕೃಷ್ಣ, ಭಾವನಾ, ದುನಿಯಾ ರಶ್ಮಿ, ಹಿಮಾಂಗಿನಿ, ಅರವಿಂದ ಬೋಳಾರ್ ತಾರಾಗಣದಲ್ಲಿದ್ದಾರೆ. ಹಿಂದಿ- ಮಾರಾಠಿ ಸಿನೆಮಾದ ಪ್ರಸಿದ್ಧ ಕಲಾವಿದರು, ಮಾಜಿ ಸಚಿವ ಅಭಯ ಚಂದ್ರ ಜೈನ್, ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಮೋಹನ್ ಆಳ್ವ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ನಟ ರೋಹಿತ್ ಕುಮಾರ್ ಕಟೀಲ್ ಹಾಗೂ ಜಯಪ್ರಕಾಶ್ ಉಪಸ್ಥಿತರಿದ್ದರು.