Friday, July 1, 2022

Latest Posts

ಪದವೀಧರ ಮತದಾರರು ಗುರಿಕಾರಗೆ ಬೆಂಬಲಿಸಲಿ: ವಿಪ ಸದಸ್ಯ ಬಸವರಾಜ ಹೊರಟ್ಟಿ ಮನವಿ

ಧಾರವಾಡ: ಕರ್ನಾಟಕ ವಿಧಾನ ಪರಷತ್ತಿನ ಪಶ್ಚಿಮ ಪದವೀಧರರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರ ಹೋರಾಟಗಾರ. ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡುವಂತೆ ವಿಧಾನ ಪರಿಷತ್ತಿನ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಮತದಾರರಲ್ಲಿ ಮನವಿ ಮಾಡಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರಣಾಂತರಗಳಿಗೆ ಜೆಡಿಎಸ್ ಅಭ್ಯರ್ಥಿಯನ್ನು ನಾಲ್ಕು ಜಿಲ್ಲೆಗಳ ಅಧ್ಯಕ್ಷರು ಹಾಗೂ ಮುಖಂಡರ ಸಮ್ಮತಿ ಮೇರೆಗೆ ಕಣದಲ್ಲಿ ತಟಸ್ಥ ಉಳಿಸಿದ್ದು, ಪಕ್ಷೇತರ ಅಭ್ಯರ್ಥಿ ಗುರಿಕಾರಗೆ ಬೆಂಬಲಸುವ ನಿರ್ಧರಿಸಿದೆಂದು ಹೇಳಿದರು.
ಜೆಡಿಎಸ್ ಅಭ್ಯರ್ಥಿಗೆ ಕಲ್ಲೂರು ಅಸಮಾಧನವಾಗಿಲ್ಲ. ಅವರು ಗುರಿಕಾರ ಬೆಂಬಲಸಿದ್ದಾರೆ. ಪದವೀಧರ ಚುನಾವಣೆಯಲ್ಲಿ ಪಕ-ಜಾತಿ ಪರಿಗಣೆಗೆ ಬರುವುದಿಲ್ಲ. ವ್ಯಕ್ತಿ-ವ್ಯಕ್ತಿತ್ವ ಪರಿಗಣಿಸಲ್ಪಡುತ್ತದೆ. ನಾವೆಲ್ಲ ಬಸವ ತತ್ವದವರು. ಹೀಗಾಗಿ ವ್ಯಕ್ತಿ ನೋಡಿಯೇ ಬೆಂಬಲಿಸಿದೆ ಎಂದರು.
ಮoತ್ರಿ-ಶಾಸಕರನ್ನೋ, ಪಕ್ಷ ನೋಡಿ ಮತ ಹಾಕೋವವರು ಕಡಿಮೆ. ಅನುಕಂಪದಿoದ ಮತ ಪಡೆಯಲ್ಲ. ಹೀಗಾಗಿ ಗುರಿಕಾರ ಪರ ಅಲೆ ಕ್ಷೇತ್ರದಲ್ಲಿದ್ದು, ಪಕ್ಷ ಮತ್ತು ಜಾತಿ ಅಲೆಯ ಪ್ರಭಾವ ಆಗಲಿರುವ ಈ ಚುನಾವಣೆಯಲ್ಲಿ ಗುರಿಕಾರ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದರು.
ಗುರಿಕಾರ ಹೋರಾಟಗಾರ. 25-30 ವರ್ಷಗಳಿಂದ ಶಿಕ್ಷಕರ ಸಮುದಾಯಕ್ಕೆ ಶ್ರಮಿಸಿದ ವ್ಯಕ್ತಿ ಹಾಗೂ ಕೆಲಸಗಾರ. ಸದ್ಯ ೪ ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದು, ಪದವೀಧರರು, ಸರ್ಕಾರಿ ನೌಕರರು, ಶಿಕ್ಷಕರಿಂದ ಬಸವರಾಜ ಗುರಿಕಾರ ಪರ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.
ಇನ್ನೂ ಬಸವರಾಜ ಗುರಿಕಾರರಿಗೆ ಪಕ್ಷದಿಂದ ಯಾವುದೇ ಷರತ್ತು ಹಾಕಿಲ್ಲ. ಹಾಕುವುದೂ ಇಲ್ಲ. ಇದರಿಂದ ಮುಂದಿನ ಹೋರಾಟಕ್ಕೆ ಅನುಕೂಲ ಆಗಲಿದೆ. ಬಿಜೆಪಿ ಪ್ರೊ. ಸಂಕನೂರ ಹಾಗೂ ಕಾಂಗ್ರೆಸ್‌ನ ಡಾ. ಕುಬೇರಪ್ಪ ಅವರಿಗಿಂತ ಬಸವರಾಜ ಗುರಿಕಾರ ಉತ್ತಮ ವ್ಯಕ್ತಿ ಎಂದರು.
ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರ ಮಾತನಾಡಿ, ಜೆಡಿಎಸ್ ಬೆಂಬಲ ವ್ಯಕ್ತಪಡಿಸಿದ್ದಕ್ಕೆ ಧನ್ಯವಾದ. ಕ್ಷೇತ್ರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚುನಾವಣೆಯಲ್ಲಿ ಗೆಲುವಿನ ನಿರೀಕ್ಷೆ ಇದೆ. ಪದವೀಧರರು ವಿಚಾರ ಮಾಡಿ, ಸೇವೆ ಮಾಡುವ ಭಾಗ್ಯ ಕರಣಿಸುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ರಾಜಣ್ಣ ಕೊರವಿ, ಗುರುರಾಜ ಹುಣಸಿಮರ, ಗಂಗಾಧರ ಮಠ, ಸಿದ್ದು ತೇಜ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss