Friday, July 1, 2022

Latest Posts

ಪತ್ತೆಯಾಯಿತು ಬರೋಬ್ಬರಿ ಐದು ಸಾವಿರ ವರ್ಷ ಹಳೆಯ ಮದ್ಯ ಘಟಕ!!

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಬರೋಬ್ಬರಿ ಐದು ಸಾವಿರ ವರ್ಷ ಹಳೆಯ ಮದ್ಯ ಘಟಕವೊಂದನ್ನು ಈಜಿಪ್ಟ್‌ನ ಪುರಾತತ್ವ ಇಲಾಖೆ ಪತ್ತೆಹಚ್ಚಿದೆ.
ಪ್ರಾಚೀನ ನಗರವಾದ ಅಬಿಡೋಸ್‌ನಲ್ಲಿ ವಿಶ್ವದ ಈ ಅತ್ಯಂತ ಹಳೆಯ ಸಾಮೂಹಿಕ ಮದ್ಯ ಉತ್ಪಾದನಾ ಘಟಕವನ್ನು ಶೋಧಿಸಲಾಗಿದ್ದು, ಈ ಬಗ್ಗೆ ಅಧ್ಯಯನಗಳು ಮುಂದುವರಿದಿವೆ. ಈ ಮದ್ಯ ಘಟಕವು ಸಮಾಧಿ ಸ್ಥಳದಲ್ಲಿ ಪತ್ತೆಯಾಗಿದೆ ಎಂದು ಅಲ್ಲಿನ ಪ್ರವಾಸಿ ಇಲಾಖೆ ಸಚಿವಾಲಯ ಮಾಹಿತಿ ನೀಡಿದೆ.
ಈ ಎಲ್ಲ ಮಾಹಿತಿಗಳನ್ನು ಈಜಿಪ್ಟ್‌ನ ಪ್ರವಾಸೋದ್ಯಮ ಇಲಾಖೆ ಸಚಿವಾಲಯವು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದೆ.  ಉತ್ತರ ಅಡೋಬೊಸ್‌ನ ಈ ಪುರಾತನ ತಾಣದಲ್ಲಿ 40 ಮಣ್ಣಿನ ಪಾತ್ರೆಗಳನ್ನು ಕೂಡಾ ಗುರುತಿಸಲಾಗಿದೆ. ಈ ಮದ್ಯ ಸಂಗ್ರಹಣಾ ಘಟಕವು 5 ಸಾವಿರ ವರ್ಷಗಳ ಹಿಂದೆ ಈಜಿಪ್ಟ್‌ನ್ನು ಆಳಿದ ನಾರ್ಮನ್ ರಾಜನ ಯುಗಕ್ಕೆ ಸೇರಿದ್ದು ಎಂದು ಪ್ರಾಥಮಿಕ ಅಧ್ಯಯನಗಳಲ್ಲಿ ಅಂದಾಜಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss