Friday, August 19, 2022

Latest Posts

ಪತನಗೊಂಡ ಇಂಡೋನೇಶ್ಯಾ ವಿಮಾನದ ಬ್ಲ್ಯಾಕ್ ಬಾಕ್ಸ್ ಪತ್ತೆ

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಇಂಡೋನೇಶ್ಯಾದ ಜಕಾರ್ತಾದಿಂದ  ಟೇಕಾಫ್ ಆದ ಕೇವಲ ನಾಲ್ಕು  ನಿಮಿಷಗಳಲ್ಲಿ ಸಂಪರ್ಕ ಕಳೆದುಕೊಂಡು ನಾಪತ್ತೆಯಾಗಿ ಆತಂಕ ಹುಟ್ಟಿಸಿದ್ದ ವಿಮಾನ ಸಮುದ್ರದಲ್ಲಿ ಪತನಗೊಂಡಿದ್ದು ಖಚಿತವಾದ ಬೆನ್ನಿಗೇ ಈಗ ಬ್ಲ್ಯಾಕ್ ಬಾಕ್ಸ್  ಕೂಡಾ ಪತ್ತೆಯಾಗಿದ್ದು, ಘಟನೆಯ ಸತ್ಯಾಂಶ ಖಚಿತವಾಗಿ ತಿಳಿಯಲು ಇದು ಸಹಾಯಕವಾಗಲಿದೆ.
ಈ ನಡುವೆ ಮೀನುಗಾರರೊರ್ವರು ವಿಮಾನ ಪತನವಾಗಿರುವುದನ್ನು ಕಂಡಿದ್ದೇನೆ ಎಂದು ಹೇಳಿದ್ದು, ಜೊತೆಗೆ ಮುಳುಗು ತಜ್ಞರು ಸಮುದ್ರದ ಸುಮಾರು ೨೩ ಮೀಟರ್ ಆಳದಲ್ಲಿ ಕಾರ್ಯಾಚರಣೆ ಕೈಗೊಂಡಿದ್ದರು. ಈ ಸಂದರ್ಭ ಅವರಿಗೆ ಮಾನವ ದೇಹದ ಕೆಲವು ಅಂಗಾಂಗಗಳು, ವಿಮಾನದ ಭಗ್ನಾವಶೇಷಗಳು, ಕೆಲವು ಪ್ರಯಾಣಿಕರ ವಸ್ತ್ರಗಳು ದೊರಕಿತ್ತು.
ಹುಡುಕಾಟ ಮುಂದುವರಿಯುತ್ತಿರುವಾಗಲೇ ವಿಮಾನದ ಎರಡು ಬ್ಲಾಕ್ ಬಾಕ್ಸ್ ಗಳು ಇರುವ ಸ್ಥಳವನ್ನು ಪತ್ತೆ ಹಚ್ಚಿದ್ದೇವೆ ಎಂದು ಮುಳುಗು ತಜ್ಞರು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!