Thursday, February 25, 2021

Latest Posts

ಪಂಚಾಯ್ತಿಯಿಂದ ಪಾರ್ಲಿಮೆಂಟ್ ವರೆಗೆ ಬಿಜೆಪಿ ಅಧಿಕಾರ ಹಿಡಿದಿದೆ: ಸಚಿವ ಕೆ.ಎಸ್.ಈಶ್ವರಪ್ಪ

ಹೊಸ ದಿಗಂತ ವರದಿ ಶಿವಮೊಗ್ಗ:

ಬಿಜೆಪಿ ಕೈಯಲ್ಲಿ ಹಳ್ಳಿ ಚುನಾವಣೆ ಗೆಲ್ಲಕ್ಕೆ ಆಗಲ್ಲ ಅಂತ ಇದ್ದರು. ಈಗ ಪಂಚಾಯ್ತಿಯಿಂದ ಪಾರ್ಲಿಮೆಂಟ್ ವರೆಗೆ ಬಿಜೆಪಿ ಅಧಿಕಾರ ಹಿಡಿದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ನಗರದ ಪೆಸಿಟ್ ಕಾಲೇಜು ಸಭಾಂಗಣದಲ್ಲಿ ಜನಸೇವಕ ಸಮಾವೇಶದಲ್ಲಿ ಮಾತನಾಡಿ, ಬಿಜೆಪಿ ವಿಚಾರಗಳಿಗೆ ಜನತೆ ಬೆಂಬಲ ನೀಡಿದ್ದಾರೆ. ನಮ್ಮ ಹಿರಿಯರ ತಪಸ್ಸಿನ ಫಲ ಈಗ ಬೆಂಬಲ ಸಿಗುತ್ತಿದೆ ಎಂದರು.

ಇಡೀ ದೇಶದ ಅಭಿವೃದ್ಧಿ ಗೆ ಪ್ರಧಾನಿ ಮೋದಿ ಪ್ರಯತ್ನ ಮಾಡುತ್ತಿದ್ದಾರೆ. ಮೌಲ್ಯ ಆಡಳಿತ, ಅಭಿವೃದ್ಧಿ ಆಡಳಿತ ನೀಡುತ್ತಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಮಂತ್ರಿ ಆಗಿರುವುದು ಸಾರ್ಥಕ ಅನಿಸಿದೆ. ನೂತನ ಗ್ರಾಪಂ ಸದಸ್ಯರು ಕೂಡ ಮೌಲ್ಯ ಮತ್ತು ಅಭಿವೃದ್ಧಿ ಗೆ ಒತ್ತು ನೀಡಬೇಕು ಎಂದರು.

ಗ್ರಾಪಂ ಸದಸ್ಯರು ಒಂದು ಸವಾಲು ಸ್ವೀಕಾರ ಮಾಡಬೇಕು. ಇದು ಮೋದಿ ಮತ್ತು ಯಡಿಯೂರಪ್ಪ ಅವರ ಕನಸೂ ಹೌದು. ತಮ್ಮ ಗ್ರಾಮದಲ್ಲಿ ಯಾವ ಹೆಣ್ಣು ಮಗಳೂ ಬೀದೀಲಿ ಶೌಚಾಲಯಕ್ಕೆ ಬರಲು ಬಿಡಲ್ಲ ಎಂದು ಸವಾಲು ಸ್ವೀಕರಿಸಿ. ಅವರ ಮನೆಯಲ್ಲಿ ಜಾಗ ಇಲ್ಲವಾದರೆ ಸಾಮೂಹಿಕ ಶೌಚಾಲಯ ಮಾಡಿ. ಇದಕ್ಕೆ ಬೇಕಾಗ ನೆರವನ್ನು ಸರ್ಕಾರ ನೀಡುತ್ತದೆ ಎಂದರು.

ಗ್ರಾಮದಲ್ಲಿ ಪುಂಡಾಟಿಕೆ ನಡೆಯುತ್ತಿದೆ. ಅತ್ಯಾಚಾರ ನಡೆಯುತ್ತಿದೆ. ಹಿಂದೆ ಆಗಿದ್ದು ಆಯಿತು. ಇನ್ನು ಮುಂದೆ ಇದನ್ನೆಲ್ಲ ನಡೆಯಲು ಬಿಡಬಾರದು. ಗ್ರಾಪಂ ಸದಸ್ಯರು ಇದನ್ನು ಗಮನಿಸಬೇಕು ಎಂದರು.
ಕೆಲವರು ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದಾರೆ. ಇಂತಹ ದ್ರೋಹಿಗಳು ಬೆಳೆಯಲು, ಗಾಂಜಾ, ಇಸ್ಪೀಟು, ರಾಷ್ಟ್ರ ದ್ರೋಹಿ ಕೆಲಸಕ್ಕೆ ಬಿಡಬಾರದು ಎಂದು ಕರೆ ನೀಡಿದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss

error: Content is protected !!