Wednesday, June 29, 2022

Latest Posts

ಪತ್ರಕರ್ತಗೆ ಪಾಸಿಟಿವ್: ಕಾಸರಗೋಡು ಜಿಲ್ಲಾಧಿಕಾರಿ, ಚಾಲಕ ಹಾಗೂ ಗನ್ ಮ್ಯಾನ್ ಗೆ ಕ್ವಾರಂಟೈನ್

ಮಂಗಳೂರು: ಕಾಸರಗೋಡು ಜಿಲ್ಲಾಧಿಕಾರಿ ಡಾ. ಡಿ. ಸಜಿತ್ ಬಾಬು ಅವರ ಚಾಲಕ ಹಾಗೂ ಗನ್ ಮ್ಯಾನ್ ಕ್ವಾರಂಟೈನ್ ಗೆ ಒಳಗಾಗಿದ್ದಾರೆ.
ಸಂದರ್ಶನ ನಡೆಸಿದ್ದ ಪತ್ರಕರ್ತ
ಬುಧವಾರ ಬಂದ ವೈದ್ಯಕೀಯ ವರದಿಯಲ್ಲಿ ಕಾಸರಗೋಡಿನ ದೃಶ್ಯ ಮಾಧ್ಯಮದ ಪತ್ರಕರ್ತರೊಬ್ಬರಲ್ಲಿ ಸೋಂಕು ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಕೊರೋನಾ ಸೋಂಕು ಪತ್ತೆಯಾಗಿರುವ ಪತ್ರಕರ್ತ ಕೆಲವು ದಿನಗಳ ಹಿಂದೆ ಜಿಲ್ಲಾಧಿಕಾರಿ ಅವರ ಸಂದರ್ಶನ ನಡೆಸಿದ್ದರು. ಹೀಗಾಗಿ ಮುಂಜಾಗೃತ ಕ್ರಮವಾಗಿ ಡಾ. ಡಿ. ಸಜಿತ್ ಬಾಬು ಅವರು ನಿಗಾದಲ್ಲಿರಲು ತೀರ್ಮಾನಿಸಿದ್ದಾರೆ ಎಂದು ವರದಿಗಳು ಹೇಳಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss