Wednesday, August 10, 2022

Latest Posts

ಪಟ್ಟಾಭಿರಾಮನಾಗಿ ಕಂಗೊಳಿಸಿದ ಉಡುಪಿಯ ಕಡೆಗೋಲ ಶ್ರೀಕೃಷ್ಣ…

ಉಡುಪಿ: ಶ್ರೀರಾಮನಿಗೆ ಅಯೋಧ್ಯೆಯಲ್ಲಿ ರಾಷ್ಟ್ರ ಮಂದಿರ ನಿರ್ಮಿಸಲು ಭೂಮಿ ಪೂಜನ ನಡೆಯುವ ದಿನ ಬುಧವಾರ ಉಡುಪಿಯಲ್ಲಿ ಕೃಷ್ಣಮಠದ ಕಡೆಗೋಲ ಶ್ರೀಕೃಷ್ಣ ಪಟ್ಟಾಭಿರಾಮನಾಗಿ ಕಂಗೊಳಿಸಿದ್ದಾನೆ.
ಉತ್ತರಪ್ರದೇಶದ ಧರ್ಮನಗರಿ ಅಯೋಧ್ಯೆಯಲ್ಲಿ ಶ್ರೀರಾಮನ ಭವ್ಯ ಮಂದಿರಕ್ಕೆ ಶಿಲಾನ್ಯಾಸ ನೆರವೇರಿದೆ. ಈ ಮೂಲಕ ಕೋಟ್ಯಾಂತರ ಭಕ್ತರ ಕನಸು ನನಸಾಗುತ್ತಿದೆ. ಈ ಮಧ್ಯೆ ಉಡುಪಿಯ ಕೃಷ್ಣ ಮಠದಲ್ಲಿ ಕಾಣಿಯೂರು ಮಠಾಧೀಶ ಶ್ರೀವಿದ್ಯಾವಲ್ಲಭತೀರ್ಥ ಸ್ವಾಮೀಜಿ ಅವರು ಶ್ರೀಕೃಷ್ಣನಿಗೆ ಪಟ್ಟಾಭಿರಾಮನ ವಿಶೇಷ ಅಲಂಕಾರ ಮಾಡಿದರು. ಶ್ರೀಕೃಷ್ಣನಿಗೆ ರಾಮಾಲಂಕಾರ ಮಾಡಿ, ಕಡೆಗೋಲ ಕೃಷ್ಣನನ್ನು ಬಿಲ್ಲು ಬಾಣ ಹಿಡಿದು ಸಿಂಹಾಸನದಲ್ಲಿ ಕುಳಿತ ಪಟ್ಟಾಭಿರಾಮನನ್ನಾಗಿಸಿದರು.
ಪರ್ಯಾಯ ಅದಮಾರು ಮಠದ ಶ್ರೀಈಶಪ್ರಿಯತೀರ್ಥ ಸ್ವಾಮೀಜಿ ಅವರು ಪಟ್ಟಾಭಿರಾಮನಾದ ಶ್ರೀಕೃಷ್ಣನಿಗೆ ಮಹಾಪೂಜೆಯನ್ನು ನೆರವೇರಿಸಿದರು.
ಉಡುಪಿ ಶ್ರೀಕೃಷ್ಣ ಅಲಂಕಾರ ಪ್ರಿಯನಾಗಿದ್ದು, ಪ್ರತಿದಿನ ವಿವಿಧ ಅಲಂಕಾರಗಳನ್ನು ಮಾಡಲಾಗುತ್ತದೆ. ದಿನದ ವಿಶೇಷತೆ ಹೊಂದಿಕೆಯಾಗುವಂತೆ ಅಲಂಕಾರ ಇರುತ್ತದೆ. ಶ್ರಾವಣ ಮಾಸದಲ್ಲಿ ಪ್ರತಿ ಶುಕ್ರವಾರ ಕೃಷ್ಣನಿಗೆ ದೇವಿಯ ಅಲಂಕಾರ ಮಾಡಲಾಗುತ್ತದೆ. ನವರಾತ್ರಿಯ ವೇಳೆಯಲ್ಲಿಯೂ ದೇವಿಯ ಅಲಂಕಾರದಲ್ಲಿ ಕೃಷ್ಣ ಕಂಗೊಳಿಸುತ್ತಾನೆ. ಬುಧವಾರ ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಭೂಮಿ ಪೂಜನ ಕಾರ್ಯಕ್ರಮ ನಡೆಯುವುದರಿಂದ ರಾಮನ ಪಟ್ಟಾಭಿಷೇಕ ನೆನಪಿಸುವ ಪಟ್ಟಾಭಿರಾಮ ಅಲಂಕಾರವನ್ನು ನೆರವೇರಿಸಲಾಯಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss