Monday, July 4, 2022

Latest Posts

ಪಕ್ಷದ ವಿರುದ್ಧ ಬಂಡಾಯ: 7 ಶಾಸಕರಿಗೆ ಗೇಟ್ ಪಾಸ್ ಕೊಟ್ಟ ಬಿಎಸ್ ಪಿ ಅಧ್ಯಕ್ಷೆ ಮಾಯಾವತಿ

ಲಕ್ನೋ: ರಾಜ್ಯ ಸಭಾ ಚುನಾವಣೆಗೆ ಬಿಎಸ್ ಪಿ ಅಭ್ಯರ್ಥಿಯಾಗಿ ರಾಮ್ ಜಿ ಗೌತಮ್ ಆಯ್ಕೆಯನ್ನು ವಿರೋಧಿಸಿದ ಬಹುಜನ ಸಮಾಜವಾದಿ ಪಕ್ಷದ 7 ಬಂಡಾಯ ಶಾಸಕರನ್ನು ಪಕ್ಷದ ಅಧ್ಯಕ್ಷೆ ಮಾಯಾವತಿ ಪಕ್ಷದಿಂದ ಅಮಾನತುಗೊಳಿಸಿದ್ದಾರೆ.
ಬಹುಜನ ಸಮಾಜ ಪಕ್ಷದ ಅಧ್ಯಕ್ಷೆ ಮಾಯಾವತಿಯವರು, ರಾಮ್ ಜಿ ಗೌತಮ್ ಅವರನ್ನು ರಾಜ್ಯ ಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿಯಾಗಿ ಅಂತಿಮಗೊಳಿಸಿ , ಘೋಷಣೆ ಮಾಡಿದ್ದರು. ಆದರೆ ಇದನ್ನು ಪಕ್ಷದ ಶಾಸಕರಾದ ಚೌಧುರಿ ಅಸ್ಲಂ ಆಲಿ, ಹಕೀಂ ಲಾಲ್ ಬಿಂಡ್, ಮಹ್ಮದ್ ಮುಜ್ತಾಬ್ ಸಿದ್ದೀಕಿ, ಅಸ್ಲಂ ರೈನಿ, ಸುಷ್ಮಾ ಪಟೇಲ್, ಹರ ಗೋವಿಂದ್ ಭಾರ್ಗವ್ ಹಾಗೂ ಬಂದನಾ ಸಿಂಗ್ ವಿರೋಧಿಸಿದರು.
ಈ ಹಿನ್ನಲೆಯಲ್ಲಿ ಬಹುಜನ ಸಮಾಜ ಪಕ್ಷದಿಂದ ಬಂಡಾಯ ಎದ್ದ 7 ಶಾಸಕರನ್ನು ಪಕ್ಷದಿಂದ ಅಮಾನತುಗೊಳಿಸಿ ಆದೇಶಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss