ಹೊಸ ದಿಗಂತ ವರದಿ, ಬಳ್ಳಾರಿ:
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಒತ್ತಾಯಿಸಿ ಪಾದಯಾತ್ರೆಗೆ ಬರುವ ಟ್ರ್ಯಾಕ್ಟರ್ನಲ್ಲಿ ಕುಳಿತ ವೃದ್ಧನೊಬ್ಬ,
ಆಯ ತಪ್ಪಿ ಕೆಳಗೆ ಬಿದ್ದಿದ್ದು, ಈ ವೇಳೆ ಬಸ್ ಹರಿದು ಮೃತಪಟ್ಟ ಘಟನೆ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪಟ್ಟಣದ ಬಳಿ ಶನಿವಾರ ನಡೆದಿದೆ.
ಹೂವಿನ ಹಡಗಲಿ ಪಟ್ಟಣದ ತುಪ್ಪದ ಈಶಪ್ಪ ಮೋರಗೇರಿ (65) ಮೃತಪಟ್ಟವರು.
ಪಾದಯಾತ್ರೆಗೆ ಬರುವ ಟ್ರ್ಯಾಕ್ಟರ್ನಲ್ಲಿ ಅವರು ಕುಳಿತುಕೊಂಡಿದ್ದಾಗ, ಆಯ ತಪ್ಪಿ ರಸ್ತೆಯಲ್ಲಿ ಬಿದ್ದಿದ್ದು, ಈ ಸಂದರ್ಭ ಅವರ ಮೇಲೆ ಸಾರಿಗೆ ಬಸ್ ಹರಿದು ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಪ್ರಕರಣ ಹಗರಿಬೊಮ್ಮನಹಳ್ಳಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಶನುವಾರ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ, ಅಪಘಾತದಲ್ಲಿ ನಿಧನರಾದ ತುಪ್ಪದ ಈಶಪ್ಪ ಮೋರಗೇರಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಇದಕ್ಕೂ ಮುನ್ನ ಕೆಲ ಕಾಲ ಗಣ್ಯರು, ಸ್ವಾಮೀಜಿಗಳು ಮೌನಾಚರಣೆ ನಡೆಸಿದರು. ಅಖಿಲ ಭಾರತ ಪಂಚಮಸಾಲಿ ಸಮುದಾಯದ ಜಿಲ್ಲಾ ಅಧ್ಯಕ್ಷ ಭದ್ರವಾಡಿ ಚಂದ್ರಶೇಖರ್ ಅವರು ಮಾತನಾಡಿ, ಸಂತಾಪ ಸೂಚಿಸಿದರು.