Wednesday, June 29, 2022

Latest Posts

ಪದೇ ಪದೇ ಮೂತ್ರ ವಿಸರ್ಜನೆಗೆ ಹೋಗುವ ಸಮಸ್ಯೆ ಇದೆಯೇ? ಹಾಗಾದರೆ ಮಿಸ್ ಮಾಡದೇ ಈ ಮನೆಮದ್ದು ಟ್ರೈ ಮಾಡಿ…

ಕೆಲವರಿಗೆ ಪದೇ ಪದೇ ಬಾತ್ ರೂಮ್’ಗೆ ಹೋಗುವಂತಾಗುತ್ತದೆ. ಮೂತ್ರ ತಡೆದುಕೊಳ್ಳಲು ಆಗುವುದಿಲ್ಲ.  15 ನಿಮಿಷಕ್ಕೊಮ್ಮೆಯಾದರೂ ಹೋಗಲೇಬೇಕು ಎನಿಸುತ್ತದೆ. ಈ ರೀತಿ ಸಮಸ್ಯೆ ಎದುರಾದರೆ ಟ್ರಾವೆಲ್ ಮಾಡುವಾಗ, ಕಚೇರಿಗಳಲ್ಲಿ ಕೆಲಸಮಾಡುವಾಗ ಬಹಳ ಕಷ್ಟವೆನಿಸುತ್ತದೆ. ಪದೇ ಪದೇ ಬಾತ್’ರೂಮ್’ಗೆ ಹೋಗುವ ಅಭ್ಯಾಸದಿಂದ ತುಂಬಾ ಸಲಿ ನಗೆಪಾಟಲುಗೀಡಾಗುವ ಸಾಧ್ಯತೆ ಇರುತ್ತದೆ. ಇಂಥ ಸಮಸ್ಯೆಗೆ ಇಲ್ಲಿದೆ ಸಿಂಪಲ್ ಮನೆಮದ್ದು…

ತುಳಸಿ-ಜೇನುತುಪ್ಪ:
ಒಂದು ಚಮಚ ತುಳಸಿ ರಸ, ಒಂದು ಚಮಚ ಜೇನು ತುಪ್ಪವನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಈ ಸಮಸ್ಯೆಗೆ ಪರಿಹಾರ ಸಿಗುತ್ತದೆ.

ಮೊಸರು:
ನೀವು ಸೇವಿಸುವ ಆಹಾರದಲ್ಲಿ ಮೊಸರು ಇರಲಿ. ಹೆಚ್ಚಾಗಿ ಮೊಸರನ್ನು ಸೇವಿಸಿವಿಸಿದರೆ ಪದೇ ಪದೇ ಮೂತ್ರಕ್ಕೆ ಹೋಗುವ ಸಮಸ್ಯೆ ನಿಯಂತ್ರಣಕ್ಕೆ ಬರುತ್ತದೆ.

ದ್ರವಾಹಾರ:
ನಿಮ್ಮ ದೇಹದ ತೂಕಕ್ಕೆ ಅನುಗುಣವಾಗಿ ನೀರನ್ನು ಸೇವಿಸಿ.  ಅಧಿಕ ಪ್ರಮಾಣದಲ್ಲಿ ನೀರನ್ನು ಸೇವಿಸಬೇಡಿ. ಮಲಗುವ ಮೊದಲು ನೀರನ್ನು ಸೇವಿಸಬೇಡಿ. ಇದರಿಂದ ರಾತ್ರಿ ವೇಳೆ ಪದೇ ಪದೇ ಮೂತ್ರಕ್ಕೆ ಹೋಗುವಂತಾಗುತ್ತದೆ. ನಿದ್ದೆ ಸರಿಯಾಗಿ ಆಗುವುದಿಲ್ಲ.

ದಾಳಿಂಬೆ:
ದಾಳಿಂಬೆ ಹಣ್ಣಿನ ಸಿಪ್ಪೆಗಳನ್ನು ಪೇಸ್ಟ್ ಮಾಡಿಕೊಂಡು ಅದನ್ನು ನೀರಿಗೆ ಸೇರಿಸಿಕೊಂಡು ಕುಡಿಯಬೇಕು. ಹೀಗೆ ಮಾಡುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ.

ಮೆಂತ್ಯ:
ಮೆಂತ್ಯವನ್ನು ಪುಡಿ ಮಾಡಿಕೊಂಡು ಅದನ್ನು ಒಂದು ಚಮಚ ಜೇನುತುಪ್ಪ ಮತ್ತು ಶುಂಠಿ ರಸದೊಂದಿಗೆ ಸೇವಿಸುವುದರಿಂದ ಈ ಸಮಸ್ಯೆ ನಿವಾರಣೆಯಾಗುತ್ತದೆ.

ನೇರಳೆ:
ನೇರಳೆ ಹಣ್ಣಿನ ರಸವನ್ನು ನೀರಿನೊಂದಿ ಖಾಲಿ ಹೊಟ್ಟೆಯಲ್ಲಿ ಬೆಳಿಗ್ಗೆ ಸೇವಿಸುವುದರಿಂದ ಪದೇ ಪದೇ ಮೂತ್ರಕ್ಕೆ ಹೋಗುವ ಸಮಸ್ಯೆ ನಿವಾರಣೆಯಾಗುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss