ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ಪಟಾಕಿಯನ್ನು ಸಿಡಿಸುವಾಗ ಹೂ ಕುಂಡದ ಪಟಾಕಿ ಸಿಡಿದು 12 ವರ್ಷದ ಬಾಲಕಿಯ ಮುಖ ಬಹುತೇಕ ಸುಟ್ಟಿದೆ. ಪ್ಲಾಸ್ಟಿಕ್ ಸರ್ಜರಿಗೆ ವೈದ್ಯರು ಸೂಚಿಸಿದ್ದಾರೆ.
ನಿನ್ನೆ ರಾತ್ರಿ ಬಾಲಕಿಯು ಪಟಾಕಿಯನ್ನು ಸಿಡಿಸುತ್ತಿರುವಾಗ ಹೂ ಕುಂಡದ ಪಡಾಕಿಯು ಏಕಾಏಕಿ ಸಿಡಿದಿದೆ. ಇದರಿಂದಾಗಿ ಮುಖ, ಕೈ ಬಹುತೇಕ ಸುಟ್ಟಿದ್ದು, ಕಣ್ಣಿಗೆ ಸುುಮಾರ 50% ಹಾನಿಯಾಗಿದೆ.
ಈ ಘಟನೆ ನಡೆದ ತಕ್ಷಣ ಬಾಲಕಿಯನ್ನು ಬೆಂಗಳೂರಿನ ಮಿಂಟೋ ಕಣ್ಣಿನ ಆಸ್ಪತ್ರೆಗೆ ಕರೆತರಲಾಗಿದೆ. ವೈದ್ಯರು ಕೈ ಮತ್ತು ಕಣ್ಣಿಗೆ ತ್ವರಿತ ಚಿಕಿತ್ಸೆ ನೀಡಿದ್ದಾರೆ. ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಬೇಕೆಂದು ತಿಳಿಸಿದ್ದಾರೆ. ಬಾಲಕಿಯನ್ನು ವಿಕ್ಟೋರಿಯಾ ಆಸ್ಪತ್ರೆಯ ಸುಟ್ಟ ಗಾಯಗಳ ವಿಭಾಗಕ್ಕೆ ವರ್ಗಾಯಿಸಲಾಗಿದೆ.