ಪಂಚತಂತ್ರ ಸಿನಿಮಾದಲ್ಲಿ ರೋಮ್ಯಾಂಟಿಕ್ ಆಗಿ ಕಾಣಿಸಿಕೊಂಡು ಪಡ್ಡೆ ಹುಡುಗರ ಮನಗೆದ್ದಿದ್ದರು. ಈ ಚಿತ್ರದ ಶೃಂಗಾರದ ಹೊಂಗೆಮರ ಹಾಡು ಈಗಲೂ ಅಚ್ಚಳಿಯದೆ ಉಳಿದಿದೆ. ಸಿನಿಮಾದಲ್ಲಿ ನಟಿಸುತಿದ್ದ ಸೋನಲ್ ಮಂಥೇರೋ ಇದ್ದಕ್ಕಿದ್ದಂತೆ ನಿರ್ಮಾಪಕಿಯಾಗಿಬಿಟ್ಟಿದ್ದಾರೆ.ಪಂಚರಂಗಿ ನಂತರ ಕೆಲವು ಸಿನಿಮಾಗಳಲ್ಲಿ ನಟಿಸಿದ್ದ, ಬಾಲಿವುಡ್ ಗೂ ಅಡಿಯಿಟ್ಟುಬಂದ ಸೋನಲ್ ಇದ್ದಕ್ಕಿದ್ದಂತೆ ನಿರ್ಮಾಪಕಿಯಾಗಿದ್ದಾರೆ.ಸೋನಲ್ ಅವರು ವೆಬ್ ಸರಣಿಯೊಂದನ್ನು ನಿರ್ಮಾಣ ಮಾಡಿದ್ದಾರೆ. ಥ್ರಿಲ್ಲರ್ ಮಾದರಿಯ ಈ ವೆಬ್ಸೀರೀಸ್ ನ ಪ್ರತಿ ಎಪಿಸೋಡ್ 20 ನಿಮಿಷವಿರುತ್ತದೆ, ಒಟ್ಟು ಆರು ಎಪಿಸೋಡ್ ಈಗಾಗಲೇ ತಯಾರಾಗಿದೆ ಎನ್ನಲಾಗುತ್ತಿದೆ. ಸೋನಲ್ ತುಳು ಸಿನಿಮಾಗಳಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದವರು. ತುಳುವಿನಲ್ಲಿ ಎಕ್ಕ ಸಾಕಾ, ಜೈ ತುಳುನಾಡು, ಒಇಲಿಬೈಲ್ ಯಮುನಕ್ಕ. ಅರ ಮೊದಲ ಕನ್ನಡ ಸಿನಿಮಾ ಅಭಿಸಾರಿಕ. ಸೋನಲ್ ಅವರು ಪಂಚತಂತ್ರ ಸಿನಿಮಾದಲ್ಲಿ ನಟಿಸುವ ಮುನ್ನಾ, ಎಂಎಲ್ಎ, ಮದುವೆ ದಿಬ್ಬಣ, ಸಿನಿಮಾಗಳಲ್ಲಿ ನಟಿಸಿದ್ದರು. ಇದೀಗ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದಲ್ಲೂ ಅವರು ನಟಿಸಿದ್ದಾರೆ, ಅದರ ಜೊತೆ ಬುದ್ದಿವಂತ 2 ಸಿನಿಮಾದಲ್ಲೂ ಪಾತ್ರ ಮಾಡಿದ್ದಾರೆ.