ಮುಂಬೈ: ಸಿನಿಮಾ ರಂಗದಲ್ಲಿ ಅಂತರ್ ಧರ್ಮಿ ವಿವಾಹ ಸರ್ವೇಸಾಮಾನ್ಯ. ಅನೇಕ ಸಾಮಾನ್ಯ ಜನರೂ ಸೇರಿದಂತೆ ಸೆಲೆಬ್ರಿಟಿಗಳೂ ಕೂಡ ಅಂತರ್ಧಮೀಯ ಮದುವೆಯಾಗಿದ್ದಾರೆ. ಇತ್ತ ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ ಅವರದ್ದು ಅಂತರ್ಧಮೀಯ ವಿವಾಹ ಅನ್ನೋದು ಹಳೆ ವಿಚಾರ. ಇನ್ನು ಈ ಜೋಡಿ ಅನ್ಯೋನ್ಯತೆಯಿಂದ ಬಾಳ್ವೆಯನ್ನು ಮಾಡುತ್ತಿದೆ. ಆದರೆ ಶಾರುಖ್ ಪತ್ನಿ ಗೌರಿಗೆ ಮುಸ್ಲಿಂ ಕುಟುಂಬಕ್ಕೆ ಸೊಸೆಯಾಗಿ ಹೋಗಿರುವುದಕ್ಕೆ ಪದೇ ಪದೇ ಪ್ರಶ್ನೆಗಳು ಎದುರಾಗುತ್ತಿರುತ್ತದೆ. ಇದನ್ನು ಪುನಃ ಪುನಃ ಕೇಳಿ ನಿಜಕ್ಕೂ ಗೌರಿ ಬೇಸರಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇದೀಗ ಈ ಕುರಿತು ಗೌರಿ ಸಂದರ್ಶನದಲ್ಲಿ ಮಹತ್ವದ ವಿಚಾರ ಹೇಳಿದ್ದರು.
ಹೌದು, ‘ಕಾಫಿ ವಿಥ್ ಕರಣ್’ ಶೋನಲ್ಲಿ ಮಾತನಾಡಿದ ಈ ಗೌರಿ, ‘ನಮ್ಮಲ್ಲಿ ಸಮತೋಲನವಿದೆ. ನಾನು ಶಾರುಖ್ ಧರ್ಮವನ್ನು ಗೌರವಿಸುತ್ತೇನೆ ಎಂದಮಾತ್ರಕ್ಕೆ ಮತಾಂತರ ಆಗುತ್ತೇನೆ ಎಂದರ್ಥವಲ್ಲ. ನನಗೆ ಇದರಲ್ಲಿ ನಂಬಿಕೆ ಇಲ್ಲ. ಪ್ರತಿಯೊಬ್ಬರೂ ವೈಯಕ್ತಿಕವಾಗಿ ಅವರ ಧರ್ಮವನ್ನು ಪಾಲಿಸಬೇಕು. ಆದರೆ ಅಲ್ಲಿ ಅಗೌರವ ಇರಲೇಬಾರದು. ಹಾಗೆಯೇ ಶಾರುಖ್ ಕೂಡ ನನ್ನ ಧರ್ಮವನ್ನು ಎಂದೂ ಅಗೌರವಿಸಿಲ್ಲ’ ಎಂದು ಗೌರಿ ಹೇಳಿದ್ದಾರೆ.
‘ದುರದೃಷ್ಟವಶಾತ್ ಶಾರುಖ್ಗೆ ಅಪ್ಪ-ಅಮ್ಮ ಇಲ್ಲ. ನಿಜಕ್ಕೂ ಅವರಿದ್ದಿದ್ದರೆ ಆ ಹಿರಿಯರು ಮನೆಯನ್ನು ನೋಡಿಕೊಳ್ಳುತ್ತಿದ್ದರು. ಹಾಗಾಗಿ ಅವರ ಧರ್ಮದ ಆಚರಣೆ ಮಾಡಲಾಗುತ್ತಿತ್ತು. ಆದರೆ ನಮ್ಮ ಮನೆಯಲ್ಲಿ ಆ ರೀತಿ ಇಲ್ಲ. ಹೋಳಿ, ದೀಪಾವಳಿ ಹೀಗೆ ಎಲ್ಲ ಹಬ್ಬದ ಜವಾಬ್ದಾರಿಯನ್ನು ನಾನೇ ನೋಡಿಕೊಳ್ಳುತ್ತೇನೆ. ಹೀಗಾಗಿ ನಮ್ಮ ಮಕ್ಕಳು ಹಿಂದು ಮತ್ತು ಮುಸ್ಲಿಂ ಎರಡೂ ಧರ್ಮವನ್ನು ಪಾಲಿಸುತ್ತಾರೆ. ಆರ್ಯನ್ ಮುಸ್ಲಿಂ ಧರ್ಮವನ್ನು ಪಾಲಿಸುತ್ತಾನೆ, ನಾನು ಮುಸ್ಲಿಂ ಅಂತ ಹೇಳುತ್ತಾನೆ. ಆಗ ನಾನು ಇದರರ್ಥ ಏನು ಅಂತ ಕೇಳ್ತೀನಿ’ ಎಂದು ಗೌರಿ ಹೇಳಿದ್ದಾರೆ.