spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, January 28, 2022

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಪತಂಜಲಿ| ಕೊರೋನಾ ಔಷಧಿಗೆ ಬ್ರೇಕ್: ಸಂಶೋಧನಾ ವಿವರ ಕೇಳಿದ ಆಯುಷ್ ಸಚಿವಾಲಯ

- Advertisement -Nitte

ಹೊಸದಿಲ್ಲಿ: ಕೊರೋನಾ ಚಿಕಿತ್ಸೆಗೆಂದು ತಯಾರಿಸಲಾದ ಪತಂಜಲಿ ಔಷಧಿಯ ವಿವರಗಳನ್ನು ನೀಡಬೇಕಾಗಿ ಆಯುಷ್ ಸಚಿವಾಲಯ ಪತಂಜಲಿ ಸಂಸ್ಥೆಗೆ ಸೂಚನೆ ನೀಡಿದೆ.

ಕೊರೋನಾ ಸೋಂಕಿನಿಂದ 7 ದಿನಗಳಲ್ಲಿ ಗುಣವಾಗಬಹುದು ಎಂದು ಹೇಳಲಾಗಿದ್ದ ಪತಂಜಲಿ ಸಂಸ್ಥೆಯ ಔಷಧಿಯನ್ನು ಖರೀದಿಸದಿರಲು ಸಚಿವಾಲಯ ಆದೇಶಿಸಿದ್ದು, ಈ ಔಷಧ ಸಂಬಂಧ ಯಾವುದೇ ಜಾಹಿರಾತುಗಳನ್ನು ನೀಡಬಾರದೆಂದು ಖಡಕ್ ಸೂಚನೆ ನೀಡಿದೆ.

ಯೋಗ ಗುರು ರಾಮದೇವ್ ಅವರ ಪತಂಜಲಿ ಸಂಸ್ಥೆ ‘ಕೊರೋನಿಲ್’ ಮತ್ತು ‘ಸ್ವಸರ’ ಎಂಬ ಔಷಧಗಳನ್ನು ಸಿದ್ದಪಡಿಸಿದ್ದು, ಈಗಾಗಲೇ ರೋಗಿಗಳ ಮೇಲೆ ಪ್ರಯೋಗಿಸಲಾಗಿದೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದುಬಿಟ್ಟಿತ್ತು. ಈ ಜಾಹಿರಾತು 1954 ರ Drugs and Magic Remedies (Objectionable Advertisements) Act (ಆಕ್ಷೇಪಾರ್ಹ ಜಾಹಿರಾತುಗಳ ಕಾಯ್ದೆ) ಅಡಿಯಲ್ಲಿ ಬರಲಿದೆ ಎಂದು ಸಚಿವಾಲಯ ತಿಳಿಸಿದೆ.

ದೇಶದಲ್ಲಿ ಕೋವಿಡ್ ಸ್ಫೋಟವಾಗುತ್ತಿದ್ದಂತೆಯೇ ಆಯುಷ್ ಸಚಿವಾಲಯ COVID-19 ಔಷಧಿಯ ಕುರಿತು ಸಂಶೋಧನಾ ಅಧ್ಯಯನಗಳನ್ನು ಕೈಗೊಳ್ಳಬೇಕಾದ ಅಗತ್ಯತೆಗಳು ಮತ್ತು ವಿಧಾನವನ್ನು ತಿಳಿಸುವಲ್ಲಿ ಸಚಿವಾಲಯವು ಏ.21ರಂದು ಗೆಜೆಟ್ ಅಧಿಸೂಚನೆಯನ್ನು ಹೊರಡಿಸಿತ್ತು. ಎಂದು ಸಚಿವಾಲಯ ತಿಳಿಸಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img

Don't Miss