ಹೊಸದಿಗಂತ ಆನ್ ಲೈನ್ ಡೆಸ್ಕ್:
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ ಮತ್ತು ಮಗಳು ವಮಿಕಾಳ ಫೋಟೋಗಳನ್ನು ಪೋಸ್ಟ್ ಮಾಡಿ ಶುಭಾಶಯ ಕೋರಿದ್ದಾರೆ.
ಮಗುವಿನ ಜನನವನ್ನು ನೋಡುವುದು ಮನುಷ್ಯನಿಗೆ ನಂಬಲಾಗದ ಮತ್ತು ಅದ್ಭುತ ಅನುಭವವಾಗಿದೆ. ತಾಯಿಯಾದ ನಂತರ ಮಹಿಳೆಯರ ನಿಜವಾದ ಶಕ್ತಿ ಮತ್ತು ದೈವತ್ವ ಅರ್ಥವಾಗುತ್ತದೆ. ದೇವರು ಅವರೊಳಗೆ ಒಂದು ಜೀವನವನ್ನು ಏಕೆ ಸೃಷ್ಟಿಸಿದನೆಂದು ಅರ್ಥಮಾಡಿಕೊಳ್ಳಿ. ಮಹಿಳೆಯರು ಪುರುಷರಿಗಿಂತ ಹೆಚ್ಚು ಶಕ್ತಿಶಾಲಿ ಎಂದು ಕೊಹ್ಲಿ ತಿಳಿಸುವ ಮೂಲಕ ಅಂತಾರಾಷ್ಟ್ರೀಯ ಮಹಿಳಾ ದಿನದ ಪ್ರಯುಕ್ತ ವಿಶ್ವದ ಎಲ್ಲಾ ಮಹಿಳೆಯರಿಗೂ ಶುಭಾಶಯ ಕೋರಿದ್ದಾರೆ.
ಪತ್ನಿ ಅನುಷ್ಕಾ ಶರ್ಮಾರನ್ನು ಶಕ್ತಿಶಾಲಿ ಮಹಿಳೆಯರಲ್ಲಿ ಒಬ್ಬರು ಎಂದು ಬಣ್ಣಿಸಿರುವ ಕೊಹ್ಲಿ, ಮಗಳು ವಮಿಕಾ ಕೂಡ ಅವಳ ತಾಯಿಯಂತಾಗಬೇಕೆಂದು ಹೇಳಿಕೊಂಡಿದ್ದಾರೆ.
ಕೊಹ್ಲಿ ಈ ಪೋಸ್ಟ್ ಗೆ ಮೆಚ್ಚುಗೆ ವ್ಯಕ್ತವಾಗಿದೆ. ಅನೇಕ ಸೆಲೆಬ್ರಿಟಿಗಳು ಕೊಹ್ಲಿ ಪೋಸ್ಟ್ ಗೆ ಕಮೆಂಟ್ ಮಾಡಿದ್ದಾರೆ. ಕೊಹ್ಲಿ,ಅನುಷ್ಕಾರನ್ನು ಹೊಗಳಿದ್ದು ಇದೇ ಮೊದಲಲ್ಲ. ಅನೇಕ ಸಂದರ್ಭದಲ್ಲಿ ಕೊಹ್ಲಿ,ಅನುಷ್ಕಾ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
https://www.instagram.com/p/CMJZFGpF-E0/?utm_source=ig_embed