Wednesday, August 10, 2022

Latest Posts

ಪತ್ರಿಕೋದ್ಯಮಕ್ಕೆ ಹೊಸ ದಿಕ್ಕು ಕೊಟ್ಟಂತಹ ವ್ಯಕ್ತಿ ರವಿ ಬೆಳೆಗೆರೆ: ಶಾಸಕ ಸಿ.ಟಿ.ರವಿ

ಹೊಸ ದಿಗಂತ ವರದಿ, ಚಿಕ್ಕಮಗಳೂರು:

ಪತ್ರಕರ್ತ ರವಿ ಬೆಳೆಗೆರೆ ಅಗಲಿಕೆ ಪತ್ರಿಕಾ ಕ್ಷೇತ್ರ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ದೊಡ್ಡ ನಷ್ಟ ಉಂಟುಮಾಡಿದೆ ಎಂದು ಶಾಸಕ ಸಿ.ಟಿ.ರವಿ ತಿಳಿಸಿದರು.
ಬಹುಮುಖ ವ್ಯಕ್ತಿತ್ವವನ್ನು ಹೊಂದಿದ್ದ, ಪತ್ರಿಕೋದ್ಯಮಕ್ಕೆ ಹೊಸ ದಿಕ್ಕು ಕೊಟ್ಟಂತಹ ವ್ಯಕ್ತಿ ಅವರಾಗಿದ್ದರು. ತನ್ನ ಬರವಣಿಗೆ ಮೂಲಕ ಓದುಗರನ್ನು ಸೆಳೆಯುವ ಸಾಮಥ್ರ್ಯ ಹೊಂದಿದ್ದರು. ಅವರ ಮೊನಚಿನ ಲೇಖನಿ ಎಂತಹವರನ್ನೂ ಸೆಳೆಯುತ್ತಿತ್ತು ಇಂತಹ ಪತ್ರಕರ್ತನನ್ನು ಕಳೆದುಕೊಂಡಿದ್ದೇವೆ ಎಂದರು.
ಹೊಸ ಪರಿಭಾಷೆಯ ಮೂಲಕ ಜನರಲ್ಲಿ ಜಾಗೃತಿ, ಎಚ್ಚರಿಕೆಯನ್ನು ಮೂಡಿಸುವಲ್ಲಿ ಯಶಸ್ಸಾಗಿದ್ದರು. ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಬರೆದ ಲೇಖನದಂತಹ ಅವರ ಅನುಭವದ ಲೇಖನಗಳು, ಯೂಟೂಬ್ ಇನ್ನಿತರೆ ಸಾಮಾಜಿಕ ಜಾಲ ತಾಣಗಳ ಮೂಲಕ ಅವರು ನೀಡುತ್ತಿದ್ದ ವಿಶ್ಲೇಷಣೆಗಳು ಕೂಡ ಹೆಚ್ಚು ಹೆಚ್ಚು ಕೇಳುಗರು, ನೋಡುಗರನ್ನು ಸೃಷ್ಟಿಸಿತ್ತು. ಅವರ ಅಗಲಿಕೆ ದೊಡ್ಡ ನಷ್ಟವನ್ನುಂಟುಮಾಡಿದೆ ಎಂದು ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss