ದುಬೈ: ಪತಿಯನ್ನು ತುಂಡುತುಂಡಾಗಿ ಕತ್ತರಿಸಿ ಕೊಲೆ ಮಾಡಿದ್ದ ಪತ್ನಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ.
ನಿಮಿಶಾ ಪ್ರಿಯಾ ಗಂಡನನ್ನು ಕೊಂದ ಪತ್ನಿ. ಪತಿ ತಲಾಲ್ ಅಬ್ದುಲ್ನನ್ನು ಕೊಲೆ ಮಾಡಿ ಕತ್ತರಿಸಿ, ತೊಟ್ಟಿಗೆ ಎಸೆದಿದ್ದಳು.
ಕೆಲವು ದಿನಗಳ ನಂತರ ತೊಟ್ಟಿಯಿಂದ ದುರ್ವಾಸನೆ ಬಂದಿದ್ದು, ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸ್ ಪರಿಶೀಲನೆಯಲ್ಲಿ ತೊಟ್ಟಿಯಲಲಿ ಮಾಂಸದ ಚೀಲ ಪತ್ತೆಯಾಗಿತ್ತು. ವಿಚಾರಣೆ ವೇಳೆ ಆಕೆ ಕೊಲೆ ಮಾಡಿರುವುದು ಬೆಳಕಿಗೆ ಬಂದಿದ್ದು ಬಂಧಿಸಲಾಗಿತ್ತು. ಇದೀಗ ಈಕೆಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ.