ಮೈಸೂರು: ಪಠ್ಯ ಪುಸ್ತಕದಿಂದ ಟಿಪ್ಪು ಕುರಿತ ಪಾಠ ಕೈ ಬಿಟ್ಟಿರುವುದು ಸರಿಯಲ್ಲ, ಸರ್ಕಾರ ತನ್ನ ನಿರ್ಧಾರವನ್ನು ಪುನರ್ ಪರಿಶೀಲನೆ ಮಾಡಬೇಕು ಎಂದು ಮೈಸೂರಿನ ಎನ್.ಆರ್.ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಒತ್ತಾಯಿಸಿದರು.
ಬುಧವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಪ್ಪು ಒಂದು ಸಮುದಾಯಕ್ಕೆ ಸೀಮಿತವಲ್ಲ. ಆತನಿಗೂ ಮತ್ತು ಶೃಂಗೇರಿ ಮಠಕ್ಕೂ ಸಂಬoಧ ಇದೆ. ಬಡವರ ಮೇಲಿನ ಭೂ ಸುಧಾರಣೆ ಮೇಲಿನ ಪ್ರಭಾವ. ಸಾರಾಯಿ ನಿಷೇಧ’ ಆಡಳಿತ ವ್ಯವಸ್ಥೆಯಲ್ಲಿ ತಂದ ಸುಧಾರಣೆ. ಖಾತಾ, ಪಹಣಿ, ಸಾಕಷ್ಟು ಸುಧಾರಣೆಗಳನ್ನು ತಂದ ಹೆಗ್ಗಳಿಕೆ ಟಿಪ್ಪುವಿನದ್ದು. ಟಿಪ್ಪು ಬಗ್ಗೆ ಓದುವ ಎಲ್ಲರಿಗೂ ಈ ನಿರ್ಣಯ ನೋವುಂಟು ಮಾಡಿದೆ. ಬಿಜೆಪಿಯಿಂದ ಟಿಪ್ಪು ಜಯಂತಿ ನಿಲ್ಲಿಸುವ ಬಗ್ಗೆ ಗೊತ್ತಿತ್ತು. ಆದರೆ ಟಿಪ್ಪುವಿನ ಪಠ್ಯದ ಬಗ್ಗೆ ನಾವು ಯೋಚಿಸಿರಲಿಲ್ಲ. ನಿಜವಾಗಿಯೂ ಬಿಜೆಪಿಯಿಂದ ಈ ನಡೆ ನಾವು ಅಂದುಕೊoಡಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂಬoಧ ಹೋರಾಟ ಮಾಡುವುದಕ್ಕೆ ನಮಗೆ ಸದ್ಯ ಸಮಸ್ಯೆ ಇಲ್ಲ. ಆದರೆ ಸರಿಯಾದ ಮಾರ್ಗದಲ್ಲಿ ಹೋಗಿ ಹೋರಾಟ ಮಾಡುತ್ತೇವೆ. ಈಗಾಗಲೇ ಇದಕ್ಕೆ ಸಂಬoಧಿಸಿದoತೆ ಪತ್ರವನ್ನು ಬರೆದಿದ್ದೇನೆ. ಬರಗೂರು ರಾಮಚಂದ್ರಪ್ಪ ಅವರು ಕೂಡ ಪಠ್ಯ ತೆಗೆಯೋದು ಆಗಲ್ಲ ಎಂದಿದ್ದರು. ಪಠ್ಯ ಸಮಿತಿಯ ಆದೇಶ’ ನಿರ್ಣಯಕ್ಕೆ ಬಿಜೆಪಿ ಬೆಲೆ ಕೊಡುತ್ತಿಲ್ಲ. ಏಕಪಕ್ಷೀಯ ಧೋರಣೆ ತೋರುತ್ತಿದೆ ಎಂದು ಆರೋಪಿಸಿದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಟಿಪ್ಪು ಹೆಸರಿನಲ್ಲಿ ರಾಜಕಾರಣ ಮಾಡಲು ಶುರು ಮಾಡಿದೆ. ಈಗಾಗಲೇ ಕೊರೋನಾದಿಂದ ೩೦ ರಷ್ಟು ಪಾಠ ಕಡಿಮೆ ಮಾಡಿದೆ. ಇದರಲ್ಲಿ ಟಿಪ್ಪುಪಠ್ಯ ತೆಗೆಯುವಂತದ್ದು ಸರಿಯಲ್ಲ. ಸರ್ಕಾರ ಟಿಪ್ಪು ಜಯಂತಿ ಮಾಡುವಾಗಲೂ ರಜೆ ಬೇಡ ಎಂದ ಸಮುದಾಯ ನಮ್ಮದು. ಟಿಪ್ಪು ಮೈಸೂರು ಭಾಗಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಇವತ್ತಿಗೂ ಅವರು ಕಂಡು ಹಿಡಿದ ರಾಕೆಟ್ ನಾಸಾದಲ್ಲಿ ಪ್ರದರ್ಶನವಾಗಿದೆ. ಆದರೆ ಇತಿಹಾಸ ತಿರುಚುವ ಕೆಲಸ ಮಾಡಬೇಡಿ. ಈ ಸಂದರ್ಭದಲ್ಲಿ ರಾಜಕಾರಣ ಮಾಡೋದು ಬೇಡ. ವಿನಾಕಾರಣ ಇದಕ್ಕೆ ಬೇರೆ ಬೇರೆ ಬಣ್ಣ ಕಟ್ಟೋದು ಸರಿಯಲ್ಲ. ಅಧಿಕಾರ ಯಾರಿಗೂ ಶಾಶ್ವತ ಅಲ್ಲ’ ಬಿಜೆಪಿ ಸರ್ಕಾರ ಇದನ್ನು ಮತ್ತೊಮ್ಮೆ ಪರಿಶೀಲನೆ ನಡೆಸಲಿ ಎಂದು ಒತ್ತಾಯಿಸಿದರು.