Thursday, July 7, 2022

Latest Posts

ಪಡುಕರೆಯಲ್ಲಿ ‘ಗ್ಯಾಂಗ್ ಸ್ಟಾರ್’ ಮುಖಾಮುಖಿ: ಕಡಲಕಿನಾರೆಯಲ್ಲಿ ರಾಕಿಂಗ್ ಸ್ಟಾರ್

ಉಡುಪಿ: ಎರಡು ವರ್ಷಗಳ ಹಿಂದೆ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನೆಮಾ ವಿಶ್ವದಾದ್ಯಂತ ಧೂಳೆಬ್ಬಿಸಿತ್ತು. ಇದೀಗ ಕನ್ನಡದ ಬಹುನಿರೀಕ್ಷಿತ ಸಿನಿಮಾ ಕೆಜಿಎಫ್ ಚಾಪ್ಟರ್-2 ಯಾವಾಗ ರಿಲೀಸ್ ಆಗುತ್ತದೆ ಎಂದು ಅಭಿಮಾನಿಗಳು ಕಾತರರಾಗಿ ಕಾಯುತ್ತಿದ್ದಾರೆ. ಚಿತ್ರದ ಎರಡನೇ ಹಂತದ ಚಿತ್ರೀಕರಣ ನಡೆಯುತ್ತಿದೆ.
ಲಾಕ್‌ಡೌನ್ ಸಡಿಲಿಕೆಯಾಗುತ್ತಿದ್ದಂತೆ ಕೆಜಿಎಫ್ ಚಾಪ್ಟರ್-2 ಸಿನಿಮಾದ ಮೊದಲ ಶೆಡ್ಯೂಲ್ ಚಿತ್ರೀಕರಣ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆದಿತ್ತು. ಇದೀಗ ಎರಡನೇ ಹಂತದ ಚಿತ್ರೀಕರಣ ಸೆಟ್ಟೇರಿದೆ. ಉಡುಪಿಯ ಮಲ್ಪೆ-ಪಡುಕರೆ ಸುತ್ತಮುತ್ತ ನಡೆಯುತ್ತಿದೆ.
ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಅವರ ತಂಡ ಸದ್ಯ ಪಡುಕರೆಯಲ್ಲಿ ಬೀಡು ಬಿಟ್ಟಿದೆ. ಸುಮಾರು 200ರಷ್ಟು ಜನರು ಈ ಚಿತ್ರಕ್ಕಾಗಿ ದುಡಿಯುತ್ತಿದ್ದಾರೆ. ಚಿತ್ರದ ನಾಯಕ ರಾಕಿಂಗ್ ಸ್ಟಾರ್ ಯಶ್, ನಾಯಕಿ ಶ್ರೀನಿಧಿ ಶೆಟ್ಟಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಕಡಲ ಕಿನಾರೆಯಲ್ಲಿ ಕಪ್ಪು ಬಣ್ಣದ ಆರು ಪಜೇರೋ ಕಾರುಗಳು ಗಿರ ಗಿರ ಗಿರಕಿ ಹೊಡೆಯುತ್ತಿದ್ದರೆ, ಅದರ ಮಧ್ಯೆ ನಾಯಕ ಯಶ್ ಕಂದು ಪ್ಯಾಂಟ್, ಬಿಳಿ ಅಂಗಿ ಧರಿಸಿ ಮಿರ ಮಿರ ಮಿಂಚುತ್ತಿದ್ದರು. ಅವರೊಂದಿಗೆ ನಾಯಕಿ ಶ್ರೀನಿಧಿ ಶೆಟ್ಟಿ ಗೋಲ್ಡನ್ ಮತ್ತು ಬ್ಲ್ಯಾಕ್ ಕಾಸ್ಟ್ಯೂಮ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಎರಡು ಗ್ಯಾಂಗ್‌ಸ್ಟರ್ ಗುಂಪುಗಳು ಅರಬ್ಬಿ ಸಮುದ್ರದಲ್ಲಿ ಮುಖಾಮುಖಿಯಾಗುವ ದೃಶ್ಯವನ್ನು ಕೂಡ ಈ ಸಂದರ್ಭದಲ್ಲಿ ಚಿತ್ರೀಕರಿಸಲಾಯಿತು. ಅರಬ್ಬಿ ಸಮುದ್ರದಲ್ಲಿ ಒಟ್ಟು ಮೂರು ಮೀನುಗಾರಿಕಾ ಬೋಟ್‌ಗಳನ್ನು ಕೆಜಿಎಫ್ 2ಚಿತ್ರಕ್ಕೆ ಬಳಸಲಾಗಿದೆ.
ಮಲ್ಪೆಯಲ್ಲಿ ಮೂರು ದಿನ ಶೂಟಿಂಗ್
ಕೆಜಿಎಫ್ -1ಸಿನಿಮಾ ಇಡೀ ಭಾರತೀಯ ಚಿತ್ರರಂಗವೇ ಸ್ಯಾಂಡಲ್?ವುಡ್?ನತ್ತ ತಿರುಗಿ ನೋಡುವಂತೆ ಮಾಡಿತ್ತು. ಇದೀಗ ಈ ಸಿನಿಮಾದ ಎರಡನೇ ಭಾಗಕ್ಕಾಗಿ ಸಿನಿಪ್ರಿಯರು ಕಾತರರಾಗಿ ಕಾಯುತ್ತಿದ್ದಾರೆ. ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಉಡುಪಿಯಲ್ಲಿ ಮೂರು ದಿನ ಚಿತ್ರೀಕರಣ ನಡೆಸುತ್ತಿದೆ. ಮಲ್ಪೆ ಪಡುಕರೆ ಬೀಚ್, ಮಲ್ಪೆ ಬಂದರಿನಲ್ಲಿ ಚಿತ್ರದ ಬಹುಮುಖ್ಯ ದೃಶ್ಯಗಳನ್ನು ಶೂಟ್ ಮಾಡಲಾಗುತ್ತಿದೆ. ಚಿತ್ರೀಕರಣದಲ್ಲಿ ನಾಯಕ ಯಶ್ ಮತ್ತು ನಾಯಕಿ ಶ್ರೀನಿಧಿ ಶೆಟ್ಟಿ ಅವರು ಪಾಲ್ಗೊಂಡಿದ್ದಾರೆ ಎಂದು ಪ್ರೊಡಕ್ಷನ್ ಮ್ಯಾನೇಜರ್ ಗಗನಮೂರ್ತಿ ‘ಹೊಸ ದಿಗಂತ’ಕ್ಕೆ ತಿಳಿಸಿದ್ದಾರೆ.
ಚಿತ್ರೀಕರಣದ ಕುರಿತು ಯಶ್‌ಗೆ ಸಂತಸ!
ಯಶ್ ಅವರು ಕಡಲ ಕಿನಾರೆಯಲ್ಲಿ ನಿಂತಿರುವ ಫೋಟೋವೊಂದನ್ನು ಗುರುವಾರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ತಮ್ಮ ಫೋಟೋ ಜೊತೆಗೆ ಸಿನಿಮಾ ಚಿತ್ರೀಕರಣ ಆರಂಭವಾಗಿರುವ ಬಗ್ಗೆ ಪಂಚಿಂಗ್? ಲೈನ್?ಗಳನ್ನೂ ಬರೆದುಕೊಂಡಿದ್ದರು. ‘ಅಲೆಗಳನ್ನು ತಡೆಯಲಾಗುವುದಿಲ್ಲ, ಆದರೆ ನೀನು ತೇಲುವುದನ್ನು ಕಲಿಯಬಹುದು. ದೊಡ್ಡ ವಿರಾಮದ ನಂತರ ರಾಕಿ ಸೆಟ್? ಇಂದಿನಿಂದ ತೇಲಲಾರಂಭಿಸಿದೆ’ ಎಂದು ಸಿನಿಮಾ ಶೂಟಿಂಗ್ ಆರಂಭವಾಗಿರುವುದರ ಬಗ್ಗೆ ಸಂತಸ ವ್ಯಕ್ತಪಡಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss