ಹೊಸದಿಗಂತ ಆನ್ಲೈನ್ ಡೆಸ್ಕ್:
ಬರೋಬ್ಬರಿ ನಾಲ್ಕು ವರ್ಷದ ಜೈಲು ವಾಸದ ಬಳಿಕ ಇದೀಗ ಎಐಎಡಿಎಂಕೆ ಮಾಜಿ ನಾಯಕಿ ವಿ.ಕೆ.ಶಶಿಕಲಾ ಇಂದು ಚೆನ್ನೈನತ್ತ ತೆರಳುತ್ತಿದ್ದು, ಅಭಿಮಾನಿಗಳು ಸ್ವಾಗತ ಕೋರುವ ವೇಳೆ ಅವಘಡ ಸಂಭವಿಸಿದೆ.
ಕೃಷ್ಣಗಿರಿ ಟೋಲ್ಗೇಟ್ ಬಳಿ ಪಟಾಕಿ ಸಿಡಿದು ಕಾರುಗಳು ಸುಟ್ಟು ಭಸ್ಮವಾಗಿದೆ.
ದಾರಿ ಮಧ್ಯೆ ಶಶಿಕಲಾ ಅವರಿಗೆ ಅದ್ಧೂರಿ ಸ್ವಾಗತ ಕೋರುವ ಸಲುವಾಗಿ ಬೆಂಬಲಿಗರು ಪಟಾಕಿ ಹಚ್ಚಿದ್ದರು. ರಸ್ತೆಯುದ್ದಕ್ಕೂ ಶಶಿಕಲಾ ಅವರಿಗೆ ಜೈಕಾರ ಹಾಕುತ್ತಿದ್ದರು. ಹೂಮಳೆಯನ್ನೂ ಸುರಿಸಿದ್ದರು. ಈ ವೇಳೆ ಹಚ್ಚಿದ್ದ ಪಟಾಕಿ ಸಿಡಿದು ಬೆಂಬಲಿಗರ ಎರಡು ಕಾರುಗಳು ರಸ್ತೆ ಬದಿಯಲ್ಲೇ ಹೊತ್ತಿ ಉರಿದಿದೆ. ಅಗ್ನಿ ಶಾಮಕದಳ ಸ್ಥಳಕ್ಕೆ ಆಗಮಿಸಿದ್ದು, ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.