Wednesday, August 17, 2022

Latest Posts

ಪತ್ರಕರ್ತ ಅರ್ನಬ್ ಗೋಸ್ವಾಮಿ ಬಂಧನಕ್ಕ ವಿರೋಧ: ಮಹಾರಾಷ್ಟ್ರ ಸರ್ಕಾರದ ವಿರುದ್ಧ ಯುವ ಮೋರ್ಚಾ ಪ್ರತಿಭಟನೆ

ದಿಗಂತ ವರದಿ, ಚಿಕ್ಕಮಗಳೂರು:

ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಅವರನ್ನು ಬಂಧಿಸಿರುವ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಆಜಾದ್ ಪಾರ್ಕ್‍ನಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಸಂದೀಪ್ ಹರವಿನಗಂಡಿ, ಮಹರಾಷ್ಟ್ರ ಸರ್ಕಾರ ಅರ್ನಬ್ ಅವರನ್ನು ಬಂಧಿಸುವ ಮೂಲಕ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮವನ್ನು ನಿರ್ಬಂಧಿಸಲು ಹೊರಟಿದೆ. ಅಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಒಬ್ಬ ರಾಷ್ಟ್ರ ಮಟ್ಟದ ಪತ್ರಕರ್ತನ ಮನೆಗೆ ನುಗ್ಗಿದ ಪೋಲೀಸರು, ಅವರನ್ನು ಸೇರಿದಂತೆ ಅವರ ಮನೆಯವರಿಗೆಲ್ಲ ಹಲ್ಲೆ ನಡೆಸಿದ್ದು. ಇದು ಮಹಾರಾಷ್ಟ್ರ ಸರ್ಕಾರದ ಗೂಂಡಾ ಪ್ರವೃತ್ತಿಯನ್ನು ತೋರಿಸುತ್ತದೆ. ಅನೇಕ ವರ್ಷಗಳ ಹಿಂದಿನ ವಿಷಯವನ್ನಿಟ್ಟುಕೊಂಡು ಈ ಸಂಧರ್ಭದಲ್ಲಿ ಬಂಧಿಸಿರುವುದು ಖಂಡನೀಯ. ಇದು ಮಹಾರಾಷ್ಟ್ರ ಸರ್ಕಾರದ ಅವನತಿಯನ್ನು ತೋರುತ್ತಿದೆ ಎಂದರು.
ಮಹಾರಾಷ್ಟ್ರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ದೇಶದ್ರೋಹಿಗಳನ್ನು ರಕ್ಷಿಸುವಂತಹ ಕಾರ್ಯ ಸದ್ದಿಲ್ಲದೇ ನಡೆಯುತ್ತಿದೆ. ಕೂಡಲೇ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಿ, ಗೂಂಡಾ ಸರ್ಕಾರದಿಂದ ಜನಸಾಮನ್ಯರನ್ನು ರಕ್ಷಿಸಬೇಕೆಂದು ಬಿಜೆಪಿ ಯುವಮೋರ್ಚಾ ಆಗ್ರಹಿಸುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಪ್ರ. ಕಾರ್ಯದರ್ಶಿ ಸಂತೋಷ್ ಕೋಟ್ಯಾನ್, ಗ್ರಾಮಾಂತರ ಮಂಡಲ ಅಧ್ಯಕ್ಷರದ ಯತೀಶ್, ನಗರ ಮಂಡಲ ಕಾರ್ಯದರ್ಶಿಗಳದ ನವೀನ್, ಪುನೀತ್ ಹಾಗೂ ಜಿಲ್ಲಾ ಉಪಧ್ಯಕ್ಷ ಜೀವನ್, ಕಾರ್ಯದರ್ಶಿಗಳಾದ ಶಶಿ ಆಲ್ದೂರು, ಕೌಶಿಕ್ ಮತ್ತು ಇತರರು ಭಾಗವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!