ನಟ ಚಿರಂಜೀವಿ ನಮ್ಮನೆಲ್ಲ ಅಗಲಿ ೧೫ ದಿನಗಳು ಕಳೆದಿದೆ. ಮೇಘನಾ ರಾಜ್ ಪತಿ ಚಿರಂಜೀವಿ ನೆನಪಿನಲ್ಲಿಯೆ ದಿನಕಳೆಯುತ್ತಿದ್ದಾರೆ. ಚಿರು ಇಲ್ಲದ ನೋವಿನಲ್ಲಿಯೆ ಇತ್ತೀಚಿಗೆ ತುಂಬಾ ಭಾವುಕವಾದ ಬಹರವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು. ಇದಾದ ಬಳಿಕ ಮೇಘನಾ ಚಿರು ನೆನಪಲ್ಲಿ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ.ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕೇವಲ ಮೇಘನಾ ರಾಜ್ ಅಂತ ಮಾತ್ರ ಇತ್ತು. ಆದರೆ ಇತ್ತೀಚಿಗೆ ಹೆಸರನ್ನು ಎಡಿಟ್ ಮಾಡಿ ಸರ್ಜಾ ಕುಟುಂಬದ ಸರ್ ನೇಮ್ ಅನ್ನು ಸೇರಿಸಿಕೊಂಡಿದ್ದಾರೆ. ಈಗ ಮೇಘನಾ ಹೆಸರು ಮೇಘನಾ ರಾಜ್ ಸರ್ಜಾ ಎಂದಾಗಿದೆ. ಚಿರಂಜೀವಿ ಹೆಸರನ್ನು ಸಹ ಶಾಶ್ವತವಾಗಿ ಜೊತೆಯೆ ಇಟ್ಟುಕೊಂಡಿದ್ದಾರೆ. ಈಗ ಮೇಘನಾ ಫೇಸ್ ಬುಕ್ ಪ್ರೊಫೈಲ್ ಅನ್ನು ಬದಲಾಯಿಸಿಕೊಂಡಿದ್ದಾರೆ.